ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ಮುನ್ನೋಟ » ಸದಭಿರುಚಿಯ ಚಿತ್ರ ಧೋಖಾ
ಸಿನಿಮಾ ಮುನ್ನೋಟ
Feedback Print Bookmark and Share
 
IFMIFM
ತಮನ್ನಾ ಮತ್ತು ಜಖ್ಮ್‌ನಂತಹ ಸದಭಿರುಚಿ ಮತ್ತು ಗಂಭೀರ ಕಥಾವಸ್ತುವನ್ನು ಚಿತ್ರದಲ್ಲಿ ಸಮರ್ಥವಾಗಿ ಬಳಸಿಕೊಂಡು ವಿಮರ್ಶಕರ ಮತ್ತು ಚಿತ್ರಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದ್ದ ಪೂಜಾ ಭಟ್, ಸುಮಾರು ದಿನಗಳ ನಂತರ ಅಂತಹದೇ ಒಂದು ಕಥಾ ಹಂದರ ಇರುವ ಚಿತ್ರ "ಧೋಖಾ" ನಿರ್ದೇಶಿಸಿದ್ದಾರೆ.

ಮುಖೇಶ್ ಭಟ್ ನಿರ್ಮಾಣದ ಚಿತ್ರಕ್ಕೆ ಎಂ ಎಂ ಕರೀಮ್ ಸಂಗೀತ ನೀಡಿದ್ದು, "ಧೋಖಾ"ದಲ್ಲಿ ಪೂಜಾ ಭಟ್‌ರ ಹೊಸ ಶೋಧ ಮುಜ್‌ಮಿಲ್ ಇಬ್ರಾಹಿಂ ಚಿತ್ರಲೋಕಕ್ಕೆ ಪರಿಚಿತರಾಗುವ ಪ್ರಯತ್ನ ಮಾಡುತ್ತಿದ್ದಾರೆ.

ಪೂಜಾ ಭಟ್ ನಿರ್ದೇಶನದ ಚಿತ್ರಗಳಲ್ಲಿ ಗಟ್ಟಿ ಕಥೆ ಮತ್ತು ಬಿಗಿ ನಿರೂಪಣೆ ಎದ್ದು ಕಾಣುತ್ತದೆ. ಕಥೆಯು ಎಲ್ಲಿಯೂ ಹಂದರದಾಚೆ ಹರಡುವುದಿಲ್ಲ. ಅಂದ ಮೇಲೆ ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ಸಾಧ್ಯತೆ ಇದೆ.

ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಮುಜ್‌ಮಿಲ್ ಇಬ್ರಾಹಿಂ, ಬೆಳ್ಳಿತೆರೆಗೆ ಕಾಲಿಡುತ್ತಿದ್ದು. ಕಥೆಯಲ್ಲಿ ಅಧುನಿಕ ಮುಸ್ಲಿಮರು ಮತ್ತು ಅವರ ಧಾರ್ಮಿಕ ಚಿಂತನೆ ಮತ್ತು ಜಾಗತಿಕ ಸಮಸ್ಯೆಯಾಗಿ ಬೆಳೆದಿರುವ ಭಯೋತ್ಪಾದನೆಯ ಕಥಾವಸ್ತುವನ್ನು ಒಳಗೊಂಡಿದೆ.
ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮುಜ್‌ಮಿಲ್ ಇಬ್ರಾಹಿಂ, ಚಿತ್ರದಲ್ಲಿ ತನ್ನ ಪತ್ನಿ ಓರ್ವ ಆತ್ಮಹತ್ಯಾ ಬಾಂಬ್ ದಾಳಿ ಮಾಡುವವಳು ಎಂದು ತಿಳಿದ ನಂತರ ಅವನು ಎದುರಿಸುವ ಪರಿಸ್ಥಿತಿಯನ್ನೇ ಚಿತ್ರದಲ್ಲಿ ವ್ಯಕ್ತಪಡಿಸುವ ಪ್ರಯತ್ನವನ್ನು ಪೂಜಾ ಮಾಡಿದ್ದಾರೆ.

ಕೋಮು ಗಲಭೆಯಲ್ಲಿ ಆಗುವ ಅನ್ಯಾಯಗಳಿಗೆ ಹಿಂಸೆಯೊಂದೇ ಉತ್ತರವಲ್ಲ ಎಂದು ನಂಬಿದ ಪೊಲೀಸ್ ಅಧಿಕಾರಿಗೆ ಎದುರಾಗುವ ಘಟನೆಗಳಿಗೆ ಹೇಗೆ ಸ್ಪಂದಿಸುತ್ತಾನೆ ಎನ್ನುವುದು ಗೊತ್ತಾಗಬೇಕಿದ್ದರೆ ಚಿತ್ರ ನೋಡುವುದು ಸರಿ.

ಚಿತ್ರದಲ್ಲಿ ಮುಜ್‌ಮಿಲ್ ಇಬ್ರಾಹಿಂ ( ಜಾಯಿದ್ ಖಾನ್), ತುಲಿಪ್ ಜೋಷಿ (ಸಾರಾ), ಅನುಪಮ್ ಖೇರ್, ಗುಲಶನ್ ಗ್ರೊವರ್, ಅಶುತೋಷ್ ರಾಣಾ, ವಿನೀತ್ ಕುಮಾರ್ ಮುಂತಾದವರು ನಟಿಸಿದ್ದಾರೆ.ಹಿನ್ನಲೆ ಗಾಯನ: ಕೆ ಕೆ, ಶಿರಾಜ್ ಉಪ್ಪಲ್, ಉಸ್ತಾದ್ ರಫಾಖತ್ ಅಲಿ ಖಾನ್, ಎಂ ಎಂ ಕ್ರೀಮ್, ಶ್ರೇಯಾ ಘೋಷಾಲ್, ಸಂಗೀತ ನಿರ್ದೇಶನ: ಎಂ ಎಂ ಕ್ರೀಮ್, ಶಿರಾಜ್ ಉಪ್ಪಲ್,