ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ಮುನ್ನೋಟ » ಸಾಗರದಡಿಯ ರೋಮಾಂಚನ ಸಾಹಸ ಈ ಬ್ಲೂ
ಸಿನಿಮಾ ಮುನ್ನೋಟ
Feedback Print Bookmark and Share
 
IFM
'ಬ್ಲೂ'. ಇದು ಬಣ್ಣವಲ್ಲ. ಸಿನಿಮಾ! ಹಾಲಿವುಡ್ ಸಿನಿಮಾ ಅಂತ ತಿಳಿದರೆ ತಪ್ಪಾದೀತು. ಇದು ಬಾಲಿವುಡ್ ಹಿಂದಿ ಸಿನಿಮಾ. ಬಾಲಿವುಡ್ ಪ್ರಪಂಚದ ಅತಿ ಹೆಚ್ಚು ಬಜೆಟ್‌ನ ಚಿತ್ರವಿದು. ಇಂತಹ ಸಿನಿಮಾ ಮಾಡಬೇಕಾದರೆ, ಉತ್ತಮ ಪಾತ್ರಧಾರಿಗಳ ಜತೆಗೆ ಅಂತಾರಾಷ್ಟ್ರೀಯ ಮಟ್ಟದ, ಅಸಾಧಾರಣ ಪ್ರತಿಭೆಯ ಸಂಗೀತದ ಸಾಥ್ ಕೂಡಾ ಇದಕ್ಕೆ ಬೇಕು. ಇದನ್ನೆಲ್ಲವನ್ನು ಪಡೆದು 2009ರ ಹಿಟ್ ಚಿತ್ರವಾಗಿ 'ಬ್ಲೂ' ಬರಲಿದೆಯೇ? ಗೊತ್ತಿಲ್ಲ.

ಆದರೆ, ಈಗ ಬಾಲಿವುಡ್‌ನಲ್ಲಿ ಗಾಳಿಯಾಡುತ್ತಿರುವ ಮಾತುಗಳೆಲ್ಲವೂ 'ಬ್ಲೂ' ಬಗ್ಗೆಯೇ. ಸಿನಿಮಾದ ಸಂಗೀತ, ನಿರ್ದೇಶನ, ಕಥೆ ಎಲ್ಲವುಗಳ ಬಗ್ಗೆ ಥರಹೇವಾರಿ ಮಾತುಗಳು ಸುಳಿದಾಡುತ್ತಿವೆ. ಒಟ್ಟಿನಲ್ಲಿ ಬಾಲಿವುಡ್ ಮಟ್ಟಿಗೆ ಇಂಥದ್ದೊಂದು ಸಿನಿಮಾ ಈವರೆಗೆ ಬಂದಿಲ್ಲ. ಸಾಹಸ ಪ್ರವೃತ್ತಿಯ ಸಿನಿಮಾಗಳು ಭಾರತೀಯ ಸಿನಿಮಾ ರಂಗದಲ್ಲಿ ಬಂದುದೇ ಕಡಿಮೆ ಎನ್ನಬಹುದು. ಅದರಲ್ಲೂ ಸಾಗರದೊಳಗಿನ ಅಡ್ವೆಂಚರ್ ದೂರದ ಮಾತೇ ಸರಿ. ಮೊದಲೆಲ್ಲ ಪಾಶ್ಚಾತ್ಯ ಸಿನಿಮಾಗಳ ಸಂಸ್ಕೃತಿಗೂ ಭಾರತೀಯ ಚಿತ್ರರಂಗದ ಸಂಸ್ಕೃತಿಗೂ ಸಾಕಷ್ಟು ವ್ಯತ್ಯಾಸ ಕಾಣುತ್ತಿತ್ತು. ಮೊದಲು ಇಂತಹುದಕ್ಕೆ ಬೇಕಾದ ತಾಂತ್ರಿಕತೆ ನೈಪುಣ್ಯ, ಬಜೆಟ್ ಎಲ್ಲವೂ ಸಾಲುತ್ತಿರಲಿಲ್ಲ. ಈಗ ಇವೆಲ್ಲವನ್ನು ಕ್ರೋಢೀಕರಿಸಿಕೊಂಡು ಹಾಲಿವುಡ್ ಮಾದರಿಯ ಸಾಗರದೊಳಗಿನ ಅಡ್ವೆಂಚರ್ ಈ ವರ್ಷದಲ್ಲಿ ಹೊರಬರಲಿದೆ.

