ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಐಶ್- ಪ್ರಿಯಾಂಕಾ ವಾರ್- ಇದು ಅತ್ತೆ ಸೊಸೆ ವಿಷಯ! (Aishwarya Rai | Jaya Bachchan | Priyanka Chopra | IIFA | Fashion)
ಸುದ್ದಿ/ಗಾಸಿಪ್
Feedback Print Bookmark and Share
 
Aishwarya Rai
IFM
ನಿನ್ನೆ ಮೊನ್ನೆ ಬಂದ ಸೋನಂ ಕಪೂರ್ ಜತೆಗೆ ಇತ್ತೀಚೆಗೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವ ಕ್ಷುಲ್ಲಕ ವಿಷಯದಲ್ಲಿ ಶೀತನ ಸಮರ ನಡೆಸಿದ್ದಾಯಿತು. ಇದೀಗ ಮತ್ತೆ ಈ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಸುದ್ದಿಯಲ್ಲಿದ್ದಾರೆ. ಫ್ಯಾಷನ್ ಚಿತ್ರದ ಬೆಡಗಿ, ಇನ್ನೊಬ್ಬ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಛೋಪ್ರಾ ಜತೆಗೆ ಪ್ರತ್ಯಕ್ಷವಾಗಿಯಲ್ಲದಿದ್ದರೂ, ಪರೋಕ್ಷವಾಗಿ ಐಶ್ ಬೇಬಿಯ ಐಸಿನಂತಹ ಕೋಲ್ಡ್ ವಾರ್ ನಡೆಯುತ್ತಿದೆ.

ವಿಷಯ ಇಷ್ಟೇ. ಮೊನ್ನೆ ಮೊನ್ನೆ ನಡೆದ ಐಐಎಫ್‌ಎ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉತ್ತಮ ನಟಿ ಪ್ರಶಸ್ತಿ ಫ್ಯಾಷನ್ ಚಿತ್ರದ ಅಭಿನಯಕ್ಕಾಗಿ ಪ್ರಿಯಾಂಕಾ ಛೋಪ್ರಾ ಪಾಲಾಯಿತೋ... ಆಗಲೇ ಬಚ್ಚನ್ ಕುಟುಂಬ ಹುಬ್ಬು ಹಾರಿಸಿತ್ತು. ಜೋಧಾ ಅಕ್ಬರ್ ಚಿತ್ರದಲ್ಲಿ ಅದ್ಭುತ ಅಭಿನಯ ನೀಡಿದ ನಮ್ಮ ಸೊಸೆಗೆ ಯಾಕೆ ಉತ್ತಮ ನಟಿ ಸಿಕ್ಕಲಿಲ್ಲ ಎಂಬ ಪ್ರಶ್ನೆಯೂ ಅಲ್ಲೇ ಹುಟ್ಟಿಕೊಂಡಿತ್ತು. ಹುಟ್ಟಿಕೊಂಡ ಪ್ರಶ್ನೆ ಹೊರಬಂದಿರುವುದರಿಂದ ಪ್ರಿಯಾಂಕಾಗೆ ಇರುಸು ಮುರುಸಾಗಿದೆ.

ಬಚ್ಚನ್ ಕುಟುಂಬ ತೀವ್ರವಾಗಿಯೇ ಸಾರ್ವಜನಿಕವಾಗಿ ಐಶ್ವಾರ್ಯಾಗೇ ಪ್ರಶಸ್ತಿ ಸಿಗಬೇಕಿತ್ತು. ಪ್ರಿಯಾಂಕಾಗಿಂತ ಐಶ್ ಚೆನ್ನಾಗಿ ಅಭಿನಯಿಸಿದ್ದಾಳೆ ಎಂದೂ ರಾಜಾರೋಷವಾಗಿ ಹೇಳಿಕೊಂಡಿದೆ. ಐಐಎಫ್‌ಎ ಮುಗಿದ ನಂತರ ಇತ್ತೀಚೆಗೆ ಖ್ಯಾತ ಬಾಲಿವುಡ್ ನಿರ್ದೇಶಕ ಅಶುತೋಷ್ ಗೌರೀಕರ್ ಸಾರ್ವಜನಿಕವಾಗಿ, ಫ್ಯಾಷನ್ ಚಿತ್ರದ ಪ್ರಿಯಾಂಕಾ ಅಭಿನಯಕ್ಕಿಂತ ಜೋಧಾ ಅಕ್ಬರ್ ಚಿತ್ರದ ಐಶ್ ನಟನೆ ಅದ್ಭುತವಾಗಿದೆ. ಉತ್ತಮ ನಟಿ ಪ್ರಶಸ್ತಿ ಪಡೆಯಲು ಪ್ರಿಯಾಂಕಾ ಯೋಗ್ಯಳಾಗಿರಲಿಲ್ಲ. ಐಶ್‌ಗೆ ಸಿಗಬೇಕಿದ್ದ ಪ್ರಶಸ್ತಿ ಪ್ರಿಯಾಂಕಾ ಪಾಲಾಗಿದೆ ಎಂದು ಹೇಳಿಕೆ ನೀಡಿದ್ದರು.

