ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅನಾಗರಿಕವಾಗಿ ವರ್ತಿಸಿದ ಸೈಫ್- ಕರೀನಾ
ಸುದ್ದಿ/ಗಾಸಿಪ್
Feedback Print Bookmark and Share
 
IFM
ಬಾಲಿವುಡ್‌ನ ಹಾಟ್ ಜೋಡಿ ಕರೀನಾ ಹಾಗೂ ಸೈಫ್ ಅಲಿ ಖಾನ್ ಮೊನ್ನೆ ಮೊನ್ನೆ ನಡೆದ ಫಿಲಂಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅನಾಗರಿಕವಾಗಿ ವರ್ತಿಸುವ ಮೂಲಕ ಎಲ್ಲರ ಟೀಕೆಗೆ ಗುರಿಯಾದರು. ಕರೀನಾರ ಮಾಜಿ ಪ್ರಿಯಕರ ಶಾಹಿದ್ ಕಪೂರ್ ಪ್ರಶಸ್ತಿ ಸಮಾರಂಭದಲ್ಲಿ ತನ್ನ ಡ್ಯಾನ್ಸ್ ಪ್ರದರ್ಶನ ನೀಡಲು ವೇದಿಕೆ ಹತ್ತಿದ್ದೇ ತಡ ಈ ಇಬ್ಬರು ಹಾಟ್ ಜೋಡಿಗಳು ದಿಗ್ಗನೆ ಸಭೆಯಿಂದ ಎದ್ದು ಹೊರನಡೆದೇ ಬಿಟ್ಟರು!

ವಿಚಿತ್ರ ನಡವಳಿಕೆಗಳಿಂದ ಬಾಲಿವುಡ್‌ನಲ್ಲಿ ಖ್ಯಾತಿವೆತ್ತಿದ್ದ ಸೈಫ್ ಆಲಿ ಖಾನ್ ಜತೆ ಸೇರಿ ಕರೀನಾಳೂ ಹೀಗೇ ಆಗಿಬಿಟ್ಟಳಾ ಅಂತ ಜನ ಮಾತಾಡಿಕೊಂಡರೂ ಕರೀನಾ ಕ್ಯಾರೇ ಅನ್ನಲಿಲ್ಲವಂತೆ. ಸೈಫ್ ಜತೆಗೆ ಪ್ರತಿಯೊಂದು ಸಮಾರಂಭವನ್ನು ಎಂಜಾಯ್ ಮಾಡುವ ಆಕೆಗೆ ಎದ್ದು ಹೋಗಲು ಏನು ಪ್ರೇರಣೆ ನೀಡಿತೋ ಗೊತ್ತಿಲ್ಲ. ಆದರೆ, ಅತ್ತ ವೇದಿಕೆಯಲ್ಲಿ ಕರೀನಾ-ಸೈಫ್ ಜೋಡಿ ಹೀಗೆ ಎಲ್ಲರು ನೋಡುನೋಡುತ್ತಿದ್ದಂತೆಯೇ ಎದ್ದು ಹೊರನಡೆದುದನ್ನಶಾಹಿದ್ ಕೂಡಾ ಗಮನಿಸಿದ್ದ. ತನ್ನ ಡ್ಯಾನ್ಸ್ ಶೋ ನಡೆದ ತಕ್ಷಣ ಏಟು ತಿಂದಂತೆ ಮುಖ ಬಾಡಿಸಿ ಈತನೂ ಹೊರಗೆ ನಡೆದ. "ಪಾಪ ಶಾಹಿದ್!" ಅಂತ ಎಲ್ಲರೂ ಶಾಹಿದ್ ಎಡೆಗೊಂದು ಅನುಕಂಪದ ದೃಷ್ಟಿ ಬೀರಿದರಂತೆ.

IFM
ಜಬ್ ವಿ ಮೆಟ್ ಚಿತ್ರವೇನೋ ಹಿಟ್ ಪಟ್ಟಕ್ಕೇರಿತು. ಆದರೆ ಶಾಹಿದ್ ತನ್ನ ಕರೀನಾಳ ಸಂಬಂಧ ಹಾಳಾಯ್ತಲ್ಲ ಅಂತ ಎಷ್ಟೋ ಮಧ್ಯರಾತ್ರಿಗಳಲ್ಲಿ ಮುಖೇಶರ ಹಾಡುಗಳನ್ನು ಕೇಳುತ್ತಾ ವಿರಹ ವೇದನೆಯನ್ನು ಮರೆಯಲು ಯತ್ನಿಸಿದ್ದನಂತೆ. ಸ್ವಲ್ಪ ದಿನ ಇಶ್ಕ್ ವಿಶ್ಕ್‌ನ ಅಮೃತಾ ರಾವ್, ನಂತರ ಕಿಸ್‌ಮತ್ ಕನೆಕ್ಷನ್‌ ಸಂದರ್ಭ ವಿದ್ಯಾ ಬಾಲನ್ ಆತನ ಲವ್ ಫೈಲ್ಯೂರ್‌ಗೆ ಸಾಂತ್ವನ ನೀಡಿದರಂತೆ. ಟೆನಿಸ್ ತಾರೆ ಸಾನಿಯಾ ಮಿರ್ಜಾ ಜತೆಗೂ ಸ್ವಲ್ಪ ದಿನ ಗಾಸಿಪ್‌ಗೆ ಆಹಾರವಾಗಿದ್ದ ಶಾಹಿದ್ ಆಗಾಗ ತನ್ನ ಕರೀನಾ ಸಂಬಂಧ ಸರಿಹೋಗುತ್ತೆ ಅಂತನೇ ನಿದ್ರೆಯಲ್ಲೂ ಕನವರಿಸುತ್ತಿದ್ದನಂತೆ. ನಂತರ ಅದೇನು ಕಿಸ್ಮತ್ ಕನೆಕ್ಷನ್ನು ಇತ್ತೋ ಗೊತ್ತಿಲ್ಲ, `ಜತೆಗೆ ಮತ್ತೆ ನಟಿಸುವುದೇ ಇಲ್ಲ' ಅಂತ ಠೂ ಬಿಟ್ಟಿದ್ದ ಕರೀನಾ ಮತ್ತೆ ಶಾಹಿದ್ ಜತೆಗೆ ನಟಿಸಲು ಬೋನಿ ಕಪೂರ್ ಅವರ ಮಿಲೇಂಗೇ ಮಿಲೇಂಗೇಗೆ ಸಹಿ ಹಾಕಿದಳು. ಮಿಲೇಂಗೇಯಿಂದಾದರೂ ಈ ಮಾಜಿ ಜೋಡಿಗಳ ಮಿಲನವಾಗುತ್ತದೋ ಅಂತ ಬಾಲಿವುಡ್ ಮಂದಿ ಶಬರಿ ಕಾದಂತೆ ಕಾದಿರುವುದೇ ಬಂತು. ಅಷ್ಟರಲ್ಲಾಗಲೇ, ಸೈಫ್ ಜತೆಗೆ ಕರೀನಾ ಈ ರೀತಿಯ ಒರಟು ವರ್ತನೆ ತೋರಿದ್ದಾಳೆ.

ಕೆಲವೇ ದಿನಗಳ ಹಿಂದಷ್ಟೆ ಮಿಲೇಂಗೇಯಿಂದಾಗಿ ಕರೀನಾ ಮತ್ತೆ ತನ್ನ ತೆಕ್ಕೆಗೆ ಬರುತ್ತಾಳೆ ಎಂಬ ಉತ್ಸಾಹದಿಂದ ತಾನು `ಕರೀನಾ ಮತ್ತೆ ಗೆಳೆಯರಾಗಿದ್ದೇವೆ' ಎಂದು ಶಾಹಿದ್ ಕಂಡಕಂಡಲ್ಲೆಲ್ಲಾ ಹೇಳಿಕೊಂಡಿದ್ದ. ಕರೀನಾ ಜತೆಗಿನ ಪ್ರೀತಿಯ ನೆನಪುಗಳನ್ನು ಯಾವತ್ತೂ ನನ್ನೆದೆಯಲ್ಲಿ ಮಾಸುವುದಿಲ್ಲ ಎಂದೂ ಹೇಳಿ ಎಲ್ಲರಿಂದ ಸಿಂಪಥಿ ಗಿಟ್ಟಿಸಿಕೊಂಡಿದ್ದ. ತನ್ನ ಲವರ್ ಬಾಯ್ ಇಮೇಜ್ ತಕ್ಕಂತೆ ನಡೆದಕೊಳ್ಳುತ್ತಲೇ ಇದ್ದ ಈ ಚಾಕಲೇಟು ಸುಂದರಾಂಗ ಈಗ ಮಾತ್ರ ತಲೆಗೆ ಕೈಹೊತ್ತು ಕುಳಿತಿದ್ದಾನಂತೆ. ಆದರೆ, ಇತ್ತ ಕರೀನಾ ಸೈಫ್ ಜೋಡಿ ಎಲ್ಲ ಸಮಾರಂಭಗಳಲ್ಲೂ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. "ನನ್ನಂತಹುದೇ ವ್ಯಕ್ತಿತ್ವ ಸೈಫ್‌ದೂ ಕೂಡಾ. ನನ್ನ ಬಗ್ಗೆ ಅತೀವ ಕಾಳಜಿ ವಹಿಸುವ ಸೈಫ್ ತನ್ನ ಜೀವನದಲ್ಲಿ ನನಗೋಸ್ಕರ ಹಲವು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾನೆ. ನಾನು ಅವನೊಂದಿಗೆ ಖುಷಿಯಾಗಿದ್ದೇನೆ" ಎಂದು ತನ್ನ ಮಾದಕ ಝೀರೋ ಫಿಗರ್ ಬಳುಕಿಸುತ್ತಾ ನಗೆ ಚೆಲ್ಲುತ್ತಾಳೆ. ಪಾಪ ಶಾಹಿದ್‌ಗೆ ಹೇಗಾಗಬೇಡ..! ಮಿಲೇಂಗೆಯಲ್ಲಾದರೂ ಹೀಗೆ ಮುನಿಸಿ ಬೆಂಚ್ ತುದಿಯಲ್ಲಿ ಕುಳಿತ ಶಾಹಿದ್‌ನನ್ನು ಕರೀನಾ ಸಂತೈಸುವಳೋ ಏನೋ ಎಂಬ ಕುತೂಹಲ ಈಗ ಬಾಲಿವುಡ್ ಅಂಗಳದಲ್ಲಿದೆ.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕರೀನಾ ಕಪೂರ್, ಸೈಫ್ ಆಲಿ ಖಾನ್, ಶಾಹಿದ್ ಕಪೂರ್, ಫಿಲಂಫೇರ್ ಪ್ರಶಸ್ತಿ