ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸಲ್ಮಾನ್ ಕತ್ರಿನಾಳ ಚಲನಚಿತ್ರವನ್ನು ನೋಡೇ ಇಲ್ಲ! (Katrina Kaif | Salman Khan | New York | John Abraham)
ಸುದ್ದಿ/ಗಾಸಿಪ್
Feedback Print Bookmark and Share
 
Katrina Kaif
IFM
ನಂಬಿದರೆ ನಂಬಿ ಬಿಟ್ಟರೆ ಬಿಡಿ. ಕತ್ರಿನಾ ಕೈಫ್ ಎಂಬ ಸರಳ ಸ್ನಿಗ್ಧ ಸುಂದರಿಯ ಮೊನ್ನೆ ಮೊನ್ನೆಯಷ್ಟೆ ಬಿಡುಗಡೆಯಾದ ನ್ಯೂಯಾರ್ಕ್ ಚಿತ್ರವನ್ನು ಆಕೆಯ ಇನಿಯ ಸಲ್ಮಾನ್ ಖಾನ್ ಇನ್ನೂ ನೋಡಿಲ್ಲವಂತೆ. ಇದರಲ್ಲೇನು ವಿಶೇಷ ಅಂತೀರಾ. ಸರಿ. ನ್ಯೂಯಾರ್ಕ್ ಬಿಡುಗಡೆಯಾಗಿದ್ದು ಮೊನ್ನೆ ಮೊನ್ನೆಯಷ್ಟೆ. ಹಾಗಾಗಿ ಈ ಸಿನಿಮಾ ನೋಡಲು ಸಲ್ಮಾನ್‌ಗೆ ಸಮಯ ಸಿಗಲಿಲ್ಲ ಎಂದು ಹೇಳಿ ಸಮರ್ಥಿಸಬಹುದು. ಆದರೆ ಕತ್ರಿನಾ ಈವರೆಗೆ ಬೇರೆ ನಟರೊಂದಿಗೆ ನಟಿಸಿದ ಯಾವ ಚಿತ್ರವನ್ನೂ ಸಲ್ಮಾನ್ ನೋಡಿಲ್ಲ ಎಂದರೆ ನಂಬುತ್ತೀರಾ?

ಹೌದು. ಅಷ್ಟಾಗಿ ನಟನೆ ಬಾರದಿದ್ದರೂ, ಹಿಂದಿಯ ಗಂಧಗಾಳಿಯೇ ಗೊತ್ತಿಲ್ಲದಿದ್ದರೂ ಕತ್ರಿನಾ ಅದೃಷ್ಟವಂತೆಯೇ ಸರಿ. ಕೆಲವೇ ವರ್ಷಗಳ ಹಿಂದಷ್ಟೆ ಭಾರತಕ್ಕೆ ಕಾಲಿಟ್ಟರೂ ಅಕ್ಷಯ್ ಕುಮಾರ್ ಜತೆಗೆ ಅದೃಷ್ಟ ಖುಲಾಯಿಸಿದ ಕತ್ರಿನಾ ಈಗ ಬಾಲಿವುಡ್ಡಿನಲ್ಲಿ ಬೇಡಿಕೆಯ ನಟಿ. ಜತೆಗೆ ಅತ್ಯಂತ ಹೆಚ್ಚು ಸಂಭಾವನೆ ಪಡೆವ ಬೆರಳೆಣಿಕೆಯ ಟಾಪ್ ನಟಿಯರಲ್ಲಿ ಕತ್ರಿನಾಳೂ ಒಬ್ಬಳು. ಇನ್ನೂ 25 ದಾಟದ ಕತ್ರಿನಾ ತನ್ನಿಂದ ತುಂಬ ದೊಡ್ಡವನಾದ ನಲುವತ್ತರ ಹರೆಯದ ಸಲ್ಮಾನ್ ಪ್ರೇಮಪಾಶದಲ್ಲಿ ಬಂಧಿಯಾಗಿ ಈಗ ನಾನೊಂದು ತೀರಾ... ರಾಗ ಹಾಡುತ್ತಿರುವುದು ಸತ್ಯವೇ. ಜೊತೆಗೆ ಮೊನ್ನೆ ಮೊನ್ನೆ ನಡೆದ ಬರ್ತ್‌ಡೇ ಪಾರ್ಟಿಯಲ್ಲೂ ಕತ್ರಿನಾ ಏಕಾಂಗಿಯಾಗಿದ್ದುದು, ಸಲ್ಮಾನ್ ಗೈರುಹಾಜರಾಗಿದ್ದುದು ಬಾಲಿವುಡ್ಡಿಗೆ ಬಾಲಿವುಡ್ಡೇ ಹೇಳುತ್ತದೆ.

