ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಪ್ರೀತಿ-ನೆಸ್ ಪ್ರೀತಿ ಮುರಿದದ್ದು ಯಾಕೆ ಗೊತ್ತಾ? (Preity Zinta | Ness Wadia | IPL | Bollywood)
ಸುದ್ದಿ/ಗಾಸಿಪ್
Feedback Print Bookmark and Share
 
Preity Zinta
IFM
ಪ್ರೀತಿ ಹಾಗೂ ನೆಸ್ ವಾಡಿಯಾ ಇನ್ನೇನು ಮದುವೆಯಾಗಿಯೇ ಬಿಡುತ್ತಾರೆ ಎಂದು ಬಾಲಿವುಡ್ಡಿನ ಆಕೆಯ ಗೆಳೆಯ ಗೆಳತಿಯರು ತಯಾರಿಯಲ್ಲಿರುವಾಗಲೇ ಈ ಇಬ್ಬರ ಪ್ರೀತಿ ಕಳಚಿ ಬಿದ್ದುದು ಹಳೇಕಥೆ. ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ನಡೆಯುವ ಏರುಹೊತ್ತಿನಲ್ಲೇ ಅಲ್ಲಿಂದ ಮುಂಬೈ ಚಾವಡಿಗೆ ನೆಸ್- ಪ್ರೀತಿ ನಡುವಿನ ಪ್ರೀತಿಗೆ ಎಳ್ಳುನೀರು ಬಿಟ್ಟ ಸುದ್ದಿ ತೇಲಿ ಬಂದಿತ್ತು. ಆದರೆ ಇವರಿಬ್ಬರ ನಡುವ ಪ್ರೀತಿ ಮುರಿದು ಬಿದ್ದಿದ್ದು ಯಾಕೆ ಎಂಬುದು ಬಹಿರಂಗಗೊಂಡಿರಲಿಲ್ಲ. ಆದರೆ ಈಗಷ್ಟೇ ಆ ಸುದ್ದಿಯೂ ಬಹಿರಂಗಗೊಂಡಿದೆ.

ಗುಳಿ ಕೆನ್ನೆಯ ಸುಂದರಿ ಪ್ರೀತಿಯ ಆಪ್ತ ಮೂಲಗಳ ಪ್ರಕಾರ, ನೆಸ್ ಪ್ರೀತಿಯನ್ನು ಮದುವೆಯಾಗಲು ಒಂದು ಶರತ್ತು ಹಾಕಿದ್ದರಂತೆ. ಅದೇನಪ್ಪಾ ಅಂದರೆ, ಮದುವೆಯ ನಂತರ ಸಿನಿಮಾದಲ್ಲಿ ನಟಿಸುವಂತಿಲ್ಲ!

ಸಾಕಷ್ಟು ಯಶಸ್ವೀ ಚಿತ್ರಗಳನ್ನು ನೀಡಿದ ಈ ರಜಪೂತೆಗೆ ನೆಸ್‌ನ ಈ ಹೊಸ ವರಸೆ ಸುತಾರಾಂ ಇಷ್ಟವಾಗಿಲ್ಲ. ಅಷ್ಟೇ ಅಲ್ಲ ಪ್ರೀತಿಯ ಮಟ್ಟಿಗೆ ಇದೊಂದು ದೊಡ್ಡ ಶಾಕ್. ಆದರೂ, ಮದುವೆಯ ನಂತರ ಸಿನಿಮಾದಲ್ಲಿ ನಟಿಸಬಾರದೆಂದರೆ, ನೆಸ್ ಜತೆಗೆ ಮದುವೆಯೂ ಸಾಧ್ಯವಿಲ್ಲ ಎಂದು ಕಟುವಾದ ನಿರ್ಣಯ ಕೈಗೊಂಡೇ ಬಿಟ್ಟಳಂತೆ.

