ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಶಾರುಖ್-ಕಾಜೋಲ್ ಜೋಡಿಯ 'ಮೈ ನೇಮ್ ಈಸ್ ಖಾನ್' (Shahrukh Khan | Kajol | Karan Johar | My Name Is Khan)
ಸುದ್ದಿ/ಗಾಸಿಪ್
Feedback Print Bookmark and Share
 
Kajol
IFM
'ಶಾರುಖ್ ಖಾನ್ ಹಾಗೂ ಕಾಜೋಲ್! ವಾಹ್ವ್! ಜತೆಯಾಗಿ ನೋಡದೆ ಎಷ್ಟು ಸಮಯವಾಯಿತು...' ಎಂದು ಅಂದುಕೊಂಡಿದ್ದವರಿಗೆಲ್ಲ ಈಗ ಸಿಹಿಸುದ್ದಿಯಿದೆ. ಶಾರುಖ್ -ಕಾಜೋಲ್ ಜೋಡಿ ಇನ್ನೇನು ಕೆಲವೇ ತಿಂಗಳುಗಳಲ್ಲಿ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ಅದೂ ಕೂಡಾ ತಮ್ಮ ರೊಮ್ಯಾಂಟಿಕ್ ಲವ್ ಸ್ಟೋರಿ ಮೂಲಕ.

ಕರಣ್ ಜೋಹರ್ ನಿರ್ದೇಶನದ 'ಮೈ ನೇಮ್ ಈಸ್ ಖಾನ್' ಚಿತ್ರದಲ್ಲಿ ಶಾರುಖ್- ಕಾಜೋಲ್ ಜೋಡಿ ಮೋಡಿ ಮಾಡಲಿದೆ. ಈಗಾಗಲೇ ಅಮೆರಿಕದಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಶಾರುಖ್ ಕಾಜೋಲ್ ಜೋಡಿಯ ಈ ಚಿತ್ರ ಬಹುಶಃ 2010ರ ಮೊದಲ ತಿಂಗಳಲ್ಲೇ ಬಿಡುಗಡೆ ಕಾಣಬಹುದು.

ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೇ, ಕುಚ್ ಕುಚ್ ಹೋತಾ ಹೇ...ಗಳಲ್ಲಿ ಕಾಣಿಸಿಕೊಂಡ ಈ ರೊಮ್ಯಾಂಟಿಕ್ ಹಿಟ್ ಜೋಡಿ ಭಾರತದಲ್ಲಷ್ಟೇ ಅಲ್ಲ ವಿಶ್ವದೆಲ್ಲೆಡೆ ಸುದ್ದಿ ಮಾಡಿದೆ. ಶಾರುಖ್- ಕಾಜೋಲ್ ಜೋಡಿ ಸದ್ಯ ಅಮೆರಿಕದ ಸಾನ್ ಫ್ರಾನ್ಸಿಸ್ಕೋದಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿ. ಆದರೆ, ಶೂಟಿಂಗ್ ನಡೆಸಲು ಮಾತ್ರ ಅಮೆರಿಕದಲ್ಲಿ ಯಾರೂ ಬಿಡುತ್ತಿಲ್ಲ ಎಂಬುದೇ ಈಗ ಕರಣ್ ಜೋಹರ್‌ಗೆ ದೊಡ್ಡ ಚಿಂತೆ!

ಹೇಳಿ ಕೇಳಿ ಅಮೆರಿಕದಲ್ಲಿ ಬೇಕಾಬಿಟ್ಟಿ ಭಾರತೀಯರಿದ್ದಾರೆ. ಭಾರತೀಯರು ಎಂದ ಮೇಲೆ ಹುಟ್ಟಿದ ನಾಡಿನ ಪ್ರೇಮ ಘಟ್ಟ ಹತ್ತಿದರೂ ಹೋಗುವುದಿಲ್ಲ ಅಂತಾರಲ್ಲ ಹಾಗೆ, ಬಾಲಿವುಡ್ಡಿನ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇರೋರೇ ಜಾಸ್ತಿ. ಅದರಲ್ಲೂ ಶಾರುಖ್- ಕಾಜೋಲ್ ಜೋಡಿ ಎಂದರೆ ಮುಗೀತು. ಭಾರತೀಯರನ್ನು ಹೊರತುಪಡಿಸಿ ವಿದೇಶೀಯರಿಗೂ ಶಾರುಖ್ ಪ್ರೀತಿಯ ನಟ. ಹೊರದೇಶಗಳಲ್ಲಿ ಹೆಚ್ಚು ಬಿಕರಿಯಾಗುವ ವಿಡಿಯೋ ಸಿಡಿಗಳೂ ಶಾರುಖ್ ಚಿತ್ರಗಳವೇ. ಹೀಗಾಗಿ, ಶಾರುಖ್ -ಕಾಜೋಲ್‌ರ ಶೂಟಿಂಗ್ ನೋಡಲು ಜನರು ಓಡೋಡಿ ಬಂದ್ರು. ಇದರಿಂದ ಕರಣ್ ಜೋಹರ್ ಸುಸ್ತೋ ಸುಸ್ತು.
Shahrukh Khan
IFM

