ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ಮುನ್ನೋಟ » ಹದಗೆಡುತ್ತಿರುವ ತಾರೆಯರ ನಡುವಿನ ಪೈಪೋಟಿ
ಸಿನಿಮಾ ಮುನ್ನೋಟ
Feedback Print Bookmark and Share
 
ಪ್ರತಿಷ್ಠಿತ ಸಿನಿಮಾ ತಾರೆಯ ಕುಟುಂಬದಲ್ಲಿ ನಡೆದ ಮದುವೆಯ ನಂತರ ಭಾರತದ ಇಬ್ಬರು ಅತಿದೊಡ್ಡ ಸಿನಿಮಾ ಸ್ಟಾರ್‌ಗಳ ನಡುವೆ ಹೋರಾಟವೇ ಪ್ರಾರಂಭವಾಗಿದೆ.

ಕಳೆದ ಹಲವು ವರ್ಷಗಳಿಂದ ಭಾರತವು ಸಿನಿಮಾ ಜಗತ್ತು ಅಮಿತಾಬಚ್ಚನ್ ಅವರ ಐತಿಹಾಸಿಕ ಹೋರಾಟವನ್ನು ಕಂಡಿದೆ. ಹಲವು ದಶಕಗಳಿಂದ ಅವರು ಬಾಲಿವುಡ್ ಬಾಕ್ಸ್ ಆಫಿಸ್‌ನಲ್ಲಿ ಮೆರೆದಿದ್ದಾರೆ. ಹಲವಾರು ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಶಾರೂಕ್ ಖಾನ್ ಅವರೂ ಬಾಕ್ಸ್ ಆಫಿಸ್‌ನಲ್ಲಿ ಮೆರೆಯುತ್ತಿದ್ದಾರೆ.

ಪ್ರಸ್ತುತ ವರ್ಷಗಳಲ್ಲಿ ಇಬ್ಬರೂ ತಾರೆಗಳೂ ಜನತೆಯ ಮುಂದೆ ನಯವಾದ ಸಂಬಂಧವನ್ನೇ ತೋರಿಸಿದ್ದಾರೆ. ಇವರಿಬ್ಬರ ನಡುವಿನ ಸೆಣಸಾಟವು ಸಿನಿಮಾ ಲೋಕದಲ್ಲಿ ಉತ್ತಮ ಸ್ವಾಸ್ಧ್ಯದಿಂದ ಕೂಡಿದೆ.

ಆದರೆ ಕಳೆದ ತಿಂಗಳಲ್ಲಿ ಅಮಿತಾಬ್ ಅವರ ಮಗ ಅಭಿಷೇಕ್ ಮತ್ತು ಐಶ್ವರ್ಯ ರೈ ಅವರ ನಡುವಿನ ಮದುವೆಯ ನಂತರ ಇಬ್ಬರೂ ತಾರೆಗಳ ನಡುವಿನ ಕಂದಕ ಮತ್ತಷ್ಟು ಬಿಗಡಾಯಿಸಿದೆ.

ಐಷ್ ಮತ್ತು ಅಮಿತಾಬ್ ಪುತ್ರ ಅಭಿಷೇಕ್ ನಡುವಿನ ಮದುವೆಯ ನಂತರ, ಬಚ್ಚನ್ ಒಳಗೊಂಡಂತೆ ಮೂವರು ಖ್ಯಾತ ಸಿನಿಮಾ ತಾರೆಗಳು ಅಮಿತಾಬ್ ಕುಟುಂಬದಲ್ಲಿ ವಾಸವಾಗಿದ್ದು, ಮೂವರು ಬಾಲಿವುಡ್‌ನಲ್ಲಿ ಅಸಾಧಾರಣ ಜನಪ್ರಿಯತೆ ಹೊಂದಿದ್ದಾರೆ. ಇದರಿಂದಾಗಿ ಬಚ್ಚನ್ ಅವರು ಅಸಾಧಾರಣವಾದ ವಾಣಿಜ್ಯಿಕ ಪುರುಷರಾಗಿದ್ದು, ಇತರರಿಗೆ ಸಿಂಹಸ್ವಪ್ನವಾಗಿದ್ದಾರೆ. ಇದು ಬಚ್ಚನ್ ಮತ್ತು ಶಾರೂಖ್ ನಡುವಿನ ಪೈಪೋಟಿಯನ್ನೂ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಬಚ್ಚನ್ ಅವರು ತಮ್ಮ ಮಗನ ವಿವಾಹದ ಆಹ್ವಾನ ಪಟ್ಟಿಯಿಂದ ಖಾನ್ ಮತ್ತು ಅನೇಕ ಬಾಲಿವುಡ್ ತಾರೆಯರ ಹೆಸರನ್ನು ಕೈಬಿಟ್ಟಿದ್ದರು.