ಹೇಳಿ ಕೇಳಿ, ಪ್ರೀತಿ ದಶಕಗಳಿಂದ ಬಾಲಿವುಡ್‌ನಲ್ಲಿ ಯಾರ ನೆರವೂ ಇಲ್ಲದೇ ತಾನೇ ಕಟ್ಟಿದ ಸಾಧನೆಯ ಮೆಟ್ಟಿಲನ್ನು ಒಂದೊಂದಾಗಿ ಏರಿ ಬಂದವಳು. ಸಿನಿಮಾಕ್ಕೆ ಬರಬೇಕೆಂದು ಆಸೆಪಟ್ಟು ಬರಲಿಲ್ಲವಾದರೂ, ಆಕಸ್ಮಿಕವಾಗಿ ಸಿಕ್ಕ ಅವಕಾಶವನ್ನು ಯಥೇಚ್ಛವಾಗಿ ಬಳಸಿಕೊಂಡು ಬಾಲಿವುಡ್ಡಿನ ಪ್ರಮುಖ ನಟಿಯಾಗಿ ಮಿಂಚಿದವಳು. ಹತ್ತು ವರ್ಷಗಳಲ್ಲಿ ತಾನು ಗಳಿಸಿದ ಕೀರ್ತಿ, ಸಾಧನೆ ಎಲ್ಲವನ್ನು ಬಿಟ್ಟುಬಿಡು ಎಂದರೆ ನೋವಾಗದಿರುತ್ತದೆಯೇ ಎಂಬುದು ಪ್ರೀತಿಯ ಆಪ್ತವಲಯದವರ ಜಿಜ್ಞಾಸೆ.

Preity Zinta, Ness Wadia
IFM
ಒಟ್ಟಾರೆ, ನೆಸ್ ಶರತ್ತಿನಿಂದ ಪ್ರೀತಿಗೆ ಸಿಕ್ಕಾಪಟ್ಟೆ ನೋವಾಗಿದೆ. ಅದರಲ್ಲೂ ಪ್ರೀತಿ ಝಿಂಟಾ ಪ್ರೀತಿಯನ್ನು ಯಾವುದೇ ಶರತ್ತು, ಕೊಡುಕೊಳ್ಳುವಿಕೆಯ ಆಧಾರದಲ್ಲಿ ಅಳೆದವಳಲ್ಲ. ಯಾವುದೇ ಶರತ್ತಿಲ್ಲದೆಯೂ ಪ್ರೀತಿ ಶಾಶ್ವವಾಗಿರಬೇಕು. ಶರತ್ತಿನ ಮೇಲೆ ಪ್ರೀತಿಯ ಆಳ, ಅಗಲ ನಿರ್ಧರಿಸಲಾಗುವುದಿಲ್ಲ. ಹಾಗಿದ್ದರೆ ಅದು ಪ್ರೀತಿಯೇ ಅಲ್ಲ ಎಂಬ ತನ್ನದೇ ವಾದವನ್ನು ಈವರೆಗೆ ಬೆಳೆಸಿಕೊಂಡೇ ಬಂದ ಪ್ರೀತಿಗೆ ಈಗ ನಾಲ್ಕು ವರ್ಷಗಳಿಂದ ಪ್ರೀತಿಸಿದ ಉದ್ಯಮಿ ನೆಸ್ ಕೂಡಾ ಶರತ್ತನ್ನೇ ಹಾಕಿದ್ದಾರೆ. ಈ ಶರತ್ತಿನ ಮೇಲೆ ಮದುವೆ ಅನ್ನುವ ಬಂಧ ಏರ್ಪಡುವುದಾದರೆ, ನನಗೆ ಇಂಥ ಪ್ರೀತಿ ಬೇಕಾಗಿಲ್ಲ ಎಂದು ಪ್ರೀತಿ ನಿರ್ಧರಿಸಿದ್ದಾಳೆ. ಹೀಗಾಗಿ ನೆಸ್ ಜತೆಗೆ ಪ್ರೀತಿಯ ಕೊಂಡಿಯನ್ನು ಪ್ರೀತಿಯೇ ಕಡಿದುಕೊಂಡಿದ್ದಾಳೆ ಎನ್ನುತ್ತಾರೆ ಪ್ರೀತಿಯ ಆಪ್ತರು.

