ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ಮುನ್ನೋಟ » ಹಾಟ್ ಅಮೃತಾಳ ಹೊಸ ಅವತಾರದ 'ಶಾರ್ಟ್‌ಕಟ್' (Short Kut | Amrita Rao | Akshaye Khanna | Anil Kapoor | Arshad Warsi)
ಸಿನಿಮಾ ಮುನ್ನೋಟ
Feedback Print Bookmark and Share
 
Short Kut
IFM
ಬೇಸಿಗೆ ಕಳೆದು ಕೆಲವೆಡೆ ಮಳೆ ಸುರಿಯಲು ಹೊರಟಾಗ ಒಂದು ಇಂಟರೆಸ್ಟಿಂಗ್ ಕಾಮಿಡಿ ಹಾಟ್ ಚಿತ್ರ 'ಶಾರ್ಟ್‌ಕಟ್' ಹಾಗೇ ಬೆಚ್ಚಗೆ ಕುತೂಹಲ ಕೆರಳಿಸಿದೆ. ಅನಿಲ್ ಕಪೂರ್ ಹಾಗೂ ಸಂಜಯ್ ದತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಈ ಚಿತ್ರದ ನಿರ್ಮಾಪಕರು ಅನಿಲ್ ಕಪೂರ್. ನಾಯಕ ನಟರಾಗಿ ಅರ್ಶಾದ್ ವರ್ಸಿ ಹಾಗೂ ಅಕ್ಷಯ್ ಖನ್ನಾ ಕಾಣಿಸಿಕೊಂಡರೆ ನಾಯಕಿಯಾಗಿ ಗ್ಲಾಮರಸ್ ರೂಪದಲ್ಲಿ ಅಮೃತಾ ರಾವ್ ಸುದ್ದಿ ಮಾಡಿದ್ದಾರೆ.

'ಶಾರ್ಟ್‌ಕಟ್- ದಿ ಕಾನ್ ಈಸ್ ಆನ್' ಕಥೆ ಇಬ್ಬರ ಸಂಘರ್ಷಣೆಯನ್ನು ಜೀವಾಳವಾಗಿಸಿದೆ. ರಾಜು (ಅರ್ಶಾದ್ ವರ್ಸಿ) ಎಂಬಾತ ಸೂಪರ್‌ಸ್ಟಾರ್ ಆಗಲು ಹವಣಿಸಿ ಚಿತ್ರಕಥೆಯನ್ನೇ ಕದ್ದೊಯ್ದರೆ, ಇನ್ನೊಬ್ಬ ಶೇಖರ್ (ಅಕ್ಷಯ್ ಖನ್ನಾ) ಎಂಬಾತ ನಿರ್ದೇಶಕನಾಗಿ ತನ್ನ ಚಿತ್ರಕಥೆಯನ್ನು ಕಳೆದುಕೊಂಡರೂ ಗುರುತಿಸಿಕೊಳ್ಳಲು ಕಷ್ಟಪಡುವಾತ. ಇಂಥ ಸಂದರ್ಭದಲ್ಲಿ ಖ್ಯಾತ ನಟಿ ಮಾನಸಿ (ಅಮೃತಾ ರಾವ್) ನಟ ರಾಜು ಜತೆಗೆ ರೊಮ್ಯಾಂಟಿಕ್ ಅಧ್ಯಾಯ ಶುರು ಮಾಡಿ ಅದು ಮದುವೆಯಲ್ಲಿ ಪರ್ಯಾವಸವಾಗುತ್ತದೆ. ಆಗಲೇ ನಿರ್ದೇಶಕ ರಾಜು ಜತೆಗೆ ಆಕೆಯ ವೃತ್ತಿ ಬದುಕಿನ ಕುತೂಹಲ ಅಧ್ಯಾಯವೂ ಆರಂಭವಾಗುತ್ತದೆ.

