ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಮದುವೆಯಾದ ಬಾಲಿವುಡ್ ಬೆಡಗಿಯರು
ಸುದ್ದಿ/ಗಾಸಿಪ್
Feedback Print Bookmark and Share
 
IFM
ಬಾಲಿವುಡ್ ಬೆಡಗಿಯರು ಒಬ್ಬೊಬ್ಬರಾಗಿ ಮದುವೆಯಾಗುತ್ತಿದ್ದಾರಂತೆ. ಮೊನ್ನೆ ಆಯೇಶಾ ಟಕಿಯಾ ಎಂಬ ದಂತದ ಬೊಂಬೆ ಮದುವೆಯಾದರೆ ನಿನ್ನೆ ಅಮೃತಾ ಅರೋರಾ ವಿವಾಹವಾಗಿದ್ದಾರೆ.

ಮುಂಬೈಯ ಬಾಂದ್ರಾ ದ ಆಲಿವ್ ರೆಸ್ಟೋರೆಂಟ್‌ನಲ್ಲಿ ಅಮೃತಾ, ಶಕೀಲ್ ಲದಾಕ್ ಅವರನ್ನು ವರಿಸಿದರು. ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆಯಾದ ಅರೋರಾ ಬಿಳಿಯುಡುಗೆಯಲ್ಲಿ ಥೇಟ್ ಬಳುಕುವ ಬೆಳ್ಳಕ್ಕಿಯಂತೆ ಕಂಡುಬಂದರು. ಶಕೀಲ್ ಕಪ್ಪು ಸೂಟ್‌ನಲ್ಲಿ ಆಕರ್ಷಕವಾಗಿ ಕಂಡರು. ಮೊದಲೇ ದಂತ ಕಡಿದಿಟ್ಟಂತಹ ರೂಪವುಳ್ಳ ಆಯೇಶಾ ಕೂಡಾ ತಮ್ಮ ಮದುವೆ ಕಳೆಯಲ್ಲಿ ಇನ್ನೂ ಸುಂದರವಾಗಿ ಕಂಡರು. ತಮ್ಮ ಬಹಳ ಕಾಲದ ಗೆಳೆಯ ಫರ್ಹಾ ಅಜ್ಮಿಯನ್ನು ಮದುವೆಯಾಗುವ ಮೂಲಕ ತಮ್ಮ ಕನಸಿನ ಗೋಪುರಕ್ಕೆ ಕಳಶವಿಟ್ಟರು.

ಅಮೃತಾ ಮದುವೆಯಲ್ಲಂತೂ, ಆಕೆಯ ಆತ್ಮೀಯ ಗೆಳತಿ ಕರೀನಾ ಕಪೂರ್ ಹಾಗೂ ಅಮೃತಾರ ಸೋದರಿ ಮಲೈಕಾ ಅರೋರ ಅವರದ್ದೇ ಎಲ್ಲೆಲ್ಲೂ ಕಾರುಬಾರು. ಅವರಿಬ್ಬರೂ ಪೀಚ್ ಗೌನ್‌ನಲ್ಲಿ ಆಕರ್ಷಕವಾಗಿ ಕಂಗೊಳಿಸುತ್ತಿದ್ದರು. ಅಲ್ಲಿ ಬಾಲಿವುಡ್ ನಟನಟೀಮಣಿಯರ ದಂಡೇ ನೆರೆದಿತ್ತು. ಶಾರುಖ್ ಹಾಜರಾಗದ ಈ ಸಮಾರಂಭದಲ್ಲಿ ಅವರ ಪತ್ನಿ ಗೌರಿ ಖಾನ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಜತೆಯಲ್ಲಿ ಹರಟುತ್ತಿದ್ದರು. ಸಲ್ಮಾನ್ ಖಾನ್ ತನ್ನ ಸಂಸಾರ ಸಮೇತ ಹಾಜರಾಗಿ ವಧೂವರಿಗೆ ಶುಭ ಹಾರೈಸಿದರು. ಉಳಿದಂತೆ ಕರೀಶ್ಮಾ ಕಪೂರ್, ಅರ್ಬಾಝ್‌ ಖಾನ್, ಸೈಫ್ ಅಲಿ ಖಾನ್ ಮತ್ತಿತರರು ಸಮಾರಂಭದ ಹಾಟ್ ಆಕರ್ಷಣೆಗಳಾದರು.

