ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಧೋನಿ, ಯುವರಾಜ್ ಬಾಲಿವುಡ್ಡಿಗೆ ಲಗ್ಗೆ (Dino Morea | MS Dhoni | Yuvraj Singh | Cricket | Bollywood)
ಸುದ್ದಿ/ಗಾಸಿಪ್
Feedback Print Bookmark and Share
 
Dino Morea
IFM
ಟಿ20 ವಿಶ್ವಕಪ್‌ನಲ್ಲಿ ಸೋಲುಂಡಿರುವ ಧೋನಿ ತಮ್ಮ ಅಭಿಮಾನಿಗಳಿಂದ ಹೆಚ್ಚು ಟೀಕೆಗೊಳಗಾಗಿದ್ದು, ಧೋನಿಯ ಜಾಹಿರಾತುಗಳ ಕಾರಣದಿಂದ. ಇನ್ನು ಸೋಲು ದಕ್ಕಿದರೆ ಅಭಿಮಾನಿಗಳು ಉಗ್ರರಾಗುವ ಸಂಭವವಿದೆ. ಯಾಕೆಂದರೆ ಧೋನಿ, ಯುವರಾಜ್ ಸಿಂಗ್ ಇಬ್ಬರೂ ಬಾಲಿವುಡ್‌ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ ನಟ ದಿನೋ ಮೊರಿಯಾ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಯುವರಾಜ್ ಸಿಂಗ್ ನಟಿಸುವ ಎಲ್ಲ ಲಕ್ಷಣಗಳೂ ಇವೆ. ಮೂಲಗಳ ಪ್ರಕಾರ ದಿನೋ ಅವರ ಪ್ರೊಡಕ್ಷನ್ ಹೌಸ್ ಕ್ಲಾಕ್‌ವರ್ಕ್ ಫಿಲಂಸ್ ಇದೀಗ ಹೊಸ ಚಿತ್ರವೊಂದರ ತಯಾರಿಯಲ್ಲಿ ತೊಡಗಿದ್ದು, ಅದಕ್ಕೆ ಧೋನಿ ಹಾಗೂ ಯುವರಾಜ್ ಸಿಂಗ್ ಅವರನ್ನು ನಟಿಸಲು ಕರೆಯಲಿದೆ.

ದಿನೋ ಈಗಾಗಲೇ ಚಿತ್ರಕಥೆ ಬರೆದು ರೆಡಿಯಾಗಿರಿಸಿಕೊಂಡಿದ್ದು, ಎರಡು ವಿಶೇಷ ಪಾತ್ರಗಳಿಗೆ ಯುವರಾಜ್ ಹಾಗೂ ಧೋನಿಯವರನ್ನೇ ಮನಸ್ಸಿನಲ್ಲಿಟ್ಟು ಆ ಪಾತ್ರ ರಚಿಸಿದ್ದಾರೆ ಎಂದು ಸ್ವತಃ ದಿನೋ ಹೇಳಿಕೊಂಡಿದ್ದಾರೆ. ದಿನೋ ಹೇಳುವಂತೆ, ಧೋನಿ ಹಾಗೂ ಯುವರಾಜ್ ಇಬ್ಬರೂ ಸ್ಟಾರ್ ಕ್ರಿಕೆಟಿಗರು. ಅವರಿಗೆ ಈಗಾಗಲೇ ಹಲವು ಜಾಹಿರಾತುಗಳು ಹಾಗೂ ಟಿವಿಗಳಲ್ಲಿ ಕಾಣಿಸಿಕೊಂಡು ಕ್ಯಾಮರಾ ಎದುರಿಸಿದ ಅನುಭವವಿದೆ. ಅವರಿಬ್ಬರೂ ನಟನೆಯಲ್ಲಿ ಪ್ರೊಫೆಷನಲ್ ನಟರಂತೆಯೇ ಇದ್ದಾರೆ. ಹೀಗಿರುವಾಗ ನಟನೆಯ ಸಮಸ್ಯೆ ಬಾರದು. ಆದರೆ, ಅವರಿಂದ ಡೇಟ್ಸ್ ಪಡೆಯುವುದೇ ದೊಡ್ಡ ಕಷ್ಟ. ಅವರಿಬ್ಬರೂ ತುಂಬ ಬ್ಯುಸಿ ಕ್ರಿಕೆಟರ್‌ಗಳಾದ್ದರಿಂದ ತುಂಬ ಕಷ್ಟಪಟ್ಟು ಸಮಯ ಹೊಂದಿಸಬೇಕಾಗಬಹುದು. ಆದರೆ ನಾನು ಪಡೆದೇ ತೀರುತ್ತೇನೆ ಎನ್ನುತ್ತಾರೆ ದಿನೋ ವಿಶ್ವಾಸದಿಂದ.