Short Kut
IFM
ಸೂಪರ್ ಸ್ಟಾರ್ ಆಗಿ ಶೈನ್ ಆಗುತ್ತಿರುವ ರಾಜುವನ್ನು ಹಾಕಿಕೊಂಡು ತನ್ನ ಚಿತ್ರವನ್ನು ನಿರ್ದೇಶಿಸಲು ಶೇಖರ್ ವೇದಿಕೆ ಸಿದ್ಧಮಾಡುತ್ತಾನೆ. ಈ ಇಬ್ಬರ ಇಗೋಗಳ ಸಂಘರ್ಷ ತಮಾಷೆಯ ವಸ್ತುವಿನಂತೆ ಚಿತ್ರದಲ್ಲಿ ಚಿತ್ರಿಸಿದರೂ, ಸಂದಿಗ್ಧವನ್ನು ರೀಲ್ ಮೂಲಕ ರಿಯಲ್ ಲೈಫ್ ಡ್ರಾಮಾವನ್ನು ತೋರಿಸಿದ್ದಾರಂತೆ.

ವಿವಾಹ್‌ನಲ್ಲಿ ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸಿದ ಚೆಲುವೆ, ಮೈ ಹೂಂ ನಾ ಹಾಗೂ ಇಶ್ಕ್ ವಿಶ್ಕ್ ಚಿತ್ರಗಳಲ್ಲಿ ಅಪ್ಪಟ ಚಿನಕುರುಳಿ ಹುಡುಗಿಯಾಗಿ ಪಕ್ಕದ್ಮನೆ ಹುಡುಗಿಯೇ ಎಂಬಷ್ಟು ಆಪ್ತವಾಗಿ ಕಾಣಿಸಿಕೊಂಡ ತುಂಟಿ ಅಮೃತಾ ರಾವ್ ಅವತಾರವನ್ನು ಈ ಚಿತ್ರದಲ್ಲಿ ನೋಡಿದವರು ಅಬ್ಬಾ ನಿನ್ನೆ ಮೊನ್ನೆ ಹಾಗಿದ್ದವಳು ಈಗ ಹೀಗಾದಳೇ ಎಂದು ಅಂದುಕೊಂಡರೆ ಆಶ್ಚರ್ಯವಿಲ್ಲ. ಯಾಕೆಂದರೆ ಶಾರ್ಟ್‌ಕಟ್ ಚಿತ್ರದಲ್ಲಿ ತನ್ನ ಅಪ್ಪಟ ಹಾಟ್ ಗ್ಲಾಮರ್ ಅವತಾರದಲ್ಲಿ ಹೊಸರೂಪ ತೋರಿಸುತ್ತಿರುವ ಅಮೃತಾ ತನ್ನ ಕೆರಿಯರ್‌ನಲ್ಲೂ ಇದನ್ನೇ ಶಾರ್ಟ್‌ಕಟ್ ಆಗಿ ಬಳಸುತ್ತಿರುವುದೂ ಸುಳ್ಳಲ್ಲ.

ನೀರಜ್ ವೋರಾ ಹಾಗೂ ರೋಶನ್ ಆಂಡ್ರ್ಯೂಸ್ ನಿರ್ದೇಶನದ ಈ ಚಿತ್ರದ ನಿರ್ಮಾಪಕರು ಖ್ಯಾತ ನಟ ಅನಿಲ್ ಕಪೂರ್. ಕಾಮಿಡಿ ಚಿತ್ರವಾಗಿರುವ ಇದು ಈಗಾಗಲೇ ಸೆನ್ಸಾರ್ ಕೂಡಾ ಮುಗಿಸಿದ್ದು ಎ ಸರ್ಟಿಫಿಕೆಟ್ ಪಡೆದಿದೆ. ತಾನು ನಟಿಸಿದ ಚಿತ್ರಕ್ಕೆ ಎ ಸರ್ಟಿಫಿಕೆಟ್ ಸಿಕ್ಕಿದ್ದು, ಸ್ವತಃ ಅಮೃತಾ ರಾವ್‌ಗೆ ಶಾಕ್ ಆಗಿದೆಯಂತೆ. ಅಂದಹಾಗೆ, ಇದೇ ಜು.10ರಂದು ಇದು ಬಿಡುಗಡೆ ಕಾಣಲಿದೆ.
Short Kut
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಾರ್ಟ್ಕಟ್, ಅಕ್ಷಯ್ ಖನ್ನಾ, ಅರ್ಶಾದ್ ವರ್ಸಿ, ಅಮೃತಾ ರಾವ್, ಅನಿಲ್ ಕಪೂರ್