ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಮೈಚಳಿ ಬಿಟ್ಟು ಹಾಟ್ ಆದ ವಿದ್ಯಾ ಬಾಲನ್
ಸುದ್ದಿ/ಗಾಸಿಪ್
Feedback Print Bookmark and Share
 
IFM
ವಿದ್ಯಾ ಬಾಲನ್ ಎಂಬ ಮಲಯಾಳಿ ಸುಂದರಿ ಈಗ ಮತ್ತೆ ಹಾಟ್ ರೂಪದಲ್ಲಿ ಬರುತ್ತಿದ್ದಾಳಂತೆ.

ಶಾಹಿದ್ ಕಪೂರ್ ಎಂಬ ಚಾಕೋಲೇಟ್ ಹುಡುಗನ ಜತೆ ಗಾಸಿಪ್ಪಿಗೆ ಆಹಾರವಾದ ನಂತರ ವಿದ್ಯಾ ಎಂಬ ದಕ್ಷಿಣದ ಸುಂದರಿ ಅದ್ಯಾಕೋ ಇತ್ತೀಚೆಗೆ ಬಾಲಿವುಡ್‌ನಿಂದ ನಿವೃತ್ತಿ ಪಡೆದಳೋ ಎಂಬ ಸಂಶಯ ಬರುವಷ್ಟರ ಮಟ್ಟಿಗೆ ಕಾಣೆಯಾಗಿ ಹೋಗಿದ್ದಳು. ಪಾಪ ಅದ್ಯಾಕೋ ಕಿಸ್ಮತ್ತು ಕೈಕೊಟ್ಟಿತೋ ಗೊತ್ತಿಲ್ಲ. ಪರಿಣಿತದ ಮನೋಜ್ಞ ಅಭಿನಯದಿಂದ ಎಲ್ಲರನ್ನು ದಂಗಾಗಿಸಿದ ಈ ಚೆಲುವೆ ಇದೀಗ ತನ್ನ ಹೊಸ ರೂಪದಿಂದ ಮತ್ತೆ ಎಲ್ಲರನ್ನು ದಂಗಾಗಿಸಲಿದ್ದಾಳಂತೆ.

ವಿಶಾಲ್ ಭಾರದ್ವಾಜ್ ಅವರ ಹೊಸ ಚಿತ್ರ 'ಇಶ್ಕಿಯಾ'ದಲ್ಲಿ ವಿದ್ಯಾ ತನ್ನ ಸಹನಟ ಅರ್ಶದ್ ವರ್ಸಿ ಜತೆಗೆ ಚಳಿ ಬಿಟ್ಟು ನಟಿಸಿದ್ದಾಳಂತೆ. ಇದರಲ್ಲಿ ವಿದ್ಯಾಗೆ ಸ್ವಲ್ಪ ನೆಗೆಟಿವ್ ಇಮೇಜ್ ಪಾತ್ರವಿದ್ದು, ಅಂಕಲ್ ನಾಸಿರುದ್ದೀನ್ ಶಾ ಹಾಗೂ ಅವನ ಸೋದರಳಿಯ ಅರ್ಶದ್ ವರ್ಸಿ ಅವರಿಗೆ ಮೋಸ ಮಾಡುವ ಪಾತ್ರವಂತೆ.

IFM
ಕಿಸ್ಮತ್ ಕನೆಕ್ಷನ್‌ನ ನಂತರ ಬಾಲಿವುಡ್ ಕನೆಕ್ಷನ್ ಕಡಿದುಕೊಂಡತ್ತಿದ್ದ ವಿದ್ಯಾ ಇದೀಗ ತನ್ನ ಅಭಿಮಾನಿಗಳು ಇಷ್ಟು ಸಮಯ ಕಾದಿದ್ದಕ್ಕೆ ಬರೋಬ್ಬರಿ ಉಡುಗೊರೆಯನ್ನೇ ತರುತ್ತಿದ್ದಾಳಂತೆ. ಮತ್ತೆ ಬಂದ ವಿದ್ಯಾ ತನ್ನ ಹೊಸ ಇಮೇಜ್‌ನೊಂದಿಗೆ ಬಾಲಿವುಡ್‌ನಲ್ಲಿ ಹೊಸ ಹವಾ ಸೃಷ್ಟಿಸಲಿದ್ದಾಳಂತೆ. ಇಶ್ಕಿಯಾದಲ್ಲಿ ವಿದ್ಯಾಳ ಪ್ರಣಯದಲ್ಲಿ ತನ್ಮಯಳಾಗಿರುವ ದೃಶ್ಯಗಳು ಸ್ವಲ್ಪ ಹಸಿಯಾಗಿರುವಂತೆ ಬೆಚ್ಚಗೂ ಇವೆ ಎನ್ನುವ ಗಾಳಿಸುದ್ದಿ ಹಬ್ಬಿದೆ. ವಿಶಾಲ್ ಭಾರಧ್ವಾಜ್ ಅವರಿಗೆ ಇಂತಹ ದೃಶ್ಯಗಳ ಚಿತ್ರೀಕರಣಕ್ಕೆ ಯಾವುದೇ ಕಷ್ಟ ಎದುರಾಗಲಿಲ್ಲವಂತೆ. ಯಾವ ತಂಟೆ ತಕರಾರಿಲ್ಲದೆ ವಿದ್ಯಾ ಇಂತಹ ದೃಶ್ಯದಲ್ಲಿ ನಟಿಸಲು ಒಪ್ಪಿದ್ದಳಲ್ಲದೆ, ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾಳಂತೆ.