ಇದು ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗಿದ್ದಲ್ಲದೆ, ಸಹಜವಾಗಿಯೇ ಪ್ರಿಯಾಂಕಾ ಛೋಪ್ರಾಗೆ ಶಾಕ್ ಆಗಿತ್ತು. ಆದರೂ, ಇದಕ್ಕೆ ಪ್ರಿಯಾಂಕಾ ಆಗಲೀ, ಬಚ್ಚನ್ ಕುಟುಂಬವಾಗಲೀ, ಸ್ವತಃ ಐಶ್ ಆಗಲೀ ಪ್ರತಿಕ್ರಿಯಿಸಿರಲಿಲ್ಲ. ಗೌರೀಕರ್ ಹೇಳಿಕೆ ಹಿಂದೆ ಜಯಾ ಬಚ್ಚನ್ ಕೈವಾಡವಿದೆ ಎಂದು ಗಾಸಿಪ್ ಕೂಡಾ ಹರಡಿತ್ತು. ಇದಕ್ಕೂ ಜಯಾ ಬಚ್ಚನ್ ಪ್ರತಿಕ್ರಿಯಿಸಿರಲಿಲ್ಲ. ಆದರೆ ಮೊನ್ನೆ ಮೊನ್ನೆ ನಟರೊಬ್ಬರು, ಗೌರೀಕರ್ ಹೇಳಿದ್ದನ್ನು ಅಲ್ಲಿಗೇ ಬಿಟ್ಟುಬಿಡಿ, ಇದಕ್ಕೆಲ್ಲ ಬಡಪಾಯಿ ಜಯಾ ಬಚ್ಚನ್‌ರನ್ನು ಯಾಕೆ ಎಳೆದು ತರುತ್ತೀರಿ ಎಂದು ಸಾರ್ವಜನಿಕವಾಗಿ ಮಾಧ್ಯಮದವರನ್ನು ಪ್ರಶ್ನಿಸಿದ್ದರು. ಆಗಲೇ ಇದ್ದ ಕಥೆಯೆಲ್ಲಾ ಬಿಚ್ಚಿಕೊಂಡಿದ್ದು!

Priyanka Chopra
IFM
ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಅಂತಾರಲ್ಲ ಹಾಗೆ, ಗೌರೀಕರ್ ಹೇಳಿಕೆ ಹಿಂದೆ ಜಯಾ ಕೈವಾಡ ಇದ್ದದ್ದು ಹೌದು ಎಂಬ ಅಂಶವೂ ಬಹಿರಂಗಗೊಂಡಿದೆ. ಜಯಾ ಬಚ್ಚನ್ ಸಾರ್ವಜನಿಕವಾಗಿಯೇ, ಹೌದು. ಗೌರೀಕರ್ ಹೇಳಿದ್ದರ ಹಿಂದೆ ನಾನೇ ಇರೋದು ಎಂದು ಧೈರ್ಯವಾಗಿ ಹೇಳಿದ್ದಾರೆ. ಜತೆಗೆ, ಐಐಎಫ್‌ಎ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ನನ್ನ ಸೊಸೆ ಐಶ್‌ಗೆ ಯಾಕೆ ಉತ್ತಮ ನಟಿ ಪ್ರಶಸ್ತಿ ಸಿಕ್ಕಲಿಲ್ಲ ಎಂದು ಆಶ್ಚರ್ಯವಾಯ್ತು. ಆಗಲೇ ವೇದಿಕೆಯಲ್ಲಿ ಈ ವಿಷಯವನ್ನು ದೊಡ್ಡದು ಮಾಡೋಣ ಅಂದುಕೊಂಡೆ ಆಗಲಿಲ್ಲ. ಅದ್ಕಕಾಗಿ ಅಲ್ಲಿಂದ ಬಂದ ಮೇಲೆ ನನ್ನ ಉತ್ತಮ ಗೆಳೆಯ ಗೌರೀಕರ್ ಜತೆಗೆ ಈ ವಿಷಯ ಹಂಚಿಕೊಂಡೆ. ಅವರೂ ಕೂಡ ತಲೆಯಾಡಿಸಿದರು. ಅವರು ಸಾರ್ವಜನಿಕವಾಗಿ ಹೇಳಲು ನಾನೇ ಕಾರಣ ಎಂದಿದ್ದಾರೆ.