IFM
ದಂತದ ಬೊಂಬೆಯಂತಿರುವ ಆಯೇಶಾ ಟಕಿಯಾ ಎಂಬ ಸುಂದರಿಯೂ ತನ್ನ ಬಹುಕಾಲದ ಗೆಳೆಯ ಫರ್ಹಾ ಅಜ್ಮಿಯನ್ನು ಕೈಹಿಡಿದುದಕ್ಕೆ ಸಂಭ್ರಮ ಆಕೆಯ ಮೊಗದಲ್ಲೂ ಕಳೆಗಟ್ಟಿತ್ತು. ಮೊನ್ನೆ ಸಾಂಪ್ರದಾಯಿಕವಾಗಿ ನಿಖಾಹ್ ಆದ ಈ ಜೋಡಿಯ ಮದುವೆಗೆ ಕೇವಲ ಕೆಲವೇ ಆತ್ಮೀಯ ಸ್ನೇಹಿತರು ಹಾಗೂ ಬಂಧುಗಳು ಹಾಜರಿದ್ದರು. ನಂತರ ನಡೆದ ರಿಸೆಪ್ಶನ್‌ನಲ್ಲಿ ಮಾತ್ರ ಬಾಲಿವುಡ್ ನಟನಟಿಯರ ದಂಡೇ ಮೆರೆದಿತ್ತು. ಅಭಿಷೇಕ್ ಬಚ್ಚನ್, ಜಯಾ ಬಚ್ಚನ್, ಸಂಜಯ್ ದತ್, ಮಾನ್ಯತಾ ದತ್, ಸುನಿಲ್ ಶೆಟ್ಟಿ, ರಿತೇಶ್ ದೇಶ್‌ಮುಖ್, ರಾಜ್ ಬಬ್ಬರ್, ದಿನೋ ಮೊರಿಯಾ, ಇಂತಿಹಾಸ್ ಅಲಿ ಮತ್ತಿತರರು ಹಾಜರಾಗಿ ದಂಪತಿಗಳಿಗೆ ಶುಭಕೋರಿದರು.

ಅಮೃತಾ ಹಾಗೂ ಶಕೀಲ್ ಸಾಂಪ್ರದಾಯಿಕವಾಗಿ ಎರಡು ದಿನಗಳ ನಂತರ ನಿಖಾಹ್ ಆಗಲಿದ್ದಾರಂತೆ. ಅಮೃತಾ ಎಂಬ ಸುಂದರಿಗೆ ಹೀಗೆ ಎಲ್ಲಿಲ್ಲದ ಸಂಭ್ರಮ. ಇದಕ್ಕೆ ಕಾರಣಗಳು ಎರಡು. ಒಂದು, "ಮದುವೆಯ ಎಲ್ಲ ಸಿದ್ಧತೆಗಳನ್ನೂ ನನ್ನ ಸೋದರಿ ಮಲೈಕಾ ಅರೋರಾ ನನಗಾಗಿ ಅಚ್ಚುಕಟ್ಟಾಗಿ ಮಾಡಿದ್ದಾಳೆ. ನನಗೇನೂ ಈ ಬಗ್ಗೆ ಗೊತ್ತಿರಲಿಲ್ಲ. ಇಂಥದ್ದೊಂದು ಒಳ್ಳೆಯ ಫ್ಯಾಮಿಲಿ ನನಗಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತದೆ" ಎಂದು ಹರ್ಷದಿಂದ ಆಕೆ ಉದ್ಗರಿಸುತ್ತಾಳೆ. ಎರಡನೆಯದು ಶಕೀಲ್‌ನನ್ನು ಮದುವೆಯಾಗುತ್ತಿರುವುದಕ್ಕೆ. "ಶಕೀಲ್ ಎಂಬ ಮನುಷ್ಯನನ್ನು ಯಾವಾಗ ನೋಡಿದೆನೋ, ಅಂದಿನಿಂದಲೇ ನನ್ನ ಹೃದಯ ಅವನನ್ನು ಬಿಟ್ಟು ಬೇರೆಯವನನ್ನು ಯೋಚಿಸಲಿಲ್ಲ. ನನಗೆ ತಕ್ಕನಾದ ಗಂಡ ಇವನು ಅಂದು ಆ ಕ್ಷಣದಿಂದಲೇ ಅನಿಸಿತು. ನನಗೆ ಯಾವತ್ತೂ ಹೀಗೆ ಮೊದಲು ಅನಿಸಿರಲಿಲ್ಲ. ಹಾಗಾಗಿ ನಾನೀಗ ತುಂಬ ಖುಷಿಯಾಗಿದ್ದೇನೆ" ಎನ್ನುವಾಗ ಆಕೆ ಬಾವೋದ್ವೇಗಕ್ಕೆ ಒಳಗಾಗುತ್ತಾಳೆ.

ಹನಿಮೂನ್ ಬಗ್ಗೆ ಕೇಳಿದರೆ ಮಾತ್ರ ಅಮೃತಾ ನಾಚುತ್ತಾಳೆ. "ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಎಂದರೆ ನಾನು ಶಕೀಲ್ ಇಬ್ಬರೂ ಸಾಕಷ್ಟು ತಿರುಗಾಡಿದ್ದೇವೆ. ನಮಗೆ ಖಾಸಗಿಯಾಗಿ ಕಳೆಯಲು ಅಂಥದ್ದೊಂದು ಜಾಗವೇ ಕಾಣುದಿಲ್ಲ" ಎಂದು ಬೇಸರಿಸುತ್ತಾಳೆ. "ಒಮ್ಮೆ ಕಣ್ಣು ಮುಚ್ಚಿ ಕುಳಿತು ಇಬ್ಬರೂ ತಕ್ಷಣ ಯೋಚಿಸಿದ ಕಡೆಗೆ ಹನಿಮೂನ್‌ಗೆ ಹೋಗುತ್ತೇವೆ. ಅದು ಯಾವ ಸ್ಥಳವಾದರೂ ಪರವಾಗಿಲ್ಲ" ಎಂದು ಹುಬ್ಬೇರಿಸುತ್ತಾಳೆ ಈ ಅರೋರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೃತಾ ಅರೋರಾ, ಮಲೈಕಾ ಅರೋರಾ, ಆಯೇಶಾ ಟಕಿಯಾ