IFM
ಆದರೆ, 'ಬ್ಲೂ' ಸಿನಿಮಾದ ಸ್ಟಿಲ್‌ಗಳು ಈಗ ಇಂಟರ್ನೆಟ್ ಮೂಲಕ ಹರಿದಾಡುತ್ತಿದ್ದು, ಎಲ್ಲರಲ್ಲಿ ಸ್ಟಿಲ್ ಮೂಲಕವೇ ಕುತೂಹಲ ಸೃಷ್ಟಿಸುತ್ತಿದೆ.ಸಾಗರದ ತಳದಲ್ಲಿರುವ ಅತ್ಯಮೂಲ ನಿಕ್ಷೇಪಗಳ ಹುಡುಕಾಟದಲ್ಲಿ ಸಾಗುವ ಕಥಾಹಂದರವೇ 'ಬ್ಲೂ'. ಸಂಜಯ್ ದತ್, ಅಕ್ಷಯ್ ಕುಮಾರ್, ಝಾಯೇದ್ ಖಾನ್, ಲಾರಾ ದತ್ತ, ಕತ್ರಿನಾ ಕೈಫ್ ಈ 'ಬ್ಲೂ' ತಾರಾಗಣದಲ್ಲಿದ್ದಾರೆ. ಇದರಲ್ಲಿ ಲಾರಾ ಹಾಗೂ ಕತ್ರಿನಾ ಮುಖ್ಯ ಭೂಮಿಕೆಯಲ್ಲಿದ್ದಾರಂತೆ. ಸಾಗರದಲ್ಲಿ 250ಕ್ಕೂ ಹೆಚ್ಚು ಅಡಿ ಆಳಕ್ಕೆ ಇಳಿಯುವ ಮೂಲಕ ಅಲ್ಲಿನ ಕತ್ತಲನ್ನು ಬಗೆಯುವ ಶೋಧಿಸುವ ಪ್ರಮುಖ ಪಾತ್ರ ಇವರಿಬ್ಬರದಂತೆ.

ಈ ಸಿನಿಮಾದ ನಿರ್ದೇಶಕರು ಆಂಟೊನಿ ಡಿಸೋಜಾ. ಈ ಹಿಂದೆ ಬಿಗ್ ಹಿಟ್‌ಗಳಾದ ಜಬ್ ವಿ ಮೆಟ್, ಗೋಲ್‌ಮಾಲ್ ರಿಟರ್ನ್ಸ್‌ಗಳನ್ನು ನಿರ್ಮಿಸಿದ 'ಶ್ರೀ ಅಷ್ಟವಿನಾಯಕ ಸಿನಿ ವಿಷನ್ಸ್ ಲಿಮಿಟೆಡ್' ಬ್ಯಾನರ್‌ನಡಿಯ ಆಶ್ರಯವೂ ಬ್ಲೂಗೆ ಸಿಕ್ಕಿದೆ. ಸಿನಿಮಾದ ಚಿತ್ರೀಕರಣ ಬಹಾಮಾದಲ್ಲಿ ಮಾಡಲಾಗಿದೆಯಂತೆ. ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದು ಎರಡು ಆಸ್ಕರ್ ಗರಿ ಹೊತ್ತಿರುವ ಎಲ್ಲರ ಹೆಮ್ಮೆಯ ಎ.ಆರ್.ರೆಹಮಾನ್. ಜತೆಗೆ ಆಸ್ಟ್ರೇಲಿಯಾದ ಸೆನ್ಸೇಶನಲ್ ಪಾಪ್ ಗಾಯಕಿ ಕೈಲಿ ಮಿನಾಗ್. ಸಿನಿಮಾದ ಸಂಗೀತವನ್ನು ಕೇಳುತ್ತಿದ್ದರೆ, ಮಗ್ನರಾಗಿಬಿಡುವಷ್ಟು ಚೆನ್ನಾಗಿದೆಯಂತೆ ಎಂಬ ಅಂತೆಕಂತೆಗಳ ಹವಾ ಈಗ ಬಾಲಿವುಡ್ ತುಂಬೆಲ್ಲ ವ್ಯಾಪಿಸಿದೆ.

