ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಕಿಸ್ಸರ್ ಬಾಯ್ ಹಶ್ಮಿಗೆ ಪತ್ನಿಯಿಂದ ಕಪಾಳಮೋಕ್ಷ!
ಸುದ್ದಿ/ಗಾಸಿಪ್
Feedback Print Bookmark and Share
 
IFM
ಬಾಲಿವುಡ್‌ನ ಚೆಂದದ ನಟೀಮಣಿಯರ ತುಟಿಗೆ ತುಟಿ ಸೇರಿಸಿ ಲೊಚಲೊಚನೆ ಕಿಸ್ಸು ಕೊಟ್ಟು ಬಾಲಿವುಡ್ ಅಂಗಳದಲ್ಲಿ ತನ್ನ ತುಟಿಗಳ ಸಾಮರ್ಥ್ಯ ಪ್ರದರ್ಶಿಸಿದ, ಪ್ರದರ್ಶಿಸುತ್ತಿರುವ ನಟ ಯಾರೆಂದರೆ ಪ್ರೈಮರಿ ಶಾಲೆಯ ಹುಡುಗನೂ ಉತ್ತರ ಕೊಟ್ಟಾನು. ಅಂತಹ ಕಿಸ್ವೀರ, ಸೀರಿಯಲ್ ಕಿಸ್ಸರ್ ಬಾಯ್ ಎಂದೇ ಕರೆಯಲ್ಪಡುವ ಇಮ್ರಾನ್ ಹಶ್ಮಿ ಎಂದು. ಪ್ರ(ಕು)ಖ್ಯಾತಿಯ ಉತ್ತುಂಗಕ್ಕೇರಿದ ಇಂತಿಪ್ಪ ಇಮ್ರಾನ್ ಹಶ್ಮಿಯ ಭಾಗ್ಯ ಕಂಡು ಉಳಿದವರೆಲ್ಲ `ಯಾರಿಗುಂಟು ಯಾರಿಗಿಲ್ಲ' ಎಂದು ಅರ್ಧರಾತ್ರಿಗಳಲ್ಲಿ ಪಿಟೀಲು ಬಾರಿಸುತ್ತಿದ್ದರೆ, ಪಾಪ ಅತ್ತ ಹಶ್ಮಿ ತನ್ನ ಪತ್ನಿ ಪರ್ವೀನ್ ಕೈಯಿಂದ ಪೆಟ್ಟು ತಿಂದಿದ್ದಾನಂತೆ!

ಬಾಪ್‌ರೇ‍! ಅಂತ ನೀವು ಹುಬ್ಬೇರಿಸಿದರೆ ಇದು ಪಕ್ಕಾ ಸತ್ಯವೆಂದು ಬಾಲಿವುಡ್ ಅಂಗಳದಲ್ಲೆಲ್ಲಾ ಗುಲ್ಲೋ ಗುಲ್ಲು. ಜತೆಗೆ ತಾನು ಪೆಟ್ಟು ಕೊಟ್ಟಿದ್ದನ್ನು ಹಶ್ಮಿಯ ಎದುರಲ್ಲೇ ಪತ್ನಿ ಪರ್ವೀನ್ ಒಪ್ಪಿಕೊಂಡಿದ್ದಾಳಂತೆ.

ಮೊದಲಿನಿಂದಲೂ ತುಟಿಗೆ ತುಟಿ ಸೇರಿಸಿ ಚಪ್ಪರಿಸಿ ಕಿಸ್ಸು ಕೊಟ್ಟೂ ಅಭ್ಯಾಸವಾಗಿ ಹೋದ ಇಮ್ರಾನ್ ಜತೆಗೆ ಅಭಿನಯಕ್ಕೆ ನಟೀಮಣಿಯರ ದಂಡೇ ಇತ್ತು. ಹೀಗೆ ಹ್ಯಾಪಿ ಆಗಿದ್ದ ಸೀರಿಯಲ್ ಕಿಸ್ಸರ್ ಬಾಯ್ ಕೆಲ ಸಮಯಗಳ ಹಿಂದೆಯೇ `ಮದುವೆಯ ನಂತರ ಯಾರಿಗೂ ಕಿಸ್ ಕೊಡುವುದಿಲ್ಲ. ಅದೇನಿದ್ದರೂ ತನ್ನ ಹೆಂಡತಿಗೆ ಮಾತ್ರವೇ ಸೀಮಿತ' ಅಂತ ಘಂಟಾಘೋಷವಾಗಿ ಹೇಳಿದ್ದ. ಆದರೆ, 'ಹುಟ್ಟು ಗುಣ ಘಟ್ಟ ಹತ್ತಿದರೂ ಬಿಡುವುದಿಲ್ಲ' ಅಂತಾರಲ್ಲ, ಹಾಗೆ ಇಮ್ರಾನ್ ಪರ್ವೀನಳನ್ನು ಕಟ್ಟಿಕೊಂಡ ಮೇಲೂ ಮೇಲಿಂದ ಮೇಲೆ ಕಿಸ್ಸು ಕೊಡುತ್ತಲೇ ಬಂದ. ಪರಿಣಾಮ ಹೆಂಡತಿಯಿಂದ ತುಟಿಗೆ ಬಿಡಿ, ಕೆನ್ನೆಗೂ ಕಿಸ್ಸು ಸಿಗಲಿಲ್ಲವಂತೆ. ಬದಲಾಗಿ ಹಲವಾರು ಬಾರಿ ಕಪಾಳಮೋಕ್ಷವಾಗಿದೆಯಂತೆ.

