ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸಲ್ಮಾನ್ ಮನೆ ಪಕ್ಕ ಮಾಜಿ ಪ್ರೇಮಿ ಐಶ್‌ಳ ಹೊಸ ಮನೆ! (Salman | Aishwarya | Abhishek Bachchan | Amitabh | Naivedya)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಬಾಲಿವುಡ್ ಬ್ಯಾಡ್ ಬಾಯ್, ಮಿಸ್ಟರ್ ಟಾಪ್‌ಲೆಸ್ ಸಲ್ಮಾನ್ ಖಾನ್ ಹಾಗೂ ಮಾಜಿ ವಿಶ್ವಸುಂದರಿ, ಹಾಲಿ ಬಚ್ಚನ್ ಸೊಸೆ ಐಶ್ವರ್ಯಾ ರೈ ಪ್ರಣಯ ಗೀತೆಯೂ ಗೊತ್ತಿಲ್ಲದವರಿಲ್ಲ. ಚೋಟುದ್ದದ ಮಗುವಿನ ಬಳಿ ಕೇಳಿದರೂ ಈ ಬಗ್ಗೆ ಅಷ್ಟುದ್ದದ ಭಾಷಣ ಬಿಗಿಯಬಹುದು. ಇದೇನೇ ಇರಲಿ. ಈಗ ಅದೆಲ್ಲ ಹಳೇ ಕಥೆ. ಈಗ ಇವರಿಬ್ಬರ ನಡುವೆ ಒಂದು ಹೊಸ ಕಥೆಯೂ ಬೆಳಕಿಗೆ ಬಂದಿದೆ. ಅದೇನೆಂದರೆ, ಇನ್ನು ಕೆಲವೇ ತಿಂಗಳುಗಳಲ್ಲಿ ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಮನೆ ಅಕ್ಕಪಕ್ಕ. ಮೆಲುದನಿಯಲ್ಲಿ ಕರೆದರೂ ಕೇಳುವಷ್ಟು ಹತ್ತಿರ ಹತ್ತಿರ!

ಆದರೆ ಸಲ್ಮಾನ್ ಮಾತ್ರ ಅಪರಾತ್ರಿಯಲ್ಲಿ ಟೆರೇಸ್ ಮೇಲೆ ಕುಳಿತು ''ಕರೆದರೂ ಕೇಳದೇ...'' ಅಂತ ಹಾಡಿದರೂ ತಪ್ಪಿಲ್ಲ. ಯಾಕೆಂದರೆ, ಸಲ್ಮಾನ್ ಪಕ್ಕದ ಮನೆಯಲ್ಲಿ ಐಶ್ವರ್ಯಾ ರೈ ಒಬ್ಬಳೇ ಕೂತು ಭಜನೆ ಮಾಡುವುದಿಲ್ಲವಲ್ಲ? ಅಲ್ಲಿ ಆಕೆಯ ಮುದ್ದಿನ ಪತಿರಾಯ ಅಭಿಷೇಕ್ ಬಚ್ಚನ್ ಕೂಡಾ ಇರಲಿದ್ದಾನೆ.