ಅಂದಹಾಗೆ, ವಿದ್ಯಾ ಪಾಲಿಗೆ ಇಂತಹ ದೃಶ್ಯಗಳು ಹೊಸತೇನೂ ಅಲ್ಲ ಬಿಡಿ. ಈ ಮೊದಲ ಇಂತಹ ಕೆಲವು ದೃಶ್ಯಗಳಲ್ಲಿ ಆಕೆ ಅಭಿನಯಿಸಿದ್ದಳು. ಪರಿಣಿತ ಹಾಗೂ ಹೇ ಬೇಬಿ ಚಿತ್ರಗಳಲ್ಲಿ ಆಕೆಗೆ ಇಂತಹ ಅನುಭವವಿತ್ತು. ಆದರೆ, ನಿರ್ದೇಶಕರು ಹೇಳುವಂತೆ ಇಲ್ಲಿ ಆಕೆಯ ಪಾತ್ರವನ್ನು ಆಕೆಯ ಇದುವರೆಗಿನ ಚಿತ್ರಗಳ ಪಾತ್ರಗಳೊಡನೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಆಕೆಯ ಮೊದಲ ಚಿತ್ರಗಳಿಗೆ ಹೋಲಿಸಿದರೆ ಇಶ್ಕಿಯಾ ಸ್ವಲ್ಪ ಬೇರೆಯಂತೆ. ಇದರಲ್ಲಿ ಆಕೆಯದು ಒಂದು ಸಂಕೀರ್ಣ ಪಾತ್ರ. ಜತೆಗೆ ಆಕೆಗೆ ಈ ಚಿತ್ರದ ನಂತರ ಹೊಸ ಇಮೇಜ್ ಲಭಿಸುತ್ತದೆ ಎಂಬುದು ನಿರ್ದೇಶಕರ ಮಾತು.

ಸದ್ಯಕ್ಕೆ ವಿದ್ಯಾ ಕೈಯಲ್ಲಿ ಬೊಗಸೆ ತುಂಬ ಚಿತ್ರಳೂ ಇವೆಯಂತೆ. ಇದರ ಜತೆಗೆ ಸದ್ಯದಲ್ಲೇ ಅಕ್ಷಯ್ ಕುಮಾರ್ ಜತೆಗೆ ನಿಖಿಲ್ ಅಡ್ವಾಣಿ ಅವರ ಚಾಂದ್‌ಬಾಯ್ ಸಿನಿಮಾಕ್ಕೂ ಸಹಿ ಮಾಡಿದ್ದಾಳೆ. ಅಲ್ಲದೆ ಈಗಷ್ಟೆ ಈಕೆಯ ನಸೀಬು ಖುಲಾಯಿಸಿದಂತೆ ಅನಿಸುತ್ತಿದೆ. ಆಕೆ ಇಶ್ಕಿಯಾದಲ್ಲಿ ಹಿರಿಯ ನಟ ನಾಸಿರುದ್ದೀನ್ ಶಾ ಜತೆಗೆ ನಟಿಸುತ್ತಿದ್ದಾಳೆ. ಅಲ್ಲದೆ, ಬಿಗ್ ಬಿ ಅಮಿತಾಬ್ ಜತೆಗೂ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಸುದ್ದಿಯೂ ಇದೆ. ಮತ್ತೆ ಮುನ್ನಾ ಭಾಯಿಯ ಜತೆಗೆ ಕೈ ಜೋಡಿಸಿರುವ ವಾರ್ತೆಯೂ ಇದೆ. ಅಂತೂ 2009 ವಿದ್ಯಾಗೆ ಹೊಸ ಯಶಸ್ಸು ತರುತ್ತದೋ ನೋಡಬೇಕು.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿದ್ಯಾ ಬಾಲನ್, ಇಸ್ಕಿಯಾ, ಕಿಸ್ಮತ್ ಕನೆಕ್ಷನ್, ವಿಶಾಲ್ ಭಾರದ್ವಾಜ್