ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಶೈನಿ ಪ್ರಕರಣ: ಜು.7ರವರಗೆ ನ್ಯಾಯಾಂಗ ಬಂಧನ ವಿಸ್ತರಣೆ (Shiney Ahuja | Ashok Chavan | Bollywood | Rape)
ಸುದ್ದಿ/ಗಾಸಿಪ್
Feedback Print Bookmark and Share
 
Shiney Ahuja
IFM
ಮುಂಬೈ: ಕೆಲಸದಾಕೆಯ ಮೇಲೆ ಅತ್ಯಾಚಾರ ಆರೋಪವನ್ನು ಎದುರಿಸುತ್ತಿರುವ ಬಾಲಿವುಡ್ ನಟ ಶೈನಿ ಅಹುಜಾರ ಜಾಮೀನು ಕೋರಿಕೆ ವಿಚಾರಣೆಯನ್ನು ಮುಂಬೈ ಸ್ಥಳೀಯ ಸೆಶನ್ ನ್ಯಾಯಾಲಯ ಜು.7ರವರೆಗೆ ಮುಂದೂಡಿದೆ.

ಜೂ.14ರಂದು ಯಾರೂ ಇಲ್ಲದ ವೇಳೆ ಮನೆಯ ಕೆಲಸದಾಕೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧಿತರಾದ ಶೈನಿ ಅಹುಜಾರಿಗೆ ಜು.2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೇ ವೇಳೆ ಶೈನಿ ಪರ ವಕೀಲರು ಶೈನಿ ಅವರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಬೇಕಿತ್ತು. ಆದರೆ ಅದೀಗ ಜು.7ರವರೆಗೆ ಮುಂದೂಡಲ್ಪಟ್ಟಿದೆ.

ಇದೇ ವೇಳೆ ಶೈನಿ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆಯೆಂದೂ ಹೇಳಲಾಗಿದೆ. ಹೀಗಾಗಿ ಗುರುವಾರ ಅವರ ನ್ಯಾಯಾಂಗ ಬಂಧನವನ್ನು ಜು.16ರವರೆಗೂ ಸ್ಥಳೀಯ ನ್ಯಾಯಾಲಯ ವಿಸ್ತರಿಸಿದೆ. ಶೈನಿ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೀಲಿ ಟೀ ಶರ್ಟ್ ಹಾಗೂ ಜೀನ್ಸ್ ಧರಿಸಿ ಯಾರೊಂದಿಗೂ ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದರು ಎನ್ನಲಾಗಿದೆ.

ಈ ಮೊದಲೇ ಶೈನಿ ಪರ ವಕೀಲ, ಶೈನಿ ಉತ್ತಮ ಕುಟುಂಬದ ಹಿನ್ನೆಲೆಯಿಂದ ಬಂದಿದ್ದು, ಅವರಿಗೆ ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದರಿಂದ ಹಾಗೂ ಅವರ ಬಾಕಿ ಉಳಿದ ಚಿತ್ರಗಳ ಶೂಟಿಂಗ್ ಮುಗಿಸಲು ಜಾಮೀನು ನೀಡಬೇಕೆಂಬ ಕಾರಣ ನೀಡಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು.

ಶೈನಿ ಅವರ ಪತ್ನಿ ತನ್ನ ಗಂಡ ಶೈನಿ ಅತ್ಯಾಚಾರ ನಡೆಸಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ, ಡಿಎನ್‌ಎ ವರದಿಗಳಲ್ಲಿ ಶೈನಿ ಅತ್ಯಾಚಾರ ನಡೆಸಿರುವ ಆರೋಪಕ್ಕೆ ಪೂರಕ ವರದಿಗಳೇ ಬಂದಿವೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಶೈನಿ ಆರೋಪಕ್ಕೆ ಸಂಬಂಧಿಸಿದರೆ ತತ್‌ಕ್ಷಣ ನ್ಯಾಯ ಒದಗಿಸಲು ಫಾಸ್ಟ್‌ ಟ್ರ್ಯಾಕ್ ನ್ಯಾಯಾಂಗ ವ್ಯವಸ್ಥೆಯ ಮೊರೆ ಹೋಗಲಾಗುತ್ತದೆ ಎಂದಿದ್ದರು ಜತೆಗೆ ಕೆಲಸದಾಕೆಗೆ ಪುನರ್ವಸತಿ ಕಲ್ಪಿಸುವುದಾಗಿಯೂ ಹೇಳಿಕೆ ನೀಡಿದ್ದರು.

ಜೂನ್ 18ರಿಂದಲೇ ಶೈನಿ ನ್ಯಾಯಾಂಗ ಬಂಧನದಲ್ಲಿದ್ದು, ಅರ್ಥರ್ ರಸ್ತೆಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೈನಿ ಅಹುಜಾ, ಅಶೋಕ್ ಚವಾಣ್, ಬಾಲಿವುಡ್, ಅತ್ಯಾಚಾರ