ಜತೆಗೆ, ಐಶ್ವರ್ಯಾ ರೈ ಜೋಧಾ ಅಕ್ಬರ್ ಚಿತ್ರದಲ್ಲಿ ನಿಜವಾದ ರಾಜಸ್ತಾನಿ ರಾಣಿಯಂತೆ ಕಂಗೊಳಿಸಿದ್ದಾಳೆ. ಆಕೆಯ ಆಂಗಿಕ ಅಭಿನಯ, ಸೌಂದರ್ಯ, ಅಲಂಕಾರ ಎಲ್ಲವೂ ಪರ್ಫೆಕ್ಟ್ ಆಗಿ ರಾಣಿಯೇ ಎಂಬಷ್ಟು ನೈಜವಾಗಿ ಮೂಡಿಬಂದಿತ್ತು. ಇಡೀ ಜೋಧಾ ಅಕ್ಬರ್ ಚಿತ್ರವೇ ಅಷ್ಟು ರಿಚ್ ಆಗಿ ಮೂಡಿಬಂದಿದೆ. ಜತೆಗೆ ಅದಕ್ಕೆ 11 ಪ್ರಶಸ್ತಿಗಳೂ ದಕ್ಕಿವೆ. ಈ ಪ್ರಶಸ್ತಿಗಳೆಲ್ಲವನ್ನೂ ಪಡೆಯಲು ಜೋಧಾ ಅರ್ಹ ಕೂಡಾ ಎಂದಿದ್ದಾರೆ ಜಯಾ.

ಅಷ್ಟೇ ಅಲ್ಲ. ನಾನೇನೂ ಪ್ರಿಯಾಂಕಾ ಛೋಪ್ರಾ ಉತ್ತಮ ನಟಿ ಅಲ್ಲವೆಂದು ಹೇಳುತ್ತಿಲ್ಲ. ಆಕೆಯೂ ಉತ್ತಮ ನಟಿಯೇ. ನಾನು ಆಕೆಯ ಫ್ಯಾಷನ್ ಚಿತ್ರ ನೋಡಿಲ್ಲ. ಆದರೂ, ಆಕೆ ಅದ್ಭುತವಾಗಿಯೇ ಆಕೆಯ ಪಾತ್ರ ನಿಭಾಯಿಸಿರಬಹುದೆಂದು ಗೊತ್ತಿದೆ. ಯಾಕೆಂದರೆ ನಾನು ಆಕೆಯ ದೋಸ್ತಾನಾ ಚಿತ್ರ ನೋಡಿದ್ದೇನೆ. ಆಕೆಗೆ ಉತ್ತಮ ಪ್ರಶಸ್ತಿ ನಟಿ ಸಿಕ್ಕಿದ್ದಕ್ಕೆ ನನ್ನ ತಕರಾರಿಲ್ಲ. ಆದರೆ ಅತ್ಯುತ್ತಮ ಅಭಿನಯ ನೀಡಿದ ಐಶ್ವರ್ಯಾಳನ್ನು ಯಾಕೆ ಅಲಕ್ಷಿಸಲಾಗಿದೆ ಎಂದೇ ನನಗೆ ತಿಳಿಯುತ್ತಿಲ್ಲ ಎಂದು ವಿವರಿಸಿದರು.

ಆದರೆ ಈ ವಿಷಯಕ್ಕೆ ಅಮಿತಾಬ್, ಅಭಿಷೇಕ್ ಆಗಲೀ, ಐಶ್ ಆಗಲೀ ಪ್ರತಿಕ್ರಿಯೆ ನೀಡಿಲ್ಲ. ಅತ್ತ ಪ್ರಿಯಾಂಕಾಳೂ ಚುಪ್ ಚಾಪ್ ಆಗಿ ತನ್ನ ಶೂಟಿಂಗ್‍‌ನಲ್ಲಿ ಬ್ಯುಸಿ. ಜಯಾ ಬಚ್ಚನ್, ಗೌರೀಕರ್ ಪ್ರಿಯಾಂಕಾ ಉತ್ತಮ ನಟಿಯೆಂದೇ ಹೇಳಿರಬಹುದು. ಆದರೆ ಪ್ರಶಸ್ತಿ ಪಡೆದು ಸಂತಸದಿಂದ ಕುಣಿದಾಡಿದ ಕ್ಷಣದ ಖುಷಿಯನ್ನು ಮಾತ್ರ ಪ್ರಿಯಾಂಕಾ ಕಳೆದುಕೊಂಡಿರುವುದು ನಿಜ.
Jodhaa-Akbar
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐಶ್ವರ್ಯಾ ರೈ, ಪ್ರಿಯಾಂಕಾ ಛೋಪ್ರಾ, ಜಯಾ ಬಚ್ಚನ್, ಐಐಎಫ್ಎ, ಜೋಧಾ ಅಕ್ಬರ್, ಫ್ಯಾಷನ್