2009ರ ಅಂತ್ಯದಲ್ಲಿ ಕರಣ್ ಜೋಹರ್ ಮೈ ನೇಮ್ ಈಸ್ ಖಾನ್ ಚಿತ್ರ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದರು. ಆದರೆ ಅವರಂದುಕೊಂಡಂತೆ ಯಾವುದೂ ಆಗುತ್ತಿಲ್ಲ. ಅಮೆರಿಕದಲ್ಲಿ ಅಭಿಮಾನಿಗಳ ಕಾಟದಿಂದ ಶೂಟಿಂಗ್‌ ನಡೆಸಲೇ ಆಗಲಿಲ್ಲ ಜೋಹರ್‌ಗೆ. ಹಿಂದಿನಿಂದ ಧ್ವನಿವರ್ಧಕ ಬಳಸಿ ಶೂಟಿಂಗ್ ನಡೆಸಲು ಕರಣ್ ಹೊರಟರೆ ಅಭಿಮಾನಿಗಳ ಬೊಬ್ಬೆಯಿಂದ ಧ್ವನಿವರ್ಧಕದ ಶಬ್ದವೇ ಕೇಳಲಿಲ್ಲವಂತೆ. ಎಲ್ಲಿ ನೋಡಿದರೂ ಜನಜಂಗುಳಿ. ಒಟ್ಟಾರೆ, ಕರಣ್ ಜೋಹರ್ ಮಾತ್ರ ಮಂಡೆ ಬಿಸಿ ಮಾಡಿ ಮಗುಮ್ಮಾಗಿ ಕುಳಿತೇ ಬಿಟ್ಟಿದ್ದಾರೆ. ಹೀಗೆಲ್ಲಾ ಆದ್ರೆ ನಾನು ಈ ವರ್ಷ ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ. ಇದು 2010ರಲ್ಲಷ್ಟೇ ಬಿಡುಗಡೆ ಕಾಣಲು ಸಾಧ್ಯ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಅಂದಹಾಗೆ, ಈ ಚಿತ್ರದಲ್ಲಿ ಶಾರುಖ್ ಖಾನ್ ವಿಶಿಷ್ಟ ಅವತಾರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅವರ ಸ್ಟೈಲ್ ಇದರಲ್ಲಿ ವಿಶೇಷ ರೂಪದಲ್ಲಿ ವಿನ್ಯಾಸ ಮಾಡಲಾಗಿದ್ದು, ಇದೂ ಕೂಡಾ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿಯೇ ಅಂತೆ. ಅಮೆರಿಕದಲ್ಲಿರುವ ಮುಸ್ಲಿಂ ಯುವಕನ ಕಥೆ ಇದು ಎಂದು ಕಥೆಯ ಒಂದೇ ಎಳೆಯನ್ನು ಬಿಚ್ಚಿರುವ ಕರಣ್, ಚಿತ್ರದ ಬಗ್ಗೆ ವಿಶೇಷ ಮಾಹಿತಿಯನ್ನೇನೂ ನೀಡಿಲ್ಲ. ಚಿತ್ರ ಬಿಡುಗಡೆಯನ್ನೂ ಅಮೆರಿಕದ ವಿತರಕರ ಮೂಲಕ ನಡೆಸಲಿದ್ದಾರೆ ಎಂಬ ಗುಸು ಗುಸು ಕೂಡಾ ಬಾಲಿವುಡ್ಡಿನಲ್ಲಿದೆ.
Kajol and Shahrukh Khan
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೈ ನೇಮ್ ಈಸ್ ಖಾನ್, ಶಾರುಖ್ ಖಾನ್, ಕಾಜೋಲ್, ಕರಣಿ ಜೋಹರ್