Yuvraj Singh
IFM
ಧೋನಿ ಈಗಾಗಲೇ ಇನ್ನೊಂದು ಬಾಲಿವುಡ್ ಚಿತ್ರ ಡೇವಿಡ್ ಧವನ್ ಅವರ ಹುಕ್ ಯಾ ಕ್ರುಕ್‌ನಲ್ಲಿ ಅಭಿನಯಿಸುತ್ತಿರುವ ಸುದ್ದಿ ಹಳೆಯದು. ಜಾನ್ ಅಬ್ರಹಾಂ ಮುಖ್ಯ ಭೂಮಿಕೆಯಲ್ಲಿರುವ ಹುಕ್ ಯಾ ಕ್ರುಕ್‌ ಕೆಲವೇ ತಿಂಗಳುಗಳಲ್ಲಿ ಹೊರಬರಲಿದೆ. ಇಗ ಧೋನಿಗೆ ಇನ್ನೊಂದು ಚಿತ್ರದ ಅವಕಾಶವೂ ದಕ್ಕಿದೆ.

ದಿನೋ ಹೇಳುವಂತೆ, ನನಗೆ ಯುವರಾಜ್ ಚೆನ್ನಾಗಿ ಪರಿಚಯವಿದೆ. ನನ್ನ ಪ್ರೊಡಕ್ಷನ್ ಹೌಸ್ ಆರಂಭಿಸಿದಾಗಿನಿಂದಲೂ ಯುವಿ ಜತೆಗೆ ನನಗೆ ಗೆಳೆತನವಿದೆ. ಧೋನಿ ಜತೆಗೆ ಈ ಬಗ್ಗೆ ಮಾತನಾಡಿಲ್ಲ. ಸಚಿನ್ ತೆಂಡುಲ್ಕರ್ ಅವರನ್ನೂ ಕರೆತರುವ ಯೋಚನೆಯಿದೆ. ಇನ್ನೂ ಆ ಬಗ್ಗೆ ಪಕ್ಕಾ ನಿರ್ಧಾರವಾಗಿಲ್ಲ ಎನ್ನುತ್ತಾರೆ.

ಒಟ್ಟಾರೆ ಧೋನಿಯಂತೂ ಕ್ರಿಕೆಟ್ ಜೀವನದಲ್ಲಿ ಜಾಹಿರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಸ್ವೀಕರಿಸಲು ಹೋಗದೆ ಇದ್ದುದಕ್ಕೆ ಜಾಹಿರಾತಿನ ಶೂಟಿಂಗ್ ಕಾರಣ ಎಂದು ವ್ಯಾಪಕ ಟೀಕೆಗೂ ಧೋನಿ ಒಳಗಾಗಿದ್ದರು. ಮೊನ್ನೆ ವಿಶ್ವಕಪ್ ಟಿ20 ಸೋತಾಗಲಂತೂ ಧೋನಿ ಜಾಹಿರಾತು, ಚಿತ್ರಗಳಲ್ಲೇ ನಟಿಸಲಿ. ಅದಕ್ಕೇ ಲಾಯಕ್ಕು ಎಂದು ಅಭಿಮಾನಿಗಳು ರೋಷಗೊಂಡಿದ್ದರು. ಈಗ ಧೋನಿ ಇನ್ನೂ ಮುಂದೆ ಹೆಜ್ಜೆ ಇರಿಸಿರುವುದು ಅಭಿಮಾನಿಗಳಿಗೆ ಕೋಪ ತರಿಸುತ್ತಾ... ಅಥವಾ ಧೋನಿ, ಯುವರಾಜರಿಂದಾಗಿಯೇ ಚಿತ್ರ ಸೂಪರ್ ಹಿಟ್ ಆಗುತ್ತಾ... ಏನಂತೀರಾ?
Sachin Tendulkar,  MS Dhoni
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಧೋನಿ, ಯುವರಾಜ್ ಸಿಂಗ್, ಬಾಲಿವುಡ್, ಹುಕ್ ಯಾ ಕ್ರುಕ್, ಕ್ರಿಕೆಟ್