ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಕೆಲಸದಾಕೆಯ ಮೇಲೆ ಬಲಾತ್ಕಾರ ನಡೆದಿದೆ: ವೈದ್ಯಪರೀಕ್ಷೆ! (Shiney Ahuja | Oshiwara police | Bollywood | Rape)
ಸುದ್ದಿ/ಗಾಸಿಪ್
Feedback Print Bookmark and Share
 
Shiney Ahuja
IFM
ಕೆಲಸದಾಕೆಯ ಮೇಲೆ ಬಾಲಿವುಡ್ ನಟ ಶೈನಿ ಅಹುಜಾ ಅತ್ಯಾಚಾರ ನಡೆಸಿದ್ದರು ಎನ್ನಲಾದ ಪ್ರಕರಣಕ್ಕೆ ಇದೀಗ ವೈದ್ಯಕೀಯ ಪರೀಕ್ಷೆಗಳೂ ಪೂರಕ ವರದಿಯನ್ನೇ ನೀಡಿವೆ. ಕೆಲಸದಾಕೆಯ ಜತೆ ನಡೆದ ಲೈಂಗಿಕ ಸಂಪರ್ಕದಲ್ಲಿ ಬಲಾತ್ಕಾರ ನಡೆದಿದೆ ಎನ್ನಲಾಗಿದ್ದು, ಆಕೆಗೆ ಕೇವಲ 17ರಿಂದ 18 ವರ್ಷವಿರಬಹುದು ಎಂದೂ ಅಂದಾಜಿಸಲಾಗಿದೆ.

ಕೆಲಸದಾಕೆ ನೀಡಿದ ಪೊಲೀಸ್ ದೂರಿನ ನಂತರ ನಾಗ್‌ಪಾಡಾ ಪೊಲೀಸ್ ಆಸ್ಪತ್ರೆಯಲ್ಲಿ ನಡೆದ ಶೈನಿ ಅಹುಜಾ ಹಾಗೂ ಕೆಲಸದಾಕೆಯ ಪ್ರಾಥಮಿಕ ವೈದ್ಯ ಪರೀಕ್ಷೆ ನಡೆಸಲಾಗಿದೆ. ವೈದ್ಯ ಪರೀಕ್ಷೆಯಲ್ಲಿ ಕೆಲಸದಾಕೆಯ ಗುಪ್ತಾಂಗಗಳಲ್ಲಿ ಗಾಯಗಳಿದ್ದು, ಆಕೆಯ ಮೇಲೆ ಬಲಾತ್ಕಾರ ಮಾಡಲಾಗಿದೆ ಎಂಬುದು ಗೊತ್ತಾಗುತ್ತದೆ. ಇದಲ್ಲದೆ ಬೇರೆ ಗಾಯಗಳೇನೂ ಇರದಿದ್ದರೂ, ಇದು ಆಕೆಗೆ ಮೊದಲ ಲೈಂಗಿಕ ಸಂಬಂಧವಾಗಿದೆ ಎಂಬುದು ವೈದ್ಯಪರೀಕ್ಷೆಯಿಂದ ದೃಢಪಟ್ಟಿದೆ. ಅಲ್ಲದೆ ಆಕೆಯ ಮೂತ್ರ ಪರೀಕ್ಷೆಯನ್ನೂ ಮುಂದಿನ ಹಂತದಲ್ಲಿ ನಡೆಸಲಿದ್ದು, ಆಕೆ ಗರ್ಭಿಣಿಯಾಗಿದ್ದಾಳೆಯೇ ಎಂದು ಪತ್ತೆಹಚ್ಚಲಿದ್ದಾರೆ.

ಇದಲ್ಲದೆ, ಪ್ರಮುಖ ಬೆಳವಣಿಗೆಯಲ್ಲಿ ಕೆಲಸದಾಕೆಯ ಎಲುಬಿನ ಎಕ್ಸ್‌ರೇ ಪರೀಕ್ಷೆಯ ವೇಳೆ ಆಕೆಗೆ ಇನ್ನೂ 18 ದಾಟಿಲ್ಲ ಎಂಬುದು ತಿಳಿದು ಬಂದಿದೆ. ಬಹುಶಃ ಆಕೆಗೆ 17ರಿಂದ 18 ವರ್ಷ ವಯಸ್ಸಾಗಿರಬಹುದು ಎಂದು ವೈದ್ಯ ಪರೀಕ್ಷೆ ವರದಿ ನೀಡಿದೆ.

ನಾಗ್‌ಪಾಡಾ ಪೋಲೀಸ್ ಆಸ್ಪತ್ರೆಯ ಪೊಲೀಸ್ ಸರ್ಜನ್ ಡಾ.ಎಂ.ಎಂ.ಪಾಟೀಲ್ ಹೇಳುವಂತೆ, ಈ ವೈದ್ಯ ಪರೀಕ್ಷೆಗಳು ಬಹಳ ಪ್ರಮುಖ ಪಾತ್ರ ವಹಿಸುತ್ತಿದ್ದು, ಹಲವು ಸಾಕ್ಷಿಗಳನ್ನು ನೀಡುತ್ತದೆ. ಹಾಗಾಗಿ ಆಕೆಯ ವೈದ್ಯ ಪರೀಕ್ಷೆಯಲ್ಲಿ ಆಕೆಯ ಗುಪ್ತಾಂಗಗಳಲ್ಲಿದ್ದ ಕಲೆಯನ್ನು ಹೆಚ್ಚಿನ ಕೆಮಿಕಲ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.

ಇದಲ್ಲದೆ, ಆಕೆಗೆ ಲೈಂಗಿಕ ಸಂಪರ್ಕಕ್ಕೂ ಮುನ್ನ ಡ್ರಗ್ಸ್ ಅಥವಾ ಆಲ್ಕೋಹಾಲನ್ನು ನೀಡಲಾಗಿತ್ತೇ ಎಂಬ ಮಾಹಿತಿಯನ್ನು ಪತ್ತೆ ಹಚ್ಚಲು ಆಕೆಯ ರಕ್ತದ ಸ್ಯಾಂಪಲ್‌ಗಳನ್ನೂ ಹೆಚ್ಚಿನ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು. ಆದರೆ ಅಹುಜಾ ಅವರ ವೈದಯ ಪರೀಕ್ಷೆಗಳಲ್ಲಿ ಯಾವುದೇ ಅಂಶ ಕಂಡು ಬಂದಿಲ್ಲ. ಅವರ ದೇಹದಲ್ಲಿ ಯಾವುದೇ ಗಾಯದ ಗುರುತಿಲ್ಲ. ಆದರೆ ಅಹುಜಾ ನಡೆಸಿದ್ದಾರೆ ಎನ್ನಲಾದ ಬಲಾತ್ಕಾರದ ವೇಳೆ ಅವರು ಪಾನಮತ್ತರಾಗಿದ್ದರೇ ಎಂಬುದನ್ನು ಪತ್ತೆಹಚ್ಚಲು ಅಹುಜಾರ ರಕ್ತದ ಸ್ಯಾಂಪಲ್‌ಗಳನ್ನು ಕೆಮಿಕಲ್ ಪರೀಕ್ಷೆಗಳಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೈನಿ ಅಹುಜಾ, ಅತ್ಯಾಚಾರ, ಬಾಲವುಡ್, ಓಶಿವಾರಾ ಪೊಲೀಸ್