ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಜಾಮೀನು ನಿರಾಕರಣೆ: ಶೈನಿಗೆ ಜೈಲೇ ಗತಿ! (Shiney Ahuja | DNA | Rape | Bollywood)
ಸುದ್ದಿ/ಗಾಸಿಪ್
Feedback Print Bookmark and Share
 
Shiney Ahuja
IFM
ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಬಾಲಿವುಡ್ ನಟ ಶೈನಿ ಅಹುಜಾರಿಗೆ ಮುಂಬೈ ಸೆಶನ್ಸ್ ನ್ಯಾಯಾಲಯ ಬುಧವಾರ ಜಾಮೀನು ನೀಡಲು ನಿರಾಕರಿಸಿದೆ. ಹಾಗೂ ಶೈನಿ ಜು.16ರವರೆಗೂ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಬೇಕೆಂದು ಆದೇಶಿಸಿದೆ.

ಅತ್ಯಾಚಾರ ಮಾಡಿದ ಆರೋಪದಲ್ಲಿ ಜೂನ್ 15ರಂದು ಬಂಧಿತನಾದ ಶೈನಿ ಅಹುಜಾ ಜಾಮೀನು ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಶೈನಿಗೆ ಜಾಮೀನು ನೀಡಿದರೆ ಆತ ಕೆಲಸದಾಕೆಗೆ ಬೆದರಿಕೆ ಒಡ್ಡುವ ಸಾಧ್ಯತೆಗಳಿವೆ. ಹಾಗಾಗಿ ಜಾಮೀನು ನೀಡಲು ಸಾಧ್ಯವೇ ಇಲ್ಲ ಎಂದಿದೆ.

ಶೈನಿ ಪರ ವಕೀಲರು ವಾದಿಸಿದಂತೆ, ಶೈನಿ ನಿಜವಾಗಿಯೂ ಕೆಲಸದಾಕೆಯ ಮೇಲೆ ಅತ್ಯಾತಾರ ಮಾಡಿದ್ದರೆ, ಆಕೆ ಲೈಂಗಿಕ ಸಂಪರ್ಕಕ್ಕೆ ನಿರಾಕರಿಸಿದಾಗ ಮಾಡಿದ ಗಾಯಗಳು ಶೈನಿ ದೇಹದ ಮೇಲೆ ಇರುತ್ತಿದ್ದವು. ಆದರೆ ಶೈನಿ ದೇಹದ ಮೇಲೆ ಯಾವುದೇ ಗುರುತು ಪತ್ತೆಯಾಗಿಲ್ಲ. ಅಲ್ಲದೆ ಎರಡೇ ಎರಡು ಪುಟ್ಟ ಗಾಯಗಳು ಮಾತ್ರ ಇವೆ. ಇದರರ್ಥ, ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ. ಅದು ಕೆಲಸದಾಕೆಯ ಸಂಪೂರ್ಣ ಸಹಮತಿಯಿಂದ ನಡೆದ ಲೈಂಗಿಕ ಸಂಪರ್ಕ ಎಂದು ಶೈನಿ ಪರ ವಕೀಲರಾದ ಶ್ರೀಕಾಂತ್ ಶಿವಾಡೆ ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ್ದರು.

ವಕೀಲರ ಪ್ರಕಾರ, ಕೆಲಸದಾಕೆಗೆ ಸಾಕಷ್ಟು ಅವಕಾಶಗಳಿದ್ದವು. ಶೈನಿ ನಿಜವಾಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾದರೆ, ಆಕೆ ಕೋಣೆಯಿಂದ ಓಡಿಹೋಗಲು ಪ್ರಯತ್ನಿಸಬಹುದಿತ್ತು. ಅಥವಾ ಅತನ ಮುಖಕ್ಕೆ ಪರಚಿ ಗಾಯ ಮಾಡಿ ತಪ್ಪಿಸಿಕೊಳ್ಳಬಹುದಿತ್ತು. ಅಥವಾ ಆತನನ್ನು ಜಾಡಿಸಿ ಒದೆಯಬಹುದಿತ್ತು. ಆದರೆ ಆಕೆ ಮಾಡಿಲ್ಲ ಎಂದಾದರೆ ಅರ್ಥವೇನು? ಇದು ಅತ್ಯಾಚಾರವೇ ಅಲ್ಲವೇ ಎಂಬ ವಿಷಯಕ್ಕೆ ಹೆಚ್ಚು ಪುಷ್ಠಿ ನೀಡುತ್ತದೆ ಎಂದು ಶ್ರೀಕಾಂತ್ ವಾದಿಸಿದ್ದಾರೆ.

ಆದರೆ ಡಿಎನ್‌ಎ ಪರೀಕ್ಷೆ ಸೇರಿದಂತೆ ವೈದ್ಯಕೀಯ ವರದಿಗಳೆಲ್ಲವೂ ಅತ್ಯಾಚಾರಕ್ಕೆ ಪೂರಕವಾಗಿವೆ. ಅಲ್ಲದೆ, ಶೈನಿ ಕೂಡಾ ವಿಚಾರಣೆ ಸಂದರ್ಭ ತಾನು ತಪ್ಪು ಮಾಡಿದ್ದಾಗಿ ಒಪ್ಪಿಕೊಂಡಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದರು. ಆದರೆ, ತಾನು ಆಕೆಯನ್ನು ಅತ್ಯಾಚಾರ ಮಾಡಿಲ್ಲ. ಬದಲಾಗಿ ಆಕೆಯ ಸಹಮತಿಯಿಂದ ಲೈಂಗಿಕ ಸಂಪರ್ಕ ಮಾಡಿದ್ದೆ ಎಂದು ಶೈನಿ ಹೇಳಿದ್ದರು ಎನ್ನಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೈನಿ ಅಹುಜಾ, ಅತ್ಯಾಚಾರ, ಬಾಲಿವುಡ್, ಮುಂಬೈ ಕೋರ್ಟ್