ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ಮುನ್ನೋಟ » ಕೈಟ್ಸ್: ತುಟಿ ಬೆಸೆದ ಬರ್ಬರಾ- ಹೃತಿಕ್ ಲವ್‌ಸ್ಟೋರಿ (Barbara Mori insisted Hrithik to Kiss her)
ಸಿನಿಮಾ ಮುನ್ನೋಟ
Feedback Print Bookmark and Share
 
IFM
ಬಹುನಿರೀಕ್ಷಿತ ಚಿತ್ರ ಕೈಟ್ಸ್ ಬಹುಶಃ ಬಿಡುಗಡೆಯಾಗೋದು ಅಕ್ಟೋಬರ್‌ನಲ್ಲೇ. ಆದರೆ ಈಗಾಗಲೇ ಕೈಟ್ಸ್ ಸುದ್ದಿ ಎಲ್ಲೆಡೆ ಹಾರಾಡುತ್ತಿದೆ. ಅಷ್ಟೇ ಅಲ್ಲ ಕೈಟ್ಸ್‌ನಿಂದಾಗಿ ಹೆಚ್ಚು ಸುದ್ದಿಯಾದದ್ದು ಹೃತಿಕ್‌ನ ದಾಂಪತ್ಯ ವಿರಸ. ಮೆಕ್ಸಿಕನ್ ಬಾಂಬ್‌ಶೆಲ್ ಬರ್ಬರಾ ಹೃತಿಕ್ ದಾಂಪತ್ಯದ್ಲಲಿ ಎಬ್ಬಿಸಿದ ಬಿರುಗಾಳಿ ಕೆಲ ದಿನಗಳ ನಂತರ ಈಗಷ್ಟೆ ತಣ್ಣಗಾಗುವ ಸ್ವರೂಪದಲ್ಲಿದೆ. ಹೀಗೆ ಸುದ್ದಿಯಾದ ಕೈಟ್ಸ್‌ನ ಮುನ್ನೋಟ ಇಲ್ಲಿದೆ.

ಚಿತ್ರದಲ್ಲಿ ಹೃತಿಕ್‌ದು ಸಾಲ್ಸಾ ನೃತ್ಯ ಶಿಕ್ಷಕನ ಪಾತ್ರ. ಮೆಕ್ಸಿಕೋದ ಮರುಭೂಮಿಯಲ್ಲಿ ಮಾರಣಾಂತಿಕವಾಗಿ ಗಾಯಗೊಂಡ ಮನುಷ್ಯ ಬಿದ್ದಿರುತ್ತಾನೆ. ಅದು ಜೆ (ಹೃತಿಕ್ ರೋಷನ್). ಒಂದು ಕಾಲದ ಸುಂದರಾಂಗ, ಯಾವುದಕ್ಕೂ ಜಗ್ಗದ ಜಾಯಮಾನದ ಯುವ ಉತ್ಸಾಹಿ ಗಂಡು ಜೆ. ಆತನನ್ನು ಈಗ ಜೀವಂತವಾಗಿಟ್ಟಿರುವುದು ಆತನ ಏಕೈಕ ಪ್ರೀತಿಯ ಜೀವನ. ಅದು ನತಾಶಾ( ಬರ್ಬರಾ ಮೋರಿ) ಜತೆಗಿನ ಲವ್!

ಒಬ್ಬಾಕೆ ತನ್ನ ಇನಿಯನ್ನು ಬಿಟ್ಟು ಇನ್ನೊಬ್ಬನ ಸನಿಹ ಬಂದಿದ್ದಾಳೆ ಎಂದರೆ ಆತ ಜೆ ಅಲ್ಲದೆ ಮತ್ತಾರು ಇರಲಿಕ್ಕಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಜೆಯ ವ್ಯಕ್ತಿಕ್ವ, ರೂಪು ಅಂತಹುದು. ಆಕೆ ಹಾಗೆ ಬಂದು ಹೋಗಲಿಲ್ಲ. ಆತನ ಜೀವನದಲ್ಲಿ ಮಿಂಚಾಗಿ ಬಂದು ಆತನ ಬದುಕನ್ನೇ ಬದಲಿಸಿದಳು. ಆಕೆ ನತಾಶಾ. ಈ ಇಬ್ಬರಿಗೂ ಮೊದಲ ನೋಟದಲ್ಲೇ ಪ್ರೇಮ ಅಂಕುರಿಸಿತ್ತು. ತಾವಿಬ್ಬರೂ ಒಂದೇ ಎಂಬ ಭಾವನೆ ಅಲ್ಲೇ ಹುಟ್ಟಿತ್ತು. ಪ್ರೇಮ ಬೆಳೆಯಿತು.

