ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಮಿಸ್ ಟಾಪ್‌ಲೆಸ್ ಪ್ರೇಮದಲ್ಲಿ ಮಿಸ್ಟರ್ ಟಾಪ್‌ಲೆಸ್ ಬಂಧಿ! (Salman Khan | Claudia Ciesla | Karma | Bollywood)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಕತ್ರಿನಾಗೆ ಗುಡ್‌ ಬೈ ಹೇಳಿದ ಮೇಲೆ ಸಲ್ಮಾನ್ ಇಷ್ಟು ದಿನ ಸುಮ್ಮನಿರುತ್ತಾನಾದರೂ ಹೇಗೆ ಎಂಬ ಪ್ರಶ್ನೆ ಹಲವರಲ್ಲಿ ಹುಟ್ಟುವುದಕ್ಕೆ ಆಸ್ಪದ ನೀಡದೇ ಸಲ್ಮಾನ್ ಖಾನ್ ಎಂಬ ಬಾಲಿವುಡ್ ಬ್ಯಾಡ್ ಬಾಯ್ ಈಗ ಹೊಸ 'ಗೆಳತಿ'ಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಸಲ್ಮಾನ್ ಹೃದಯಲ್ಲಿ ಕತ್ರಿನಾಗೆ ಕೊಟ್ಟಿದ್ದ ಜಾಗದಲ್ಲಿ ಕ್ಲಾಡಿಯಾ ಸೀಸ್ಲಾ ಎಂಬಾಕೆ ಆಕ್ರಮಿಸಿಕೊಂಡಿದ್ದಾಳೆ!

ಇದರಲ್ಲಿ ಆಶ್ಚರ್ಯದ ವಿಷಯವೇನಿಲ್ಲ ಬಿಡಿ. ಐಶ್ವರ್ಯಾ ರೈ ಜತೆಗೆ ರಾತ್ರೋ ರಾತ್ರಿ ರಾದ್ದಾಂತ ಮಾಡಿ ಪ್ರೇಮ ವಿಫಲವಾದ ಮೇಲೆ ಐಶ್ವರ್ಯಾಳ ತದ್ರೂಪಿನಂತಿದ್ದ ಸ್ನೇಹಾ ಉಲ್ಲಾಳ್ ಜತೆಗೆ ನಟಿಸಿ ಸುದ್ದಿ ಮಾಡಿದ್ದ ಸಲ್ಮಾನ್, ನಂತರದ ದಿನಗಳಲ್ಲಿ ಕತ್ರಿನಾ ಜತೆಗೆ ಪ್ರೇಮದ ಇನ್ನೊಂದು ಅಧ್ಯಾಯ ಶುರು ಮಾಡಿದ. ಅದೂ ಕೂಡ ವಿಫಲವಾದ ಮೇಲೆ ತಕ್ಷಣವೇ ಕ್ಲಾಡಿಯಾ ಎಂಬಾಕೆಗೆ ಗಂಟು ಬಿದ್ದಿದ್ದಾನೆ. ಜತೆಗೆ, ಈವರೆಗೆ ಬರಿಯ ಗಾಸಿಪ್ ಆಗಿ ಉಳಿದಿದ್ದ ಈ ಇಬ್ಬರ ಪ್ರೇಮ ಪರಿಣಯಕ್ಕೆ ಈಗ ಸ್ವತಃ ಸಲ್ಮಾನ್ ಅಧಿಕೃತ ಮುದ್ರೆಯನ್ನೂ ಒತ್ತಿದ್ದಾನೆ. ನಮ್ಮಿಬ್ಬರ ನಡುವೆ ಗೆಳೆತನಕ್ಕೂ ಮೀರಿದ್ದು ಏನೋ ಇದೆ ಎಂಬುದ್ನು ಆತನೇ ಒಪ್ಪಿಕೊಂಡಿದ್ದಾನಂತೆ.