ಆದರೂ ಕೆಲವು ವರ್ಷಗಳು ಇವರಿಬ್ಬರು ಹಾಟ್ ಜೋಡಿಗಳಾಗಿ ಹಲವೆಡೆ ಚಪ್ಪಲಿ ಸವೆಸಿರುವುದು ಗೊತ್ತೇ ಇದೆ. ಆದರೂ ಕತ್ರಿನಾ ಬೇರೆ ನಟರೊಂದಿಗೆ ಸಲುಗೆಯಿಂದ ಫ್ರೆಂಡ್ಲೀಯಾಗಿರುವುದು ಸಲ್ಮಾನ್‌ಗೆ ಸಹಿಸಲು ಸಾಧ್ಯವಾಗುತ್ತಿಲ್ಲವಂತೆ. ಜತೆಗೆ ಕತ್ರಿನಾ ಬೇರೆ ನಟರೊಂದಿಗೆ ಸರಸದ ದೃಶ್ಯಗಳಲ್ಲಿ ನಟಿಸುವುದನ್ನು ನೋಡುವುದು ಸಲ್ಮಾನ್‌ಗೆ ಇಷ್ಟವಿಲ್ಲವಂತೆ ಅದಕ್ಕಾಗಿ ಸಲ್ಮಾನ್, ಕತ್ರಿನಾ ತನ್ನೊಂದಿಗೆ ನಟಿಸಿದ ಚಿತ್ರಗಳನ್ನು ಬಿಟ್ಟು ಬೇರೆ ಯಾವ ಚಿತ್ರಗಳನ್ನೂ ನೋಡಿಯೇ ಇಲ್ಲವಂತೆ.

Katrina Kaif
IFM
ಕತ್ರಿನಾ ಹಲವು ಬಾರಿ ನೋಡು ಎಂದು ಹೇಳಿದರೂ ಆಕೆಯ ಮಾತಿಗೆ ಸಲ್ಮಾನ್ ಕಿವಿಕೊಡುವುದಿಲ್ಲ. ಹಾಗಾಗಿ ಕತ್ರಿನಾಗೆ ತುಂಬ ಬೇಸರವಿದೆ ಎನ್ನುತ್ತಾರೆ ಕತ್ರಿನಾರ ಆಪ್ತ ಮೂಲಗಳು. ಇಷ್ಟೇ ಅಲ್ಲ. ಕತ್ರಿನಾ ಅರ್ಧಂಬರ್ಧ ಮುಚ್ಚಿಕೊಳ್ಳುವ ಅರೆಬರೆ ದಿರಿಸುಗಳನ್ನು ಧರಿಸಿ ಸಲ್ಮಾನ್ ಜತೆಗೆ ಹೊರಟರೆ ತಕ್ಷಣವೇ ಸಲ್ಮಾನ್ ಬಟ್ಟೆ ಬದಲಾಯಿಸಿಕೊಂಡು ಬರಲು ಹೇಳುತ್ತಾರಂತೆ!

ಆದರೆ ಕತ್ರಿನಾ ಮಾತ್ರ ಸಲ್ಮಾನ್ ಖಾನ್‌ರ ಹಳೆಯ ಚಿತ್ರಗಳೆಲ್ಲವನ್ನೂ ನೋಡಿದ್ದಾಳಂತೆ. ಈಗಲೂ ಯಾವುದೇ ಚಿತ್ರ ಬಿಡುಗಡೆಯಾದರೂ ಪ್ರೀಮಿಯರ್ ಶೋಗೆ ಹೋಗಿ ನೋಡಿಕೊಂಡು ಬಂದು ಆತನಿಗೆ ಪ್ರೋತ್ಸಾಹದ ಮಾತುಗಳನ್ನು ಕತ್ರಿನಾ ಹೇಳುತ್ತಾಳಂತೆ.

ಸದ್ಯ ಕತ್ರಿನಾ ತನ್ನ ಬಹುನಿರೀಕ್ಷೆಯ ಚಿತ್ರ ನ್ಯೂಯಾರ್ಕ್‌ನ್ನು ನೋಡಲು ಸಲ್ಮಾನ್‌ನನ್ನು ಒಪ್ಪಿಸುವುದೇ ದೊಡ್ಡ ಕಷ್ಟವಾಗಿದೆಯಂತೆ. ಆದರೂ, ಇನ್ನೂ ಸಲ್ಮಾನ್ ಆಕೆಯ ಸಿನಿಮಾ ನೋಡಲು ಪುರುಸೊತ್ತು ಮಾಡಿಲ್ಲ. ಆದರೆ ಅತ್ತ ಜಾನ್‌ ಅಬ್ರಹಾಂನ ಪ್ರೇಯಸಿ ಬಿಪಾಶಾ ಬಸು ತನ್ನಿನಿಯನ ಚಿತ್ರ ನ್ಯೂಯಾರ್ಕ್ ಬಿಡುಗಡೆಯಾಗಿದ್ದಕ್ಕೆ ಚಿತ್ರ ವೀಕ್ಷಿಸಲೆಂದೇ ಜಾನ್ ಜತೆಗೂಡಲು ಮುಂಬೈಗೆ ಗೋವಾದಿಂದ ಓಡೋಡಿ ಬಂದಿದ್ದಾಳಂತೆ.

ಪಾಪ ಕತ್ರಿನಾ...!
Katrina Kaif, Akshay Kumar
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್, ಕತ್ರಿನಾ ಕೈಫ್, ನ್ಯೂಯಾರ್ಕ್, ಜಾನ್ ಅಬ್ರಹಾಂ