ಪ್ರೀತಿಗೆ ಈಗ ಬಾಲಿವುಡ್ಡಿನಲ್ಲಿ ಅಂಥಾ ಕೈತುಂಬಾ ಅವಕಾಶಗಳಿಲ್ಲದಿದ್ದರೂ, ಸಂಪೂರ್ಣವಾಗಿ ಬಾಲಿವುಡ್ಡಿಗೆ ಗುಡ್‌ಬೈ ಹೇಳಿ ನೆಸ್ ಪಟ್ಟದರಸಿಯಾಗಿ ಮನೆಯಲ್ಲಿ ಕೂತಿರಲು ಸಾಧ್ಯವೇ ಇಲ್ಲ. ಈವರೆಗೆ ಹತ್ತು ವರ್ಷಗಳ ಕಾಲ ತನ್ನದೇ ಸಾಧನೆ, ತನ್ನದೇ ದುಡ್ಡಿನಿಂದ ತನ್ನದೇ ಪ್ರಪಂಚದಲ್ಲಿದ್ದ ಪ್ರೀತಿ ಈಗ ಏಕಾಏಕಿ ಅವೆಲ್ಲವನ್ನೂ ಕಳೆದುಕೊಂಡು ಆರ್ಥಿಕವಾಗಿಯೂ ತನ್ನ ಸ್ವಾವಲಂಬನೆ ಸಾಧ್ಯವಾಗದಿದ್ದರೆ, ಅದು ಆಕೆಗೆ ತುಂಬ ಕಷ್ಟ ಎನ್ನುತ್ತಾರೆ ಈ ಗುಳಿಕೆನ್ನೆ ಚೆಲುವೆಯ ಆಪ್ತರು.

ಸದ್ಯಕ್ಕೆ ಪ್ರೀತಿ ಕೈಯಲ್ಲಿ ಯಶ್ ಛೋಪ್ರಾರ ಒಂದು ಭರ್ಜರಿ ಚಿತ್ರವಿದೆ. ಚಿತ್ರಕ್ಕೆ ಅಮೀರ್ ಖಾನ್ ನಾಯಕ. ಅಮೀರ್ ಸದ್ಯ ಈ ಚಿತ್ರದಿಂದ ಹಿಂದೆ ಸರಿದಿದ್ದಾರೆಂಬ ಸುದ್ದಿ ಇದ್ದರೂ, ಅದೊಂದು ಬೇರೆಯೇ ಕಥೆ. ಏನೇ ಇರಲಿ. ಪ್ರೀತಿಗೆ ಅವಕಾಶ ಕಡಿಮೆಯಾದರೂ, ಅವಕಾಶವೇ ಇಲ್ಲವೆಂದಿಲ್ಲ. ಹಾಗಾಗಿ ಪ್ರೀತಿಗೆ ಬಾಲಿವುಡ್ ಜಗತ್ತಿನ ನಂಟು ಕಳೆದುಕೊಳ್ಳಲು ಇಷ್ಟವಿಲ್ಲ.

ಒಟ್ಟಾರೆ ಸಂಬಂಧವಂತೂ ಮುರಿದುಬಿದ್ದಿದೆ ನಿಜ. ಪ್ರೀತಿಗೆ ಇದರಿಂದ ದೊಡ್ಡ ಶಾಕ್ ಆಗಿದ್ದೂ ಅಷ್ಟೇ ನಿಜ. ಅದಕ್ಕೇ ಇರಬೇಕು. ಪ್ರೀತಿ ಈಗ ಪ್ರೀತಿಯಿಂದ ಪಾಠ ಕಲಿತು ಇತ್ತೀಚೆಗಷ್ಟೇ ದಯವಿಟ್ಟು, ವಿವಾಹಿತರನ್ನು, ಕ್ರಿಕೆಟಿಗರನ್ನು ಹಾಗೂ ನಟರನ್ನು ಎಂದಿಗೂ ಪ್ರೀತಿಸಬೇಡಿ ಎಂದು ಜಗತ್ತಿಗೇ ಬುದ್ಧಿ ಮಾತು ಹೇಳಿದ್ದು ಇದಕ್ಕೇ ಇರಬೇಕು. ಪಾಪ..!
Preity Zinta
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೀತಿ ಝಿಂಟಾ, ನೆಸ್ ವಾಡಿಯಾ, ಐಪಿಎಲ್, ಬಾಲಿವುಡ್