ಪಾರ್ಟಿಯೊಂದರಲ್ಲಿ ಕ್ಲಾಡಿಯಾಳ ಅದ್ಭುತ ಸೌಂದರ್ಯ ಕಂಡು ಒಂದೇ ಗುರಿಗೆ ಕೆಳಗುರುಳಿದ ಹಕ್ಕಿಯ ಹಾಗೆ ಸಲ್ಮಾನ್ ಹೃದಯ ವಿಲವಿಲನೆ ಒದ್ದಾಡಿತಂತೆ. ತಕ್ಷಣವೇ ಕ್ಲಾಡಿಯಾಳನ್ನು ಪರಿಚಯ ಮಾಡಿಕೊಂಡು ಗೆಳೆತನ ಆರಂಭಿಸಿಯೂ ಬಿಟ್ಟಿದ್ದಾನೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 'ನನ್ನ ಮುಂದಿನ ಚಿತ್ರದಲ್ಲಿ ನೀನೇ ಹೀರೋಯಿನ್' ಅಂದಿದ್ದಾನೆ. ಜತೆಗೆ ಮನೆಗೆ ಕರೆದು ಉಪಚರಿಸಿದ್ದಾನೆ. ಇಷ್ಟೆಲ್ಲ ಯಾಗ ಮಾಡಿದ ಮೇಲೆ ಸಲ್ಮಾನ್‌ಗೆ ಯೋಗ ಕೂಡಿ ಬಂದಿದೆ. ಇದರ ಫಲವಾಗಿ, ಸ್ವಾತಿಮಳೆಗೆ ಗರಿಬಿಚ್ಚಿದ ನವಿಲಿನಂತೆ ದಿಲ್‌ಖುಷ್ ಆದ ಕ್ಲಾಡಿಯಾ ''ನನ್ನ ಹೀರೋ ನೀನೇನೇ..'' ಅಂತ ಬಾಲಿವುಡ್ಡಿನಲ್ಲಿ ಕುಣಿಯಲಾರಂಭಿಸಿದ್ದಾಳೆ.

IFM
ಅಂದ ಹಾಗೆ ಕ್ಲಾಡಿಯಾ ಸಾಮಾನ್ಯಳು ಅಂದುಕೋಬೇಡಿ. ಜರ್ಮನಿಯ ಸೂಪರ್ ಮಾಡೆಲ್ ಆಗಿರುವ ಈಕೆ ಇದೀಗ ಬಾಲಿವುಡ್ಡಿಗೆ ಬಾಂಬ್‌ಶೆಲ್‌ನಂತೆ ಬಂದಿಳಿದಿದ್ದಾಳೆ. ಬಿಚ್ಚುವುದರಲ್ಲೂ ಈಕೆಯದು ಎತ್ತಿದ ಕೈಯೇ. ಮ್ಯಾಗಜಿನ್ ಒಂದಕ್ಕೆ ಬೆತ್ತಲೆ ಪೋಸ್ ಕೊಟ್ಟು ತನ್ನ ಎದೆಗಾರಿಕೆ ತೋರಿಸಿದ್ದ ಈಕೆಯ ಫೋಟೋಗಳು ಈಗ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್ ಅಂತೆ!

ಸದ್ಯ ಈಕೆ ಶಹಜಹಾನ್ ನಿರ್ದೇಶನದ ಕರ್ಮ ಎಂಬ ಹಿಂದಿ/ಇಂಗ್ಲೀಷ್ ಚಿತ್ರದಲ್ಲಿ ನಟಿಸುತ್ತಿದ್ದು, ಬಾಲಿವುಡ್ಡಿನಲ್ಲೇ ಜಮಖಾನ ಹಾಸಿ ಕೂರಲು ಎಲ್ಲ ತಯಾರಿಯೂ ಮಾಡುತ್ತಿದ್ದಾಳೆ. ಸಲ್ಮಾನ್ ಜತೆಗೆ ಸಂಬಂಧ ಖುಲಾಯಿಸಿದ್ದೇ ತಡ, ಕತ್ರಿನಾಗೆ ಸಡ್ಡು ಹೊಡೆಯಲು ಪೂರಕ ತಯಾರಿಯನ್ನೂ ಆರಂಭಿಸಿದ್ದಾಳೆ. ಲಂಡನ್‌ನಲ್ಲೇ ಹುಟ್ಟಿ ಬೆಳೆದ ಹಾಗೂ ಸ್ವಲ್ಪವೂ ಹಿಂದಿ ಮಾತನಾಡಲು ಬರದ ಹಾಗೂ ಈಗಷ್ಟೆ ಹಿಂದಿ ಕಲಿಯುತ್ತಿರುವ ಕತ್ರಿನಾಳಂಥವರೇ ಬಾಲಿವುಡ್ಡಿನಲ್ಲಿ ಬಹುಬೇಡಿಕೆಯ ತಾರೆಯಾಗಬಹುದಾದರೆ ನಾನ್ಯಾಕೆ ಆಗಬಾರದು ಎಂಬ ಪ್ರಶ್ನೆ ಈಕೆಯದು.

