ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » 'ಏಕಲವ್ಯ'ದ ಅದೃಷ್ಟದಲ್ಲಿ ಸಂಶಯ
ಸುದ್ದಿ/ಗಾಸಿಪ್
Feedback Print Bookmark and Share
 
ತೀರ್ಪುಗಾರರ ಸಮಿತಿಯ ಸದಸ್ಯರರೊಬ್ಬರು ಈ ಸಿನಿಮಾದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣದಿಂದ ಏಕಲವ್ಯ ಹಿಂದಿ ಚಲನ ಚಿತ್ರ, ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶ ಪಡೆಯುವುದು ಸಂಶಯವೆನಿಸಿದೆ.

ಉತ್ತಮ ವಿದೇಶ ಚಿತ್ರಗಳ ಗುಂಪಿನಲ್ಲಿ ಸ್ಪರ್ಧಿಸಲು ಏಕಲವ್ಯ ಸಿನಿಮಾ ಅಥವಾ ಬೇರೆ ಸಿನಿಮಾವನ್ನು ಆಯ್ಕೆ ಮಾಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ತೀರ್ಪುಗಾರರ ಸಮಿತಿಯು ಸಭೆ ಸೇರಿತಾದರೂ, ಈ ವಿಚಾರದಲ್ಲಿ ತೀರ್ಪುಗಾರರು ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.

ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಏಕಲವ್ಯ ಪ್ರಶಸ್ತಿಯ ವಿದೇಶ ವಿಭಾಗದಲ್ಲಿ ಸ್ಪರ್ಧಿಸುತ್ತದೆ ಅಥವಾ ಇಲ್ಲವೊ ಎನ್ನುವುದರ ಬಗ್ಗೆ ತೀರ್ಪು ಮಂಡಳಿ ಮುಖ್ಯಸ್ಥ ಮತ್ತು ಚಲನ ಚಿತ್ರ ಮಂಡಳಿ ಅದ್ಯಕ್ಷ ವಿನೋದ್ ಪಾಂಡೆ ಅವರು ಖಚಿತ ಪಡಿಸಿಲ್ಲ.

ಭಾವನಾ ತಲ್ವಾರ್ ನಿರ್ಮಾಣದ "ಧರ್ಮ" ಚಿತ್ರವನ್ನು ಆಯ್ಕೆ ಮಂಡಳಿ ಈ ಮೊದಲು ಅಂತಿಮ ಪಟ್ಟಿಗೆ ಸೇರಿಸಿತ್ತು, ಭಾವನಾ ತಲ್ವಾರ್ ಅವರು ಆಸ್ಕರ್ ಪ್ರಶಸ್ತಿಗೆ ಚಿತ್ರದ ಆಯ್ಕೆಯಲ್ಲಿ ಪಕ್ಷಪಾತ ಎಸಗಲಾಗಿದೆ ಎಂದು ದೂರು ದಾಖಲಿಸಿದ್ದಾರೆ.ತೀರ್ಪುಗಾರರ ಸಮಿತಿಯ ಸದಸ್ಯ ರಂಜಿತ್ ಬಹಾದ್ದೂರ್, ಏಕಲವ್ಯ ಮತ್ತು ಲಗೆ ರಹೋ ಮುನ್ನಾಬಾಯ್ ಸಿನಿಮಾದ ಸಂಪಾದಕ ಆಗಿದ್ದಾರೆ ಎಂದು ತಲ್ವಾರ್ ಅವರ ವಕೀಲರು ಆರೋಪಿಸಿದ್ದಾರೆ.