ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಲಂಡನ್‌ನಲ್ಲೂ ಸವಾರಿಯ ಸಂಗೀತದ ಕ್ರೇಜ್
ಸುದ್ದಿ/ಗಾಸಿಪ್
Feedback Print Bookmark and Share
 
ರಿಷಿಕಪೂರ್ ಪುತ್ರ ರಣಬೀರ್ ರಾಜ್ ಕಪೂರ್ ಮತ್ತು ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಅಭಿನಯದ ಸವಾರಿಯ ಚಿತ್ರದ ಸಂಗೀತ ಸಿಡಿಗಳು ಬ್ರಿಟನ್ ಅಂಗಡಿಗಳಿಗೆ ಕಳೆದ ವಾರ ಲಗ್ಗೆ ಹಾಕಿದ್ದು ಲಂಡನ್‌ನಲ್ಲಿ ವಾಸವಿರುವ ಸ್ಥಳೀಯರಲ್ಲಿ ಸಂಭ್ರಮ ಉಂಟುಮಾಡಿದೆ.

ಟಿಪ್ ಟಾಪ್ ಎಂಟರ್‌ಟೇನ್‌ಮೆಂಟ್‌ನ ಚಿರಾಗ್ ಹೇಳುವುದೇನೆಂದರೆ ಇದೊಂದು ಅಪರೂಪದ ವಿದ್ಯಮಾನ. ಸವಾರಿಯ ವರದ ರೂಪದಲ್ಲಿ ಬಂದಿದೆ. ಸಿಡಿಗಳ ಮುಂಗಡ ಬುಕಿಂಗ್‌ಗೆ ನಮಗೆ ಫೋನ್ ಕರೆಗಳು ಬರುತ್ತಲೇ ಇವೆ. ಆಲ್ಬಮ್‌ನ ಹಾಡುಗಳು ಡಿವಿಡಿ ಮತ್ತು ಸಂಗೀತ ಸ್ಟೋರ್‌ಗಳಲ್ಲಿ ಮಾತ್ರ ಕ್ರೇಜ್ ಹುಟ್ಟಿಸಿಲ್ಲ. ಅವನ್ನು ರೆಸ್ಟೊರೆಂಟ್‌ಗಳಲ್ಲಿ ಮತ್ತು ಸಿಹಿ ಅಂಗಡಿಗಳಲ್ಲಿ ಕೂಡ ಕೇಳಬಹುದಾಗಿದೆ.

ವೀಲ್ಡ್‌ಸ್ಟೋನ್ ಟ್ಯೂಬ್ ಸ್ಟೇಷನ್ ಬಳಿ ನೂತನವಾಗಿ ಆರಂಭವಾದ ಬಾಬು ರೆಸ್ಟೊರೆಂಟ್ ಸವಾರಿಯಾ ಮ್ಯೂಸಿಕ್‌ನಿಂದ ಲಾಭ ಪಡೆಯುತ್ತಿದೆ. ಬಾಬು ರೆಸ್ಟೊರೆಂಟ್ ಮಾಲೀಕ ಮುಖದೇಶ್ ಹೇಳುವುದನ್ನು ಕೇಳಿ" ಇಂತಹ ಮಹಾನ್ ಸಂಗೀತದ ಚಿತ್ರವನ್ನು ತಯಾರಿಸಲು ನಿಮಗೆ ಹೇಗೆ ಸಾಧ್ಯವಾಯಿತು ಎಂದು ಸಂಜಯ್ ಲೀಲಾ ಬನ್ಸಾಲಿಯನ್ನು ಕೇಳಬಯಸುತ್ತೇನೆ.

ನಾವು ಗ್ರಾಹಕರಿಗೆ ಪ್ರತಿಬಾರಿ ಸೌಂಡ್‌ಟ್ರಾಕ್ ಹಾಕಿದಾಗಲೆಲ್ಲ ಮೆನುನಲ್ಲಿ ಏನಿದೆ ಎಂದು ಕೇಳುವ ಬದಲಿಗೆ ಯಾವ ಹಾಡಿನ ಸಂಗೀತವೆಂದು ಅವರು ಕೇಳಲು ಬಯಸುತ್ತಿರುವುದು ಸವಾರಿಯ ಸಂಗೀತ ಅಷ್ಟೊಂದು ಉನ್ಮಾದ ಸೃಷ್ಟಿಸಿದ್ದರ ದ್ಯೋತಕವಾಗಿದೆ.