ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಕ್ರಿಕೆಟರನ್ನು, ವಿವಾಹಿತನನ್ನು ಪ್ರೀತಿಸಲೇಬೇಡಿ: ಪ್ರೀತಿ ಝಿಂಟಾ (Preity zinta | Ness wadia | Brett lee | Yuvraj singh | IPL)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಪ್ರೀತಿ ಝಿಂಟಾ ಹಾಗೂ ನೆಸ್ ವಾಡಿಯಾ ಜೋಡಿಯ ಪ್ರೇಮಗೋಡೆಯಲ್ಲಿ ಬಿರುಕು ಬಿಟ್ಟಿದೆ ಎಂದು ಗಾಸಿಪ್ ಹರಿದು ಬಂದಾಗ ಮಾಧ್ಯಮಗಳನ್ನು ತನ್ನ ಬ್ಲಾಗ್‌‌ನಲ್ಲಿ ವಾಚಾಮಗೋಚರವಾಗಿ ಬೈದ ಪ್ರೀತಿ ಝಿಂಟಾ ಈಗ ಮಾಧ್ಯಮಗಳ ವರದಿಯಲ್ಲಿ ಹುರುಳಿದೆ ಎಂದು ತೋರಿಸಿಕೊಟ್ಟಿದ್ದಾಳೆ. ಕೊನೆಗೂ ಪ್ರೀತಿ- ನೆಸ್ ವಿರಸ ಅಧಿಕೃತಗೊಂಡಿದೆ. ಐಪಿಎಲ್‌ನಿಂದ ಮರಳುವ ವೇಳೆ ಹಲವು ನಟ ನಟಿಯರು ಹೊಸ ಹೊಸ ಸಂಬಂಧದಿಂದ ಕನಸುಗಳ ಗೋಪುರ ಕಟ್ಟಿಕೊಂಡು ಬರಲಿದ್ದರೆ, ಪ್ರೀತಿ ಮಾತ್ರ ಎಲ್ಲ ಕಳಚಿಕೊಂಡು ಬರುತ್ತಿದ್ದಾಳಂತೆ.

ನೆಸ್ ಜತೆಗಿನ ವಿರಸದೊಂದಿಗೆ ಇದೀಗ ಪ್ರೀತಿ ವಿಶ್ವಕ್ಕೇ ಒಂದು ಸಂದೇಶವನ್ನೂ ಹೇಳಿದ್ದಾಳೆ. ಅದೇನೆಂದರೆ, ''ಯಾರನ್ನು ಬೇಕಾದ್ರೂ ಪ್ರೀತಿಸಿ, ಆದರೆ ಎಂದಿಗೂ ವಿವಾಹಿತರನ್ನು, ಕ್ರಿಕೆಟಿಗರನ್ನು ಹಾಗೂ ನಟರನ್ನು ಮಾತ್ರ ಪ್ರೀತಿಸಬೇಡಿ'' ಎಂದಿದ್ದಾಳೆ!

ಪ್ರೀತಿಗೆ ಹೀಗೆ ಜ್ಞಾನೋದಯವಾಗಲು ಕಾರಣವೇನಪ್ಪಾ? ಅಂತ ಸಂಶಯ ಬಾರದಿರದು. ಕಾರಣವಂತೂ ಸರಿಯಾಗಿ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಐಪಿಎಲ್ ಅಂಗಳದಿಂದಲೇ ಲೋಕಕ್ಕೆ ಹೀಗಂತ ಸಂದೇಶ ರವಾನಿಸಿದ್ದಂತೂ ಪ್ರೀತಿಯೇ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ.

ಪ್ರೀತಿಗೂ ನೆಸ್‌ಗೂ ಪ್ರೀತಿ ಮುರಿದು ಬಿದ್ದಿದೆ ಎಂದು ಊಹಾಪೋಹ ಹಬ್ಬಿದ್ದಾಗ ಪ್ರೀತಿ, ನಾವು ಚೆನ್ನಾಗಿಯೇ ಇದ್ದೇವೆ ಎನ್ನುತ್ತಾ ದಕ್ಷಿಣ ಆಫ್ರಿಕಾಕ್ಕೆ ಹಾರಿದ್ದಳು. ಆದರೆ, ತನ್ನ ತಂಡ ಕಿಂಗ್ಸ್ ಪಂಜಾಬ್ ಜತೆಗೆ ಕುಣಿದಾಡಿ ಖುಷಿಯಲ್ಲಿದ್ದರೂ ಎಂದಿಗೂ ನೆಸ್ ಜತೆಗೆ ಕಾಣಿಸಿಕೊಂಡಿರಲಿಲ್ಲ. ನೆಸ್ ಕೂಡಾ ಪ್ರೀತಿ ಕುಳಿತ ಗ್ಯಾಲರಿಯಲ್ಲಿ ಕುಳಿತಿರದೆ ದೂರವೇ ಇದ್ದ ಎಂಬ ಮಾಹಿತಿಯೂ ಬಂದಿದೆ.