IFM
ಚಿತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಮಾಡಿದ ಪೇಟ್ ಝುಕಾರಿನಿ (ಹಾಲಿವುಡ್ ಹಿಟ್‌ಗಳಾದ 'ಪೈರೇಟ್ಸ್ ಆಫ್ ಕೆರೇಬಿಯನ್', 'ದೇಜಾ ವೂ'ಗಳಲ್ಲೂ ನಟಿಸಿರುವ) ಸಿನಿಮಾಕ್ಕೊಂದು ಅಂತಾರಾಷ್ಟ್ರೀಯ ಕಳೆ ನೀಡಿದ್ದಾರೆ. ಸಿನಿಮಾದ ಸಾಹಸ ನಿರ್ದೇಶನ ಮಾಡಿರುವುದು ಜೇಮ್ಸ್ ಬೊಮಾಲಿಕ್ (ವಿಶ್ವವಿಖ್ಯಾತ 'ಇಂಡಿಯಾನಾ ಜಾನ್ಸ್' ಸೀರೀಸ್‌ಗೂ ಮಾಡಿವವರು) ಮೈನವಿರೇಳಿಸುವ ಸಾಹಸಗಳನ್ನು ಸಿನಿಮಾದುದ್ದಕ್ಕೂ ತೋರಿಸಿದ್ದಾರಂತೆ. ಹಾಲಿವುಡ್‌ನ 'ದಿ ಡಾರ್ಕ್ ನೈಟ್', 'ಪೋಲಾರ್ ಎಕ್ಸ್‌ಪ್ರೆಸ್', 'ಸೂಪರ್ ಮ್ಯಾನ್ ರಿಟರ್ನ್ಸ್' ಮತ್ತಿತರ ಚಿತ್ರಗಳ ಹಿಂದಿದ್ದ ಜಾರ್ಜ್ ಪೀಟರ್ಸ್ ಕೂಡಾ 'ಬ್ಲೂ' ಟೀಂನಲ್ಲಿದ್ದಾರೆ.

ಸಾಹಸಮಯ ರೋಮಾಂಚನಗೊಳಿಸುವ ದೃಶ್ಯಗಳ ಜತೆಗೆ ಉತ್ತಮ ಸೌಂಡ್ ಎಫೆಕ್ಟ್ ಕೂಡಾ ಇದರಲ್ಲಿದೆಯಂತೆ. ಆಸ್ಕರ್ ಪಡೆದ ಭಾರತೀಯ ರೆಸಲ್ ಪೂಕುಟ್ಟಿ ಈ ಚಿತ್ರದಲ್ಲಿ ಸೌಂಡ್ ಮಿಕ್ಸಿಂಗ್ ಮಾಡಿದ್ದಾರಂತೆ.

ಇನ್ನೂ ಸಿನಿಮಾದ ನಿರ್ಮಾಣ ಕಾರ್ಯ ಆಗಿಲ್ಲವಂತೆ. ಚಿತ್ರ ಬಿಡುಗಡೆಯ ಬಗ್ಗೆ ಇನ್ನೂ ನಿಖರವಾದ ಮಾಹಿತಿಗಳು ಗೊತ್ತಿಲ್ಲ. ಅಲ್ಲಿವರೆಗೂ ಕಾಯಬೇಕು. ಇದಲ್ಲದೆ, ಹಲವರು ಇದನ್ನು ಕೇವಲ ಹಾಲಿವುಡ್‌ನ ಕಾಪಿ ಎಂದು ಟೀಕಿಸಿ ಗೇಲಿ ಮಾಡಿದ್ದಾರೆ. ಸಿನಿಮಾದಲ್ಲಿ ನಿಜವಾಗಿಯೇ ಏನಿದೆ ಎಂದು ತಿಳಿಯಲು, ಈ ಎಲ್ಲ ಸಂಶಯಗಳಿಗೆ ಉತ್ತರ ಬರಲು ಇನ್ನೂ ಸಾಕಷ್ಟು ಸಮಯ ಕಾಯಬೇಕು.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬ್ಲೂ, ಭಾರತೀಯ ಸಾಹಸ ಸಿನಿಮಾ, ಅಕ್ಷಯ್ ಕುಮಾರ್, ಕತ್ರಿನಾ ಕೈಫ್