ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » 'ದಿಲ್‌ವಾಲೇ...' 14ನೇ ವರ್ಷಕ್ಕೆ ಪಾದಾರ್ಪಣೆ!
ಸುದ್ದಿ/ಗಾಸಿಪ್
Feedback Print Bookmark and Share
 
PR
ನಿರಂತರ ಪ್ರದರ್ಶನಕ್ಕೆ ಸಂಬಂಧಿಸಿ ಶೋಲೆ ಎಂಬ ಭರ್ಜರಿ ಹಿಂದಿ ಚಿತ್ರದ ಹೆಸರಲ್ಲಿದ್ದ ದಾಖಲೆಯನ್ನು 2001ರಲ್ಲೇ ನುಗ್ಗಿ ಮುಂದೋಡಿದ್ದ 'ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೇ' (ಡಿಡಿಎಲ್‌ಜೆ) ಎಂಬ ಮತ್ತೊಂದು ಬಾಲಿವುಡ್ ಪ್ರೇಮ ಕಥಾನಕ, ಇದೀಗ 700 ವಾರಗಳ (ಅಂದರೆ ಸುಮಾರು ಹದಿಮೂರುವರೆ ವರ್ಷ) ನಿರಂತರ ಪ್ರದರ್ಶನ ಕಂಡು ಹೊಸ ದಾಖಲೆ ಮಾಡಿದೆ.

1975ರಿಂದ 1980ರವರೆಗೆ ಶೋಲೆ ಚಿತ್ರವು ಮಿನರ್ವ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಂಡು ಐದು ವರ್ಷಗಳ ದಾಖಲೆ ಸೃಷ್ಟಿಸಿದ್ದು. ಇದೀಗ 1995ರ ಅಕ್ಟೋಬರ್ ತಿಂಗಳಲ್ಲಿ ಮುಂಬಯಿಯ ಮರಾಠ ಚಿತ್ರ ಮಂದಿರದಲ್ಲಿ ಬಿಡುಗಡೆಯಾದಂದಿನಿಂದ ಪ್ರದರ್ಶನಗೊಳ್ಳುತ್ತಿರುವ ಡಿಡಿಎಲ್‌ಜೆ ಭಾರತೀಯ ಚಲನಚಿತ್ರ ಚರಿತ್ರೆಯಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದೆ ಮತ್ತು ಇನ್ನೂ ಮುನ್ನುಗ್ಗುತ್ತಲೇ ಇದೆ.

ಪ್ರತಿಭಾನ್ವಿತ ನಿರ್ದೇಶಕ ಆದಿತ್ಯ ಚೋಪ್ರಾ ಮತ್ತು ಶಾರೂಖ್ ಖಾನ್-ಕಾಜೊಲ್ ಅವರ ತಾರಾ ಜೋಡಿಯುಳ್ಳ ಚಿತ್ರವು 1995ರ ಅಕ್ಟೋಬರ್ 20ರಂದು ತೆರೆ ಕಂಡಿತ್ತು. ಆ ವರ್ಷದ ಪ್ರತಿಯೊಂದು ಪ್ರಮುಖ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದ ಡಿಡಿಎಲ್‌ಜೆ, ಇದುವರೆಗಿನ ಅತ್ಯುತ್ತಮ ರೋಮ್ಯಾಂಟಿಕ್ ಚಿತ್ರ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.

ಸಮಕಾಲೀನ ಬಾಲಿವುಡ್‌ಗೆ ಸಂಬಂಧಿಸಿ ಡಿಡಿಎಲ್‌ಜೆಯು ದೇಶದ ಸಿನಿಮಾ ಚಿತ್ರಣವನ್ನೇ ಬದಲಾಯಿಸಿತ್ತು ಎಂದರೂ ತಪ್ಪಲ್ಲ ಮತ್ತು ತನ್ನದೇ ಆದ ಒಂದು ಬ್ರಾಂಡ್ ಅನ್ನೂ ಅದು ಸೃಷ್ಟಿಸಿಕೊಂಡಿತು. ವಿದೇಶೀ ಪದ್ಧತಿಗಳೊಂದಿಗೆ ದೇಶೀ ಸಂಪ್ರದಾಯವನ್ನು ಅತ್ಯಾಕರ್ಷಕವಾಗಿ ಬೆಸೆದಿರುವ ಈ ಚಿತ್ರವು, ಇಂಪಾದ ಸಂಗೀತ, ರಮಣೀಯವಾದ ಚಿತ್ರೀಕರಣ ತಾಣಗಳು ಮತ್ತು ಆಕರ್ಷಕ ರೋಮ್ಯಾಂಟಿಕ್ ಕ್ಷಣಗಳೊಂದಿಗೆ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ.

ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರವು ಇದೀಗ 14ನೇ ವರ್ಷದಲ್ಲಿಯೂ ಓಡುತ್ತಲೇ ಇದೆ. ಬಹುಶಃ ಚಿತ್ರ ನೋಡಿದವರು ಮತ್ತೆ ಮತ್ತೆ ಮರಳಿ ನೋಡುತ್ತಿದ್ದಾರೆ ಎಂದನಿಸುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೇ, ಡಿಡಿಎಲ್ಜೆ, ಯಶ್ ರಾಜ್ ಫಿಲ್ಮ್ಸ್, ಆದಿತ್ಯ ಚೋಪ್ರಾ, ಶಾರೂಖ್ ಖಾನ್, ಕಾಜೊಲ್