ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ಮುನ್ನೋಟ » ಪ್ರೇಮಿಗಳ ದಿನದಂದು ಒಂದಾಗಲಿರುವ ಶಾಹಿದ್-ಕರೀನಾ ಜೋಡಿ! (Kareena Kapoor | Boney kapoor | Shahid Kapoor | Milenge Milenge)
ಸಿನಿಮಾ ಮುನ್ನೋಟ
Bookmark and Share Feedback Print
 
Kareena Kapoor, Shahid Kapoor
IFM
'ಜಬ್ ವಿ ಮೆಟ್' ಚಿತ್ರದಲ್ಲಿ ಎಲ್ಲರೂ ಮಂತ್ರಮುಗ್ಧರಾಗುವಂತೆ ನಟಿಸಿ ಮನಮನದಲ್ಲಿ ಅದ್ಭುತ ರೊಮ್ಯಾಂಟಿಕ್ ಜೋಡಿ ಎಂಬ ಸ್ಥಾನ ಗಿಟ್ಟಿಸಿಕೊಂಡ ಜೋಡಿ ಶಾಹಿದ್ ಕಪೂರ್ ಹಾಗೂ ಕರೀನಾ ಕಪೂರ್. ಆದರೆ ಆವರೆಗೆ ಅಮರ ಮಧುರ ಪ್ರೇಮ..., ನಾನೇ ವೀಣೆ ನೀನೇ ತಂತಿ... ಎಂದೆಲ್ಲ ಹಾಡುತ್ತಿದ್ದ ಈ ಇಬ್ಬರು ಜಬ್ ವಿ ಮೆಟ್ ಮುಗಿದ ತಕ್ಷಣವೇ ಬೇರಾದರು. ಒಬ್ಬರ ಮುಖ ಇನ್ನೊಬ್ಬರಿಗೆ ಕಂಡರಾಗದಂತೆ ಬೇರೆಬೇರೆಯಾದರು. ಕರೀನಾ ಸೈಫ್ ತೆಕ್ಕೆಗೊರಗಿ ನಿರಾಳವಾಗಿ ಉಸಿರಾಡಿದರೆ, ಅತ್ತ ಶಾಹಿದ್ ವಿಲವಿಲನೆ ಒದ್ದಾಡಿ ವಾರಕ್ಕೊಬ್ಬ ನಟಿಯರ ಜೊತೆಗೆ ಗಾಸಿಪ್ ಕಾಲಂಗಳನ್ನು ಅಲಂಕರಿಸಲಾರಂಭಿಸಿದ. ಈಗ ಅಂತೂ ಇಂತೂ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ. ಅದೂ ಕೂಡಾ ಇದೇ ಮುಂಬರುವ ವ್ಯಾಲೆಂಟೈನ್ ಡೇ ಅರ್ಥಾತ್ ಪ್ರೇಮಿಗಳ ದಿನದಂದು.
Kareena Kapoor, Shahid Kapoor
IFM


ಹಾಗಾದ್ರೆ, ಕರೀನಾ ಸೈಫ್‌ಗೆ ಕೈಕೊಟ್ಟಳಾ ಎಂದು ಆಶ್ಚರ್ಯಚಕಿತರಾಗಬೇಡಿ. ಆದರೆ, ಈ ಹಳೇ ಪ್ರೇಮಿಗಳು ಪ್ರೇಮಿಗಳ ದಿನದಂದು ಒಂದಾಗುತ್ತಿರುವುದಂತೂ ಖಂಡಿತಾ ಸತ್ಯ. ಆದರೆ ಒಂದಾಗುತ್ತಿರೋದು ಮಾತ್ರ ತೆರೆಯ ಮೇಲೆ! ಶಾಹಿದ್ ಕರೀನಾ ಜೋಡಿಯ ಕುಂಟುತ್ತಾ ಸಾಗಿ ಕೊನೆಗೂ ಚಿತ್ರೀಕರಣ ಮುಗಿಸಿದ ರೊಮ್ಯಾಂಟಿಕ್ ಲವ್ ಸ್ಟೋರಿ ಮಿಲೇಂಗೇ ಮಿಲೇಂಗೇ ಚಿತ್ರ ಅಂತೂ 2010ರ ಫೆಬ್ರವರಿ 14ರಂದು ಬಿಡುಗಡೆ ಕಾಣಲಿದೆ!!!

ವಿಷಯ ತುಂಬಾ ಸಿಂಪಲ್. ಕರೀನಾ ಹಾಗೂ ಶಾಹಿದ್ ಇಬ್ಬರೂ, ಜಬ್ ವಿ ಮೆಟ್ ಸಂದರ್ಭವೇ ಮಿಲೇಂಗೇ ಮಿಲೇಂಗೇ ಎಂಬ ಬೋನಿ ಕಪೂರ್ ಅವರ ಚಿತ್ರಕ್ಕೆ ಸಹಿ ಹಾಕಿದ್ದರು. ಇವರಿಬ್ಬರ ನಡುವೆ ಎಲ್ಲ ಸರಿಯಿರುವಾಗ ಒಮ್ಮತದಿಂದಲೇ ಸಹಿಹಾಕಿದ್ದ ಇವರಿಬ್ಬರೂ, ಬೇರೆ ಬೇರೆಯಾದ ಮೇಲೆ ಹೇಗೋ ತಪ್ಪಿಸಿಕೊಳ್ಳುತ್ತಾ ಓಡಾಡಿಕೊಂಡಿದ್ದರು. ಚಿತ್ರ ಅರ್ಧಕ್ಕೆ ನಿಂತಿತ್ತು. ಬರೋಬ್ಬರಿ ಎರಡು ವರ್ಷದ ನಂತರ ಅದ್ಹೇಗೋ ಬೆವರು ಸುರಿಸಿ, ಕರೀನಾ ಶಾಹಿದ್ ಇಬ್ಬರನ್ನೂ ಒಟ್ಟುಗೂಡಿಸಿ ಸಿನಿಮಾ ಮುಗಿಸಿಬಿಟ್ಟಿದ್ದಾರೆ ಬೋನಿ ