ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಫ್ರೀದಾ ಅಮೆರಿಕದ `ಎಸ್ಟೀ ಲಾಡರ್' ರೂಪದರ್ಶಿ?
ಸುದ್ದಿ/ಗಾಸಿಪ್
Feedback Print Bookmark and Share
 
IFM
ಕೇವಲ 15 ನಿಮಿಷ ಒಂದು ಸಿನಿಮಾದ ತೆರೆಯಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಇಷ್ಟೆಲ್ಲ ಅವಕಾಶಗಳು ಹುಡುಕಿಕೊಂಡು ಬರುತ್ತದೋ ಎಂದು ಆಶ್ಚರ್ಯವಾದರೆ ಅದು ನಿಮ್ಮ ತಪ್ಪಲ್ಲ ಬಿಡಿ. ಕೆಲವರಿಗೆ ಅದೆಲ್ಲಿಂದ ಅದೃಷ್ಟ ಅರಸಿಕೊಂಡು ಬರುತ್ತದೋ ಗೊತ್ತಿಲ್ಲ. ಎಲ್ಲರಂತಿದ್ದ, ಮುಂಬೈಯ ಲೋಕಲ್ ರೈಲಿನಲ್ಲಿ ಎಲ್ಲರಂತೆ ಪ್ರಯಾಣಿಸಿದ್ದ, ತನ್ನ ಬೆಂಗಳೂರಿನ ಪ್ರಿಯಕರನೊಂದಿಗೆ ಸಾರ್ವಜನಿಕರ ಮಧ್ಯದಲ್ಲೇ ಹಲವು ಸಂಜೆಗಳಲ್ಲಿ ತನ್ನ ಲವ್‌ಲೈಫನ್ನು ಎಂಜಾಯ್ ಮಾಡುತ್ತಿದ್ದ, ಎಲ್ಲೋ ಆಗೊಮ್ಮೆ ಈಗೊಮ್ಮೆ ಮಾಡೆಲ್ ಆಗಿ ಬಳುಕಿದ್ದ ಈ ಪಕ್ಕದ್ಮನೆ ಫ್ರೀದಾ ಪಿಂಟೋ ಎಂಬ ಸ್ಲಂ ಸುಂದರಿ ಈಗ ರಾತ್ರಿ ಬೆಳಗಾಗುವುದರೊಳಗೆ ಜಗದೇಕ ಸುಂದರಿಯಾಗಿಬಿಟ್ಟಿದ್ದಾಳೆ!

ಆಸ್ಕರ್ ಕಿರೀಟವನ್ನು `ಸ್ಲಂ' ತೊಡುತ್ತಿದ್ದಂತೆ, ಫ್ರೀದಾ ಪಿಂಟೋ ಪ್ರತಿ ಹೆಜ್ಜೆಗೂ ಬೆಲೆ ಬರತೊಡಗಿತು. ಇದೀಗ ಅಂತಾರಾಷ್ಟ್ರೀಯ ಕಾಸ್ಮೆಟಿಕ್ ಮಾರುಕಟ್ಟೆಯಲ್ಲಿ ತನ್ನ ವಿಶಾಲ ಬಾಹುಗಳನ್ನು ಚಾಚಿರುವ ದೈತ್ಯ ಕಂಪನಿ `ಎಸ್ಟೀ ಲಾಡರ್‌'ನ ತನ್ನ ಉತ್ಪನ್ನಗಳಲ್ಲಿ ಫ್ರೀದಾ ಮುಖವೇ ಕಾಣಲಿದೆಯಂತೆ! ಅರ್ಥಾತ್ ಎಸ್ಟೀ ಲಾಡರ್‌ಗೆ ರೂಪದರ್ಶಿ. ಈಗಾಗಲೇ ಹೀಗೊಂದು ರೂಮರ್ ಎಲ್ಲೆಡೆ ಹರಡಿಕೊಂಡಿದೆ.

IFM
ಇದು ಹೌದಾದರೆ, ಎಸ್ಟೀ ಲಾಡರ್‌ನಂತಹ ಬಹುದೊಡ್ಡ ಸಂಸ್ಥೆಗೆ ಬ್ರಾಂಡ್ ಅಂಬಾಸಿಡರ್ ಆದ ಏಕೈಕ ಭಾರತೀಯ ಎಂಬ ಖ್ಯಾತಿಯೂ ಈ ಸ್ಲಂ ಸುಂದರಿಗೆ ದಕ್ಕುತ್ತದೆ. ಈಗಾಗಲೇ ಎಸ್ಟೀ ಜತೆ ಮಾತುಕತೆಯೂ ನಡೆದಿದೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಫ್ರೀದಾರ ಭಾರತೀಯ ವಕ್ತಾರರೂ ಇದನ್ನು ತಳ್ಳಿ ಹಾಕುವುದಿಲ್ಲ. ಆದರೆ ಎಸ್ಟೀ ಲಾಡರ್ ಈವರೆಗೆ ಈ ಬಗ್ಗೆ ಏನನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

1946ರಲ್ಲಿ ಸ್ಥಾಪನೆಯಾದ ಎಸ್ಟೀ ಲಾಡರ್ ಸಂಸ್ಥೆ ಈಗ ಅಮೆರಿಕದ ಪ್ರಸಾಧನ (ಕಾಸ್ಮೆಟಿಕ್) ಕ್ಷೇತ್ರದ ಬಹುದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಇದು ಪುರುಷರ ಹಾಗೂ ಮಹಿಳೆಯರ ಸ್ಕಿನ್ ಕೇರ್ ಹಾಗೂ ಹೇರ್ ಕೇರ್ ಉತ್ಪನ್ನಗಳ ಜತೆಗೆ ಕಾಸ್ಮೆಟಿಕ್ ಹಾಗೂ ಸುಗಂಧ ದ್ರವ್ಯಗಳನ್ನೂ ಉತ್ಪಾದಿಸುತ್ತದೆ. ಅಮೆರಿಕದ ಸೂಪರ್ ಮಾಡೆಲ್ ಹಿರಲಿ ರೋಡಾ, ಖ್ಯಾತ ನಟಿ ಗ್ವೇನೆಥ್ ಪಾಟ್ರೋ, ಅಮೆರಿಕದ ಸೆಕ್ಸೀ ಕ್ವೀನ್ ಎಲಿಝಬೆತ್ ಹುರ್ಲೇಯಂಥವರು ಎಸ್ಟೀ ಲಾಡರ್‌ಗೆ ರೂಪದರ್ಶಿಗಳಾಗಿದ್ದರು. ಈಗ ಆ ಅವಕಾಶ ಫ್ರೀದಾ ಪಾಲಿಗೆ ಬಂದಿದೆ.

ಈ ಸ್ಲಂ ಸುಂದರಿ ಫ್ರೀದಾ ಈಗ ತುಂಬ ಬ್ಯುಸಿ. ಈಗಷ್ಟೇ ಇಟಲಿಯಲ್ಲಿ ಮಿಲನ್ ಫ್ಯಾಷನ್ ವೀಕ್‌ನಲ್ಲಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿರುವ ಜತೆಗೆ ಹಾಲಿವುಡ್‌ನಲ್ಲಿ ವುಡಿ ಅಲೆನ್ ಸಿನಿಮಾದಲ್ಲಿ ನಟಿಸಲು ಆಫರ್ ಗಿಟ್ಟಿಸಿಕೊಂಡಿದ್ದಾಳೆ. ಅಲ್ಲದೆ, ಎಂಟರ್‌ಟೈನ್ಮೆಂಟ್ ವೀಕ್ಲೀ, ವ್ಯಾನಿಟಿ ಫೇರ್, ಮ್ಯಾಕ್ಸಿಮ್, ವೋಗ್, ಕಾಸ್ಮೋಪಾಲಿಟನ್ ಮತ್ತಿತರ ಮ್ಯಾಗಸಿನ್‌ಗಳ ಮುಖಪುಟದಲ್ಲಿ ರೂಪದರ್ಶಿಯಾಗಿ ಪೋಸ್ ನೀಡಿದ್ದಾರೆ.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫ್ರೀದಾ ಪಿಂಟೋ, ಎಸ್ಟೀ ಲಾಡರ್, ಸ್ಲಂ ಡಾಗ್ ಮಿಲಿಯನೇರ್