ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » 37ರ ಮಂದಿರಾಳ ಹೃದಯ'ಮಂದಿರ'ದಲ್ಲಿ 'ಯುವ'ರಾಜ! (Yuvraj Singh | Mandira Bedi | South Africa | IPL | Bollywood)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಮೊದಲೇ ಬಾಲಿವುಡ್ಡಿಗೂ ಕ್ರಿಕೆಟಿಗರಿಗೂ 'ಜನುಮ ಜನುಮದ ಅನುಬಂಧಾ..' ಅಂತ ಅಪರಾತ್ರಿಯಲ್ಲೂ ಹಾಡಿಕೊಳ್ಳುವಷ್ಟು ಸಂಬಂಧ. ಈಗ ಐಪಿಎಲ್ ಇದಕ್ಕೆ ಇನ್ನಷ್ಟು ವೇದಿಕೆಯನ್ನು ಒದಗಿಸುತ್ತಿದೆ ಎಂಬುದು ಸುಳ್ಳಲ್ಲ. ಮೊನ್ನೆ ಮೊನ್ನೆಯಷ್ಟೆ ಶಮಿತಾ- ವಾರ್ನೆ ಪುರಾಣ ಕೇಳಿದ್ದಾಯಿತು. ಈಗ ಯುವರಾಜ್ ಸಿಂಗ್- ಮಂದಿರಾ ಬೇಡಿ ಪುರಾಣ ಬಿಚ್ಚಿಕೊಂಡಿದೆ.

ಹೇಳಿ ಕೇಳಿ ಮಂದಿರಾ ಬೇಡಿ ಟಿವಿ ವಾಹಿನಿಗಳ ಹಾಟ್ ಮುಖ. ಕ್ರಿಕೆಟ್ಟಿನಲ್ಲಿ ಗ್ಲಾಮರ್ ಲೋಕವನ್ನು ಬೆರೆಸಿದ ಕ್ರಿಕೆಟ್ ನಿರೂಪಕಿ ಮಂದಿರಾ ಬೇಡಿ ಬಾಲಿವುಡ್ಡಿನಲ್ಲಿ ಸ್ವಲ್ಪ ಕಾಲ ಮೈಬಳುಕಿಸಿ, ಕೊನೆಗೆ ಬಾಲಿವುಡ್ಡಿನ ನಿರ್ದೇಶಕ, ನಿರ್ಮಾಪಕ ರಾಜ್ ಕೌಶಲ್‌ರನ್ನು ಮದುವೆಯಾಗಿದ್ದಾಳೆ. ವರ್ಷ 37. ಇಂತಿಪ್ಪ ಮಂದಿರಾ ಬೇಡಿ ಈಗ 'ಯುವ'ರಾಜನ ತೆಕ್ಕೆಗೆ ಬಿದ್ದಿದ್ದಾಳಂತೆ.

ಹೀಗೆಂದು ದಕ್ಷಿಣ ಆಫ್ರಿಕಾದಿಂದ ಹಾರಿ ಬಂದಿರುವ ಸುದ್ದಿಗೆ ರೆಕ್ಕೆಪುಕ್ಕಗಳೂ ಇವೆ. ಇದಕ್ಕೆ ಗಾಸಿಪ್ಪಿಗರು ಹಲವು ಪುರಾವೆಗಳನ್ನೂ ಒದಗಿಸುತ್ತಾರೆ. ಕಿಂಗ್ಸ್ ಪಂಜಾಬ್ ತಂಡದ ನಾಯಕ ಯುವ ಆಟಗಾರ ಯುವರಾಜ ಮೈದಾನದಲ್ಲಷ್ಟೇ ಅಲ್ಲ. ಗರ್ಲ್‌ಫ್ರೆಂಡ್ಸ್ ವಿಷಯದಲ್ಲೂ ಮೈದಾನದ ಹೊರಗೆ ಸಾಕಷ್ಟು ಸುದ್ದಿ ಮಾಡಿ ಅಭ್ಯಾಸವಿದ್ದವರೇ. ಈ ಹಿಂದೆ ಬಾಲಿವುಡ್ಡಿನ ಹಾಟ್ ಬೆಡಗಿ ಕಿಮ್ ಶರ್ಮಾ ಜತೆಗೆ ಅನುರಾಗ ಪಲ್ಲವಿ ನುಡಿಸಿದ್ದ ಯುವರಾಜ್, ನಂತರ ನನಗೀಗ ಯಾರೂ ಗರ್ಲ್‌ಫ್ರೆಂಡ್ಸೇ ಇಲ್ಲ ಎಂದು ಶೋಕಗೀತೆ ನುಡಿಸಿದ್ದ. ಕಿಮ್ ಜತೆ ಈಗೇನೂ ಕಿಮ್ಮತ್ತಿಲ್ಲ ಎನ್ನುತ್ತಾ, ಯುವರಾಜ ಈಗಷ್ಟೆ ಮಂದಿರಾಳ ಹೃದಯಮಂದಿರದೊಳಕ್ಕೆ ಬಲಗಾಲಿಟ್ಟಿದ್ದಾನೆ ಎಂಬ ವಾರ್ತೆ ಕೇಳಿ ಬಂದಿದೆ.