ಇದರ ಜತೆಗೆ, ಕಳೆದ ಬಾರಿಯ ಐಪಿಎಲ್‌ನಲ್ಲೇ ಪ್ರೀತಿಗೂ ಯುವರಾಜ್ ಸಿಂಗ್‌ಗೂ ಏನೋ ಇದೆ ಅಂತೆಲ್ಲಾ ಸುದ್ದಿ ಹಬ್ಬಿತ್ತು. ಈ ಬಾರಿಯೂ ಮತ್ತೆ ಹಾಗೆಯೇ ಸುದ್ದಿಯಿದೆ. ಅಷ್ಟೇ ಅಲ್ಲ. ಪ್ರೀತಿಗೂ ಆಸ್ಟ್ರೇಲಿಯಾದ ವೇಗಿ ಬ್ರೆಟ್‌ಲೀಗೂ ಅಫೇರ್ ನಡೀತಿದೆ ಅಂತಲೂ ಗಾಳಿ ಸುದ್ದಿ ಹಬ್ಬಿದೆ. ಆದರೆ ಇವೆಲ್ಲ ಗಾಸಿಪ್‌ಗಳನ್ನೂ ಕಾಲಿನಿಂದ ಓದ್ದು ಓಡಿಸಿರುವ ಈ ಝಿಂಟಾ ಎಂಬ ಗುಳಿ ಕೆನ್ನೆಯ ಚೆಲುವೆ ಮೈದಾನದಲ್ಲೇ ನಿಂತು ತನ್ನ ಅನುಭವ ಧಾರೆಯಿಂದ ಕಂಡುಕೊಂಡ ಸತ್ಯವನ್ನು ಲೋಕಕ್ಕೇ ಸಾರಿದ್ದಾಳೆ.

ಜತೆಗೆ, ''ನೆಸ್ ಜತೆಗಿನ ಅಫೇರ್ ಕಡಿದುಕೊಂದ ಮಾತ್ರಕ್ಕೆ ನನ್ನ ವೃತ್ತಿ ಬದುಕಿಗ ಇದರಿಂದ ಹಾನಿಯಿಲ್ಲ'' ಎಂದೂ ಸಾರಿದ್ದಾಳೆ ಈ ರಜಪೂತ ಧೀರೆ. ''ನೆಸ್ ಜತೆಗಿನ ವೃತ್ತಿ ಬದುಕಿನ ಸಂಬಂಧ ಹಾಗೇಯೇ ಮುಂದುವರಿಯಲಿದೆ. ಆದರೆ ಅದನ್ನೆಂದೂ ಇನ್ನು ಮುಂದೆ ನಾನು ನನ್ನ ಖಾಸಗಿ ಬದುಕಿಗೆ ಸಂಬಂಧ ಕಲ್ಪಿಸಲಾರೆ. ವೃತ್ತಿ ಬದುಕೇ ಬೇರೆ. ಖಾಸಗಿ ಜೀವನವೇ ಇನ್ನು ಮುಂದೆ ಬೇರೆಯಾಗಲಿದೆ'' ಎಂದೂ ಹೇಳಇದ್ದಾಳೆ.

ಪ್ರೀತಿ- ನೆಸ್ ಬ್ರೇಕ್‌ಅಪ್‌ನಿಂದ ಆಕೆಯ ಗಂಡು ಅಭಿಮಾನಿಗಳಿಗೆಲ್ಲ ಸಾಕಷ್ಟು ಖಷಿಯೇ ಆಗಿದೆಯಂತಪ್ಪ. ಆದರೆ ಪ್ರೀತಿ ಮಾತ್ರ ''ಇನ್ನೂ ಮುಂದೆ ಯಾವ ಕಾರಣಕ್ಕೂ ವಿವಾಹಿತರನ್ನು, ಕ್ರಿಕೆಟರ್‌ಗಳನ್ನು, ನಟರನ್ನು ಕಣ್ಣೆತ್ತಿಯೂ ನೋಡಲಾರೆ'' ಎಂದು ಸನ್ಯಾಸ ಸ್ವೀಕರಿಸಿದ್ದಾಳಂತೆ. ಆಕೆ ಇಷ್ಟೆಲ್ಲಾ ನಿರ್ಧರಿಸುವ ಹೊತ್ತಿಗೆ, ಆಕೆಯ ತಂಡ ಕಿಂಗ್ಸ್ ಪಂಜಾಬ್ ಸೋತು ಸುಣ್ಣವಾಗಿ ಸೆಮಿಫೈನಲ್‌ಗೆ ಪ್ರವೇಶಿಸದೆ ಹೊರಬಿದ್ದಿದೆ.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೀತಿ ಝಿಂಟಾ, ಯುವರಾಜ್, ನೆಸ್ ವಾಡಿಯಾ, ಬ್ರೆಟ್ ಲೀ, ಐಪಿಎಲ್, ಕಿಂಗ್ಸ್ ಪಂಜಾಬ್