IFM
ಕಾಕತಾಳೀಯವೆಂಬಂತೆ, ಈ ಹಶ್ಮಿಯ ಕಿಸ್ಸು ಪುರಾಣವಿಲ್ಲದ ಸಿನಿಮಾ ಜಪ್ಪಯ್ಯ ಅಂದರೂ ಓಡುವುದೇ ಇಲ್ಲವಂತೆ. ಹೀಗಾಗಿ ಆತ ಕಿಸ್ಸನ್ನು ಬಿಟ್ಟಿಲ್ಲವಂತೆ ಎಂಬ ಅಂತೆಕಂತೆಗಳು ಹರಿದಾಡುತ್ತಿವೆ. ಆದರೆ, ಈತನ ಕಿಸ್ಸಿಂಗ್ ಸೀನ್ ಇಲ್ಲದ ಸಿನಿಮಾದಲ್ಲಿ ಕಥೆಯೂ ಚೆನ್ನಾಗಿರಲಿಲ್ಲ ಅನ್ನೋದನ್ನು ವಿವರಿಸಿ ಹೇಳಬೇಕಾಗಿಲ್ಲ ಬಿಡಿ.

ಅಂದಹಾಗೆ, ಹಶ್ಮಿ ಇತ್ತೀಚೆಗೆ ಸಿನಿಮಾ ಮ್ಯಾಗಜಿನ್ ಒಂದಕ್ಕೆ ತನ್ನ ಹೆಂಡತಿಯೊಂದಿಗೆ ನೀಡಿದ ಸಂದರ್ಶನದಲ್ಲಿ ಹಶ್ಮಿ ತನ್ನ ಹೆಂಡತಿಯಿಂದ ಮುಖಕ್ಕೆ ಮಂಗಳಾರತಿ ಮಾಡಿದ್ದನ್ನು ತನ್ನ ಹೆಂಡತಿಯೆದುರೇ ಬಿಚ್ಚಿಟ್ಟಿದ್ದಾನೆ. ಪಕ್ಕದಲ್ಲಿದ್ದ ಹೆಂಡತಿ ಇದನ್ನು ಕೇಳಿ ಕಿಸಕ್ಕಂತ ನಕ್ಕಿದ್ದಾಳಂತೆ. ಈ ಇಬ್ಬರು ದಂಪತಿಗಳ ಮುಖವೂ ಆಗ ಕೆಂಪುಕೆಂಪಗೆ ಆಯಿತಂತೆ.

"ಕಿಸ್ಸಿಂಗ್ ಸೀನ್‌ನ ಟ್ರಯಲ್ ಅನ್ನು ನೋಡಿದರೆ, ಪರ್ವೀನ್‌ಗೆ ಹೊಟ್ಟೆ ಉರಿಯುತ್ತದೆ. ಎಷ್ಟೋ ಬಾರಿ ಇನ್ನು ಸ್ಕ್ರೀನ್‌ನಲ್ಲಿ ಮುತ್ತು ಕೊಡಬೇಡ ಅಂತ ಪರ್ವೀನ್ ಹೇಳಿದ್ದಾಳೆ. ನಾನು ಬಿಡಬೇಕು ಎಂದರೂ ಅದು ನನ್ನನ್ನು ಬಿಡುತ್ತಿಲ್ಲವಲ್ಲ" ಅಂತ ಹಶ್ಮಿ ರಾಗ ಎಳೆದಿದ್ದಾನೆ. ಜತೆಗೆ "ಕಿಸ್ಸಿಂಗ್ ಸೀನ್ ಮುಗಿಸಿ ಮನೆಗೆ ಮರಳಿದಾಗ ಎಷ್ಟೋ ಬಾರಿ ಹೆಂಡತಿಯಿಂದ ಪೆಟ್ಟು ತಿಂದಿದ್ದೇನೆ" ಎನ್ನುವಾಗ ಹಶ್ಮಿ ತನ್ನ ಹೆಂಡತಿಯೆಡೆಗೆ ನೋಡಿ ತನ್ನ ಕೆನ್ನೆ ಸವರುತ್ತಾನೆ. ಇಷ್ಟೆಲ್ಲ ಇದ್ದರೂ, ಈ ಹಶ್ಮಿ ದಂಪತಿಗಳು ಹ್ಯಾಪಿಯಾಗಿದ್ದಾರಂತೆ. ಜನ್ನತ್, ರಾಝ್ ಮೂಲಕ ಈಗ ಮತ್ತೆ ಪ್ರಸಿದ್ಧಿಯಲ್ಲಿರುವ ಹಶ್ಮಿಗೆ ತನ್ನ ಪತ್ನಿಯೆಂದರೆ ಭಾರೀ ಪ್ರೀತಿಯಂತೆ. ಪರ್ವೀನ್‌ಗೂ. ಎಲ್ಲವೂ ಹಶ್ಮಿಯ ಕಿಸ್ಸು ಮಹಿಮೆಯೇ ಇರಬೇಕು ಅಂತೀರಾ...
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇಮ್ರಾನ್ ಹಶ್ಮಿ, ಪರ್ವೀನ್ ಹಶ್ಮಿ, ರಾಝ್, ಜನ್ನತ್