ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಜಿಯಾ ತಾಳಕ್ಕೆ ಕುಣಿಯುತ್ತಿರುವ ಶಾಹಿದ್
ಸುದ್ದಿ/ಗಾಸಿಪ್
Feedback Print Bookmark and Share
 
ಈ ಮುದ್ದಿನ ಬಾಲಿವುಡ್ ನಟ ಅದೆಷ್ಟು ಹುಡುಗಿಯರ ಜತೆ ಚೆಲ್ಲಾಟವಾಡುತ್ತಾನೆ ಎಂದು ನೀವು ಕೇಳಬಹುದು. ಇತ್ತೀಚೆಗೆ ಬಂದ ಸುದ್ದಿಯ ಪ್ರಕಾರ ಶಾಹಿದ್ ಜೀವನದಲ್ಲಿ ಬಂದ ಹೊಚ್ಚ ಹೊಸ ಹಾಟ್ ಲೇಡಿ ಜಿಯಾ ಖಾನ್.

ಜಿಯಾ ಖಾನ್ ತಾಳ ಹಾಕುತ್ತಾಳಂತೆ. ಅದಕ್ಕೆ ತಕ್ಕನಾಗಿ ಶಾಹಿದ್ ಕಪೂರ್ ಕುಣಿಯುತ್ತಿದ್ದಾನಂತೆ. ಹಾಗಾದರೆ ನೃತ್ಯದಲ್ಲಿ ಮೈಮರೆತಾಗ ಲಯ ತಪ್ಪದಿರಲು ಸಾಧ್ಯವೇ ಇಲ್ಲ. ಏನಂತೀರಿ!

ಹಾಗಾಗಲು ಇಲ್ಲಿ ಸಾಧ್ಯವಿಲ್ಲ. ಬಿಡಿ.. ಯಾಕೆಂದರೆ ಇದನ್ನೆಲ್ಲ ಮಾಡಿಸುತ್ತಿರುವವರು ನಿರ್ದೇಶಕ ಕೆನ್ ಘೋಷ್ ತಮ್ಮ 'ಯಾಹೂ' ಚಿತ್ರಕ್ಕಾಗಿ. ಇಲ್ಲಿ ಶಾಹಿದ್ ಕಪೂರ್ ಶಿಷ್ಯ, ಜಿಯಾಖಾನ್ ಗುರು. ಹಾಗಂತ ಇದು ಗುರು-ಶಿಷ್ಯರ ಪವಿತ್ರ ಸಂಬಂಧ ವಿವರಿಸುವ ಚಿತ್ರವಾಗಿರಲಿಕ್ಕಿಲ್ಲ. ಕಾಲ ಕಾಲಕ್ಕೆ ಟ್ರೆಂಡ್ ಬದಲಾದಂತೆ ಈಗಿರುವ ಗುರು-ಶಿಷ್ಯರ ಟ್ರೆಂಡ್‌ಗೆ ಹೊಂದಿಕೊಳ್ಳುವ ಸಂದೇಶ ಸಿನಿಮಾದಲ್ಲಿರಬಹುದು.

ಅಂದ ಹಾಗೆ ಇವರಿಬ್ಬರ ಜೋಡಿ ತೆರೆಯ ಮೇಲೆ ಬರುತ್ತಿರುವುದು ಇದೇ ಮೊದಲ ಬಾರಿ. 'ನಿಶ್ಯಬ್ಧ್'ನಲ್ಲಿ ಅಜ್ಜ ಅಮಿತಾಬ್ ಜತೆ ಹಾಟ್ ಹಾಟ್ ಆಗಿ ಕಾಣಿಸಿಕೊಂಡದ್ದು ಎಲ್ಲರಿಗೂ ಗೊತ್ತು. ಅದರ ನಂತರ ಹೆಚ್ಚೂ ಕಡಿಮೆ ಜಿಯಾ ಖಾಲಿ ಬಿದ್ದಿದ್ದಳು- ಇತ್ತೀಚೆಗೆ ಬಿಡುಗಡೆಯಾದ 'ಗಜನಿ' ಹೊರತು ಪಡಿಸಿ.

"ಈ ಸುಂದರ ಪ್ರೇಮಕಥೆಯಲ್ಲಿ ನನ್ನದು ನೃತ್ಯ ನಿರ್ದೇಶಕಿಯ ಪಾತ್ರ. ಶಾಹಿದ್ ಅದ್ಭುತ ಡ್ಯಾನ್ಸರ್ ಪಾತ್ರ ಮಾಡುತ್ತಿದ್ದಾರೆ. ನಾನು ಶಾಹಿದ್‌ಗೆ ಡ್ಯಾನ್ಸ್ ಹೇಳಿಕೊಡುವವಳು. ನಾನು ಆರರ ಹರೆಯದಿಂದ ನೃತ್ಯ ಮಾಡುತ್ತಿರುವುದರಿಂದ ನನಗೆ ಡ್ಯಾನ್ಸ್ ಬಗ್ಗೆ ಗೊತ್ತು" ಎಂದು ಜಿಯಾ ಹೇಳಿಕೊಂಡಿದ್ದಾಳೆ.

ಇಷ್ಕ್ ವಿಷ್ಕ್ ಮ‌ೂಲಕ ಬಾಲಿವುಡ್ ಪಯಣ ಆರಂಭಿಸಿದ ನಟನೆಯಲ್ಲಿ ಶಾರೂಖ್ ಖಾನ್‌ರನ್ನು ಹೋಲುವ ಶಾಹಿದ್ ಕಪೂರ್ ಕೆಲವು ಅವಿಸ್ಮರಣೀಯ ಚಿತ್ರಗಳನ್ನೂ ನೀಡಿದ್ದಾರೆ. ವಿವಾಹ್, ಜಬ್ ವಿ ಮೆಟ್, ಕಿಸ್ಮತ್ ಕನೆಕ್ಷನ್‌ನಲ್ಲಿನ ಕ್ಯೂಟ್ ಬಾಯ್ ಮುಂದಿನ ಚಿತ್ರ ಸಾಕಷ್ಟು ಕುತೂಹಲ ಕೆರಳಿಸಿದೆ.

ಚಿತ್ರ: ಹಾಟ್ ಜಿಯಾ ಖಾನ್
ಹಾಟ್ ಜಿಯಾ ಖಾನ್...
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಿಯಾ ಖಾನ್, ಶಾಹಿದ್ ಕಪೂರ್, ಬಾಲಿವುಡ್, ನಟ