ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಕೌಟುಂಬಿಕ ಹಿಂಸೆಗೆ ಸಿಕ್ಕಿದ ರಿತುಪರ್ಣ ಸೇನ್
ಸುದ್ದಿ/ಗಾಸಿಪ್
Feedback Print Bookmark and Share
 
ಕರಣ್ ರಾಜ್ಡಾನ್‌ರ ಮಿಟ್ಟಲ್ ವರ್ಸಸ್ ಮಿಟ್ಟಲ್‌ನಲ್ಲಿ ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾದ ಹೆಣ್ಣಿನ ಪಾತ್ರವನ್ನು ರಿತುಪರ್ಣ ಸೇನ್ ಗುಪ್ತಾ ಬಿಂಬಿಸಲಿದ್ದಾರೆ. ರೋಹಿತ್ ರಾಯ್ ರಿತು ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ.ಮಿಟ್ಟಲ್ ವರ್ಸಸ್ ಮಿಟ್ಟಲ್ ಚಿತ್ರವು ಮಹಿಳೆಯೊಬ್ಬಳ ಜೀವನವು ಮದುವೆಯಾದ ಕೂಡಲೇ 360 ಡಿಗ್ರಿ ತಿರುವು ಪಡೆಯುವುದನ್ನು ತೋರಿಸಿದೆ.

ತನ್ನನ್ನು ಪ್ರೀತಿಸಿದ ಹುಡುಗನನ್ನು ಬಿಟ್ಟು ವ್ಯವಸ್ಥಿತ ವಿವಾಹವಾಗಬೇಕೆಂಬ ಅವಳ ಬಯಕೆ ನುಚ್ಚುನೂರಾಗುತ್ತದೆ. ಇಂತಹ ಸೂಕ್ಷ್ಮ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕಾಗಿ ಹೆಮ್ಮೆ ಪಟ್ಟುಕೊಳ್ಳುವ ಆಕೆ " ನನ್ನ ಪಾತ್ರವು ಸರಳ ಮಹಿಳೆಯ ಪಾತ್ರವಾಗಿದ್ದು, ಮಾನಸಿಕವಾಗಿ ಮತ್ತು ದೈಹಿಕ ಅಸ್ವಸ್ಥ ಪುರುಷನ ಜತೆ ವಿವಾಹದಲ್ಲಿ ಅಂತ್ಯಗೊಂಡು ಅವನು ನನ್ನನ್ನು ಲೈಂಗಿಕ ಶೋಷಣೆಗೆ ಗುರಿಪಡಿಸುತ್ತಾನೆಂದು ಹೇಳಿದಳು.

ತನ್ನ ಗಂಡನ ಮನೆಯವರಿಂದ ತೀವ್ರ ಹಿಂಸೆ ಅನುಭವಿಸಿದ ಆಕೆ ಯಾತನಾಮಯ ಬದುಕಿನಿಂದ ನೊಂದು ತನ್ನ ಪತಿಯ ಕುಟುಂಬದವರ ವಿರುದ್ಧ ದಾವೆ ಹೂಡಿದ ಬಳಿಕ ಅದರಲ್ಲಿ ಜಯಶಾಲಿಯಾಗುತ್ತಾಳೆ. ಸುಚಿತ್ರಕೃಷ್ಣಮೂರ್ತಿ ರಿತು ವಕೀಲ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗುಲ್ಶನ್ ಗ್ರೋವರ್ ಮತ್ತು ರೀಮಾ ರಾಘವ್ ಸಹ ಚಿತ್ರದಲ್ಲಿದ್ದಾರೆ.