ಆದರೆ ಮಂದಿರಾಳ ಆಪ್ತರು ಹೇಳುವ ಪ್ರಕಾರ ಯುವಿ- ಮಂದಿರೆ ಇಬ್ಬರೂ ಕ್ಲೋಸ್ ಫ್ರೆಂಡ್ಸು. ಫ್ರೆಂಡ್‌ಶಿಪ್ಪಿಗಿಂತ ಹೆಚ್ಚೇನೂ ಇಲ್ಲ. ಅವರಿಬ್ಬರೂ ಮೊದಲೇ ಒಳ್ಳೆಯ ಗೆಳೆಯರು. ಆದರೆ, ಇಬ್ಬರೂ ಅವರವರ ಕೆಲಸದ ಒತ್ತಡದಿಂದಾಗಿ ದೂರವಾಣಿಯಲ್ಲೂ ಸಂಪರ್ಕ ಸಾಧಿಸಿರಲಾಗಿಲ್ಲ. ಈಗ ಐಪಿಎಲ್ ವೇಳೆ ಇಬ್ಬರೂ ಭೇಟಿಯಾಗಿದ್ದರಿಂದ ಮತ್ತೆ ಹಳೆಯ ಗೆಳೆತನ ಚಿಗುರಿದೆ ಅಷ್ಟೇ ಎನ್ನುತ್ತಾರೆ.

ಆದರೆ, ನೋಡುವವರಿಗೆ ಕಣ್ಣು ಕಾಣಿಸುತ್ತದಲ್ಲವೇ? ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ ಬಂದಿದ್ದಾರಂತೆ. ಬರೀ ಗೆಳೆತನವಷ್ಟೇ ಆಗಿದ್ದರೆ ಗಂಟೆಗಟ್ಟಲೆ ಮೂಲೆ ಮೂಲೆಯಲ್ಲಿ ಕೂತು ಪಟ್ಟಾಂಗ ಹೊಡೆಯುತ್ತಾರೇನು? ಅಂತ ಮರುಪ್ರಶ್ನೆ ಹಾಕುತ್ತಾರೆ. ಮೂಲಗಳ ಪ್ರಕಾರ, ಯುವಿ- ಮಂದಿರೆ ಇಬ್ಬರೂ ನೈಟ್‌ಕ್ಲಬ್‌ಗಳಲ್ಲಿ, ಹೊಟೇಲಿನ ಮೂಲೆಯ ಟೇಬಲ್ಲುಗಳಲ್ಲಿ, ಕಾರಿಡಾರ್‌ಗಳ ಬದಿಯಲ್ಲಿ ಗಂಟೆಗಟ್ಟಲೆ ಸಮಯದ ಅರಿವೇ ಇಲ್ಲವೆಂಬಂತೆ ಮಾತನಾಡುತ್ತಿರುತ್ತಾರೆ. ಹಾಗಾಗಿ ಕೇವಲ ಗೆಳತನವಷ್ಟೇ ಅಲ್ಲ. ಬೇರೇನೋ ಬೇಳೆ ಬೇಯುತ್ತಿದೆ ಎನ್ನುತ್ತಾರೆ.

ಈ ಹಿಂದೆ ಕಿಮ್ ಜತೆಗೆ ನಾಲ್ಕು ವರ್ಷಗಳ ಕಾಲ ಪ್ರೇಮಬಲೆಯಲ್ಲಿ ಸಿಲುಕಿದ್ದ ಯುವರಾಜ್, 2007ರಲ್ಲಷ್ಟೆ ಬಲೆಯಿಂದ ತಪ್ಪಿಸಿಕೊಂಡಿದ್ದರು. ಯುವಿ- ಕಿಮ್ ಸಂಬಂಧ ಮದುವೆವರೆಗೂ ತಲುಪಿತ್ತು. ಆದರೆ ಯುವಿ ಅಮ್ಮನಿಗೆ, ಮಗ ನಟಿಯನ್ನು ಮದುವೆಯಾಗೋದು ಸುತಾರಾಂ ಇಷ್ಟವಿರಲಿಲ್ಲ. ಅಮ್ಮನ ಒತ್ತಡದ ಮೇಲಿನ ಒತ್ತಡದಿಂದ ಕೊನೆಗೂ ಯುವರಾಜ ಕಿಮ್ ಮಡಿಲು ಬಿಟ್ಟು ಅಮ್ಮನ ಮಡಿಲು ಸೇರಿದ್ದರು. ಯಾಕೆಂದರೆ ಯುವಿಗೆ ಅಮ್ಮ ಅಂದರೆ ಅಚ್ಚುಮೆಚ್ಚು. ಅಮ್ಮನ ಮಾತು ಮೀರಿ ನಡೆಯೋದು ಯುವಿಗೆ ಇಷ್ಟವಿಲ್ಲವಂತೆ.

ಆದರೆ, ಕಿಮ್ ಸಂಗ ಬಿಟ್ಟ ಮೇಲೆ ವಿರಹ ನೂರು ನೂರು ತರಹ ಎಂದು ಅಡ್ಡಾಡುತ್ತಿದ್ದ ಯುವಿಗೆ ಮತ್ತೆ ಯಾಕೋ ಬಾಲಿವುಡ್ಡೇ ಕರೆದಿದೆ. ಇನ್ನೂ ಐಪಿಎಲ್‌ನಲ್ಲಿ ಏನೇನು ಕಾದಿದೆಯೋ...
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯುವರಾಜ್ ಸಿಂಗ್, ಮಂದಿರಾ ಬೇಡಿ, ಐಪಿಎಲ್, ಬಾಲಿವುಡ್ ಗಾಸಿಪ್