IFM
ಆದರೆ ಎಲ್ಲವೂ ಹೀಗೇ ಮುಂದುವರಿಯಲಿಲ್ಲ. ಇಬ್ಬರು ಪ್ರೇಮಿಗಳ ಜೀವನದಲ್ಲಿ ಯುದ್ಧವೇ ನಡೆಯುತ್ತದೆ. ಜೆ ಸಾವಿನೊಡನೆ ಹೋರಾಡಬೇಕಾಗುತ್ತದೆ. ಹೀಗೆ ಕಥೆ ಸಾಗುತ್ತದೆ. ಇಲ್ಲಿ ಸಾಂಪ್ರದಾಯಿಕತೆ, ಸಂಸ್ಕೃತಿ, ಗೆರೆ ಹೀಗೆಲ್ಲ ಮಿತಿಗಳನ್ನಿಟ್ಟಿಲ್ಲ. ಕೈಟ್ಸ್ ಎಂಬ ಲವ್ ಸ್ಟೋರಿ ಗೆರೆಗಳನ್ನು ದಾಟಿ ಮಿತಿಯನ್ನೂ ಮೀರಿ ಸಾಂಪ್ರದಾಯಿಕತೆಯನ್ನು ಅಳಿಸಿ ಹಾಕಿ ಮುಂದಕ್ಕೆ ಓಡುತ್ತದೆ. ಇಬ್ಬರು ಪ್ರೇಮಿಗಳ ಪ್ರೇಮ ಪಯಣದಲ್ಲಿ ಹಿಂಸೆ, ಸಾವು ಸಂಭವಿಸುತ್ತದೆ. ಚಿತ್ರದ ಕಥೆ ಹೀಗೆ ಸಾಗುತ್ತದೆ.

ಧೂಮ್ 2ನಲ್ಲಿ ಬಚ್ಚನ್ ಸೊಸೆ ಐಶ್ವರ್ಯಾ ಜತೆಗೆ ಚೆಂದಕ್ಕೆ ತುಟಿಗೆ ತುಟಿ ಸೇರಿಸಿ ಸುದ್ದಿ ಮಾಡಿದ್ದ ಹೃತಿಕ್ ಈ ಬಾರಿ ಕೈಟ್‌ನಲ್ಲಿ ಬೇಕಾದಷ್ಟು ಬಾರಿ ಬರ್ಬರಾ ತುಟಗೆ ತನ್ನ ತುಟಿಯ ಮುದ್ರೆಯೊತ್ತಿದ್ದಾರಂತೆ. ಅದೂ ಕೂಡಾ ಈ ಚಿತ್ರದ ಇನ್ನೊಂದು ಇಂಟರೆಸ್ಟಿಂಗ್ ಪಾಯಿಂಟ್. ಕೈಟ‌್‌ನಲ್ಲಿ ಕಿಸ್ಸಿಂಗ್ ಸೀನ್ ಇದೆಯಾ ಎಂದಿದ್ದಕ್ಕೆ ಮಾತ್ರ ಹೃತಿಕ್ ಕೋಪಗೊಂಡು, ''ನಮ್ಮ ಚಿತ್ರರಂಗ ಇನ್ನೂ ಬೆಳೆದಿಲ್ವಾ. ತುಟಿಗೆ ತುಟಿ ಸೇರಿಸಿದರೆ ಅಷ್ಟು ದೊಡ್ಡ ಸುದ್ದಿ ಮಾಡುವುದು ಯಾಕೆ ಎಂದೇ ಅರ್ಥವಾಗುವುದಿಲ್ಲ'' ಎಂದು ಹೇಳುತ್ತಾರೆ.