ಕ್ಲಾಡಿಯಾ ಹೇಳುವಂತೆ, ನನಗೆ ಭಾರತೀಯ ಸಂಪ್ರದಾಯ, ಸಂಸ್ಕೃತಿ ತುಂಬ ಇಷ್ಟವಾಗಿದೆ. ಜೂನ್ ಮಳೆ ಮುಗಿದ ತಕ್ಷಣ ನಾನು ಪರ್ಮನೆಂಟಾಗಿ ಇಲ್ಲೇ ಠಿಕಾಣಿ ಹೂಡಲು ಬರುತ್ತಿದ್ದೇನೆ. ಆದರೆ ದಯವಿಟ್ಟು ನನ್ನನ್ನು ಟಾಪ್‌ಲೆಸ್ ಮಾಡೆಲ್, ಬೆತ್ತಲೆಯಾಗಿ ಪೋಸ್ ಕೊಟ್ಟ ಮಾಡೆಲ್ ಎಂದು ಬ್ರ್ಯಾಂಡ್ ಮಾಡಬೇಡಿ ಎಂದೂ ವಿನಂತಿಸುತ್ತಾಳೆ.
PR


ಮೊನ್ನೆ ಮೊನ್ನೆಯಷ್ಟೆ ಸಲ್ಮಾನ್ ಆಹ್ವಾನದ ಮೇರೆಗೆ ಆತನ ಮನೆಗೆ ಹೋದ ಕ್ಲಾಡಿಯಾ, ಸಲ್ಮಾನ್ ಕುಟುಂಬ ನೋಡಿ ತುಂಬ ಖುಷಿಯಾಗಿದ್ದಾಳೆ. ''ಸಲ್ಮಾನ್‌ನ ಹ್ಯಾಂಡ್‌ಸಂ ಅಪ್ಪ, ಸಹೋದರ ಸಹೋದರಿಯರು ತುಂಬ ಒಳ್ಳೆಯವರು. ಆತನಿಗೆ ದೊಡ್ಡಸ್ತಿಕೆಯೇ ಇಲ್ಲ. ಆತನ ಹೃದಯ ಚಿನ್ನದಂಥದ್ದು. ಆತನಿಗೆ ಹೆದರಿಕೆ ಎಂಬುದೇ ಇಲ್ಲ. ಯಾರೊಂದಿಗೂ ಸುಲಭವಾಗಿ ಬೆರೆಯಬಲ್ಲ ಹಾಲಿನಂತಹ ಗುಣ ಅವನದ್ದು. ಸಲ್ಮಾನ್ ನನ್ನ ಹೀರೋ'' ಎಂದೆಲ್ಲ ಬಿಚ್ಚಿಟ್ಟಿದ್ದಾಳೆ.

ಸಲ್ಮಾನ್ ಖಾನ್ ನಟಿಸಿದ ಕೆಲವು ಚಿತ್ರಗಳನ್ನು ನೋಡಿದ್ದೇನೆ. ಜತೆಗೆ ಅಭಿಷೇಕ್ ಬಚ್ಚನ್, ಶಾರುಖ್, ಅಕ್ಷಯ್ ಕುಮಾರ್ ಅವರ ಚಿತ್ರಗಳನ್ನೂ ನೋಡಿದ್ದೇನೆ. ಅವರೆಲ್ಲರೂ ಪ್ರತಿಭಾವಂತ ನಟರೆಂಬುದರಲ್ಲಿ ಸಂಶಯವೇ ಇಲ್ಲ. ಜರ್ಮನಿಯಲ್ಲಿ ಬಾಲಿವುಡ್ ಸಿನಿಮಗಳಿಗೆ ಉತ್ತಮ ಮಾರ್ಕೆಟ್ ಇದೆ. ನನಗೆ ಬಾಲಿವುಡ್ ಸಿನಿಮಾಗಳಲ್ಲಿರುವ ಭಾವುಕತೆ, ಹಾಡು, ನೃತ್ಯ ಇವೆಲ್ಲವೂ ತುಂಬ ಇಷ್ಟ. ಸಲ್ಮಾನ್ ಜತೆಗೆ ನಟಿಸಬೇಕೆಂದು ಆಸೆಯಿದೆ. ಆದರೆ ಸಿನಿಮಾ ಬಗ್ಗೆ ಇನ್ನೂ ಮಾತುಕತೆ ನಡೆದಿಲ್ಲ. ನಾನು ಶೀಘ್ರದಲ್ಲೇ ಹಿಂದಿ ಕಲಿತು ಬಾಲಿವುಡ್‌ನಲ್ಲಿ ಉತ್ತಮ ಅವಕಾಶಕ್ಕೆ ಕಾಯುತ್ತೇನೆ ಎಂದಿದ್ದಾಳೆ.

'ಮಿಸ್ಟರ್ ಟಾಪ್‌ಲೆಸ್‌'ಗೆ ಒಬ್ಬ 'ಮಿಸ್ ಟಾಪ್‌ಲೆಸ್'! ಹೇಳಿ ಮಾಡಿಸಿದಂಥ ಜೋಡಿಯಲ್ದೇ ಇನ್ನೇನು?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್, ಕ್ಲಾಡಿಯಾ ಸೀಸ್ಲಾ, ಬಾಲಿವುಡ್ ಗಾಸಿಪ್, ಕರ್ಮ