ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಪ್ರತಿಯೊಬ್ಬರ ತಟ್ಟೆಗೆ ಆಹಾರ: ಶಬಾನಾ
ಸುದ್ದಿ/ಗಾಸಿಪ್
Feedback Print Bookmark and Share
 
22ರಿಂದ 26ನೇ ಸೆಪ್ಟೆಂಬರ್‌ವರೆಗೆ ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಮುಖ್ಯ ಕಚೇರಿಯಲ್ಲಿ ಆಹಾರಕ್ಕಾಗಿ ಶಬಾನಾ ಮೊರೆ ಇಡಲಿದ್ದಾರೆ. ಅವರಿಗೆ ಅಂತಹ ದಾರಿದ್ರ್ಯವೇನೂ ಬಂದಿಲ್ಲ. ಆಹಾರಕ್ಕಾಗಿ ಮೊರೆ ಇಡುತ್ತಿರುವುದು ಇಡೀ ಜಗತ್ತಿನ ಜನರ ಸಲುವಾಗಿ. ಶಬಾನಾ ಜತೆ ವಿಶ್ವಾದ್ಯಂತ ಹಲವಾರು ಖ್ಯಾತ ಕಾರ್ಯಕರ್ತರು ಸೇರಲಿದ್ದಾರೆ.

ಈ ಕಾರ್ಯಕರ್ತರಲ್ಲಿ ಬ್ರೆಜಿಲ್ ಪ್ರಧಾನ ಮಂತ್ರಿ ಮತ್ತು ನೈಜೀರಿಯಾದ ನಟ ಕೂಡ ಸೇರಿದ್ದಾರೆ. ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಶಬಾನಾ, ಆಹಾರವನ್ನು ಪ್ರತಿಯೊಬ್ಬರ ತಟ್ಟೆಯಲ್ಲಿ ನಾವು ಹಾಕಬೇಕಾಗಿದೆ.

ವಿಶ್ವಸಂಸ್ಥೆ ಪ್ರಧಾನ ಸಭೆಯಲ್ಲಿ 2015ರೊಳಗೆ ಜಗತ್ತಿನ ಹಸಿವನ್ನು ನೀಗುವುದಾಗಿ ಆಶ್ವಾಸನೆ ನೀಡಿತ್ತು. ಆದರೆ ಈ ಗುರಿಯಲ್ಲಿ ಶೇ. 5ರಷ್ಟೂ ಈಡೇರಿಲ್ಲ. ವಿಶ್ವಾದ್ಯಂತ ಆಗಮಿಸಿದ ನಮ್ಮೆಲ್ಲರದ್ದೂ "ಪ್ರತಿಯೊಬ್ಬರ ತಟ್ಟೆಗೆ ಆಹಾರ ಹಾಕಿ" ಎನ್ನುವುದು ಒಂದೇ ಮಂತ್ರ.

ಸರ್ವರಿಗೂ ತಿನ್ನಲು ಆಹಾರ ಸಿಗದಿದ್ದಾಗ ನಾವು ಹೇಗೆ ಪ್ರಗತಿ ಸಾಧಿಸುತ್ತೇವೆಂದು ಅವರು ಪ್ರಶ್ನಿಸಿದರು. ನಿಜ ಸಂಗತಿಯೇನೆಂದರೆ ಈಗಲೂ ಜನರು ಹಸಿವಿನಿಂದ ಸಾಯುತ್ತಿದ್ದಾರೆಂದು ಶಬಾನಾ ಹೇಳಿದರು.