ಇಂತಿಪ್ಪ ಹೃತಿಕ್ ಕಿಸ್ಸಿಂಗ್ ಸೀನ್ ಹಿಂದೆ ಒಂದು ದೊಡ್ಡ ಕಥೆಯ ಇದೆ. ಕೈಟ್ ಚಿತ್ರದಲ್ಲಿ ಎತ್ತರದ ಕಟ್ಟಡದಿಂದ ಪ್ರೇಮಿಗಳಿಬ್ಬರು ಧುಮುಕುವ ದೃಶ್ಯವಿದೆಯಂತೆ. ಆ ದೃಶ್ಯದಲ್ಲಿ ಪ್ರೇಮಿಗಳಾದ ಬರ್ಬರಾ ಹಾಗೂ ಹೃತಿಕ್ ಪಾಲ್ಗೊಳ್ಳಬೇಕಿತ್ತು. ತುಂಬ ಭಾವುಕರಾಗಿ ಪ್ರೇಮಿಗಳು ಹಾರುವ ದೃಶ್ಯವದು. ಬಿದ್ದ ಮೇಲೆ ತಾವಿಬ್ಬರೂ ಬದುಕಿ ಉಳಿಯುತ್ತೇವೋ ಎಂಬುದೂ ಗೊತ್ತಿಲ್ಲ. ಅಂಥ ಸಂದರ್ಭದಲ್ಲಿ ನಾಯಕ ನಾಯಕಿಗೆ ಮುತ್ತು ನೀಡಬೇಕು. ಹೃತಿಕ್ ಹಾರುವ ಸಂದರ್ಭ ನಾಯಕಿ ಬರ್ಬರಾ ಕೆನ್ನೆಗೆ ಪುಟ್ಟ ಮುತ್ತು ನೀಡಿದನಂತೆ. ಸೆಟ್‌ನಲ್ಲಿ ಬರ್ಬರಾಗೆ ಆಗ ಸಿಕ್ಕಾಪಟ್ಟೆ ಸಿಟ್ಟು ಬಂತಂತೆ. ತಕ್ಷಣ ಹೃತಿಕ್ ಬಳಿ, ''ಹೋಗಿ ಹೋಗಿ ಯಾರಾದರೂ, ಕೆನ್ನೆಗೆ ಮುತ್ತು ನೀಡುತ್ತಾರಾ? ನೀನು ನಿನ್ನ ಹೆಂಡತಿ ಸುಸಾನ್ನೆ ಜತೆಗೆ ನಿಜ ಜೀವನದಲ್ಲಿ ಹೀಗೆ ಹಾರುವ ಸಂದರ್ಭ ಬಂದರೆ ಕೆನ್ನೆಗೆ ಮುತ್ತು ನೀಡುತ್ತೀಯಾ. ನೈಜವಾಗಿ ಅಭಿನಯಿಸು'' ಎಂದು 'ನಟನಾ ಪಾಠ' ಅಲ್ಲಲ್ಲ, 'ಕಿಸ್ಸಿಂಗ್ ಪಾಠ' ಹೇಳಿದಳಂತೆ. ಈ ಜೋಶ್‌ನಿಂದ ಹೃತಿಕ್ ಬರ್ಬರಾ ತುಟಿಗೆ ತುಟಿ ಸೇರಿಸಿಯೇ ಬಿಟ್ಟನಂತೆ. ಹೀಗೆ ತಮ್ಮ ಕಿಸ್ಸಿಂಗ್ ಕಥೆಯನ್ನು ಹೇಳಿದ್ದು ಸ್ವತಃ ಹೃತಿಕ್.

ಈ ಚಿತ್ರದಲ್ಲಿ ಕಂಗನಾ ರಾಣಾವತ್ ಕೂಡಾ ನಟಿಸುತ್ತಿದ್ದಾರೆ. ಇದರಲ್ಲಿ ಕಂಗನಾಗೆ ಹೃತಿಕ್‌ನ ಸಾಲ್ಸಾ ವಿದ್ಯಾರ್ಥಿನಿಯ ಪಾತ್ರ. ಬರ್ಬರಾಗಿಂತಲೂ ಈಕೆಯ ಪಾತ್ರ ಚಿಕ್ಕದಂತೆ. ಹೃತಿಕ್ ಹಾಗೂ ಬರ್ಬರಾರೇ ಈ ಚಿತ್ರದಲ್ಲಿ ಹೆಚ್ಚು ಸುದ್ದಿಯಾಗುತ್ತಿರುವುದರಿಂದ ಆಕೆಗೆ ಈ ಬಗ್ಗೆ ಅಸಮಾಧಾನವೂ ಇದೆ ಎಂಬ ಗುಸುಗುಸು ಕೇಳಿ ಬರುತ್ತಿದೆ. ಹೃತಿಕ್ ಅಪ್ಪ ರಾಕೇಶ್ ರೋಶನ್ ನಿರ್ಮಾಣದ, ರಾಜೇಶ್ ರೋಶನ್ ಸಂಗೀತವಿರುವ ಈ ಚಿತ್ರದ ನಿರ್ದೇಶಕರು ಅನುರಾಗ್ ಬಸು. ಏನೇ ಇರಲಿ. ಇಷ್ಟೊಂದು ಕುತೂಹಲ ಹುಟ್ಟಿಸಿರುವ ಕೈಟ್ ಬಿಡುಗಡೆಯಾಗಲು ಅಕ್ಟೋಬರ್‌ವರೆಗೂ ಕಾಯಬೇಕು.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೈಟ್ಸ್, ಹೃತಿಕ್ ರೋಶನ್, ರಾಕೇಶ್ ರೋಶನ್, ಬರ್ಬರಾ ಮೋರಿ, ಸುಸಾನ್ ಖಾನ್