ಹಳೇ ಕಥೆಯ ಧೂಳನ್ನು ಈಗ್ಯಾಕಪ್ಪಾ ಕೊಡವೋದು ಅಂತೀರಾ. ಸರಿ, ಹಳೆ ವಿಷಯ ಬಿಟ್ಟು ಹೊಸ ವಿಷಯಕ್ಕೆ ಬರೋಣ. ಐಶ್ವರ್ಯಾ ಹಾಗೂ ಆಕೆಯ ಪತಿ ಅಭಿಷೇಕ್ ಇದೀಗ ಮುಂಬೈಯ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಭವ್ಯ ಬಂಗಲೆಯೊಂದನ್ನು ಕಟ್ಟಿಸುತ್ತಿದ್ದಾರೆ. ಆ ಮನೆಯ ಹೆಸರು 'ನೈವೇದ್ಯ'. ಮನೆಯ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಮನೆಯ ಕಾರ್ಯ ಮುಗಿದ ಮೇಲೆ ಐಶ್- ಅಭಿ ಇಬ್ಬರೂ ಅಪ್ಪ ಅಮ್ಮ (ಅಮಿತಾಬ್ ಹಾಗೂ ಜಯಾ ಬಚ್ಚನ್) ಅವರೊಂದಿಗಿದ್ದ ಜುಹುವಿನ ಬಂಗಲೆ ಬಿಟ್ಟು ಬಾಂದ್ರಾದ ನೈವೇದ್ಯದಲ್ಲಿ ಹೊಸ ಸಂಸಾರದ ಸರಿಗಮ ನುಡಿಸಲಿದ್ದಾರಂತೆ. ಜುಹುವಿನ ಬಂಗಲೆಯಲ್ಲಿ ಅಮಿತಾಬ್-ಜಯಾ ಹಾಗೂ ಬಾಂದ್ರಾದ ಬಂಗಲೆಯಲ್ಲಿ ಅಭಿ- ಐಶ್ ಇನ್ನು ಮುಂದೆ ಬೇರೆಬೇರೆಯಾಗಿ ವಾಸಿಸಲಿದ್ದಾರಂತೆ ಎಂಬ ವಿಷಯ ಬಾಲಿವುಡ್ ತುಂಬೆಲ್ಲ ಹಬ್ಬಿದೆ. ಆದರೆ, ಬಚ್ಚನ್ ಕುಟುಂಬ ಮಾತ್ರ ಇದೆಲ್ಲ ಶುದ್ಧ ಸುಳ್ಳು. ನಾವು ಬೇರೆ ಬೇರೆಯಾಗುತ್ತಿಲ್ಲ ಎಂದು ಹೇಳಿಕೊಂಡಿದೆ. ಆದರೆ ಮನೆ ಕಟ್ಟಿಸುತ್ತಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬೇರೆ ಬಂಗಲೆ ಕಟ್ಟಿಸುತ್ತಿರುವ ವಿಷಯ ಹೊರಗೆ ಹರಡದಂತೆ ಕಾಪಾಡಲು ಐಶ್- ಅಭಿ ಜೋಡಿ ಈ ಹೊಸ ಮನೆಗೆ ಅಪರಾತ್ರಿಗಳಲ್ಲಿ ಭೇಟಿ ನೀಡಿ ಮನೆಯ ಕಾರ್ಯ ಎಲ್ಲಿಯವರೆಗೆ ಬಂತೆಂದು ನೋಡಿ, ಕೆಲಸದವರಿಗೆ ರೂಪುರೇಷೆ ತಿಳಿಸಿ ಹೋಗುತ್ತಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ಕಾಕತಾಳೀಯವೆಂದರೆ, ಇದು ಐಶ್ವರ್ಯಾಳ ಅದೃಷ್ಟವೋ ದುರದೃಷ್ಟವೋ ಗೊತ್ತಿಲ್ಲ. ಈ ಹೊಸ ಬಂಗಲೆ ಸಲ್ಮಾನ್ ಬಂಗಲೆಯ ಪಕ್ಕದಲ್ಲೇ ಇದೆ. ಐಶ್- ಅಭಿಯ ಈ ನೈವೇದ್ಯವೆಂಬ ಹಾಲುಬಿಳುಪಿನ ಬಂಗಲೆ ಸಲ್ಮಾನ್ ಬಂಗಲೆಗಿಂತ ಕೊಂಚ ಚಿಕ್ಕದಂತೆ. ಸಲ್ಮಾನ್ ಬಂಗಲೆಯಲ್ಲಿ ಐಶ್ ಬಂಗಲೆಗಿಂತ ಹೆಚ್ಚು ಮಹಡಿಗಳು ಇವೆಯಂತೆ. ಮೂಲಗಳ ಪ್ರಕಾರ, ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಹೋದರೆ 83-ಎ ನಂಬರಿನ ಮನೆಯೇ ಐಶ್‌ಳ ಹೊಸ ಬಂಗಲೆ. ಅದು ಸಲ್ಮಾನ್ ಬಂಗಲೆಗೆ ಅಂಟಿಕೊಂಡಂತೇ ಇದೆ. ಇನ್ನೂ ಐಶ್ ಬಂಗಲೆಗೆ ಹೊರಗಿನಿಂದ ನೈವೇದ್ಯ ಎಂದು ಬರೆಯಲಾಗಿಲ್ಲ. ಬಂಗಲೆಯ ಕೆಲಸ ಮುಕ್ಕೂಲು ಭಾಗವಷ್ಟೆ ಪೂರ್ಣಗೊಂಡಿದೆ.

ಸಲ್ಮಾನ್ ಮಾತ್ರ ಈ ಬಂಗಲೆಯಲ್ಲಿ ಸದ್ಯ ಇಲ್ಲ. ಆಗಾಗ ಬಾಂದ್ರಾದ ಬಂಗಲೆಗೆ ಬಂದು ಹೋಗುವ ಸಲ್ಮಾನ್ ಈಗ ಮಾತ್ರ ಬಾಂದ್ರಾದಲ್ಲೇ ಇರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಅಪ್ಪ ಅಮ್ಮನ ಜತೆಗೆ ವಾಸಿಸುತ್ತಿದ್ದಾನಂತೆ.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್, ಬಾಲಿವುಡ್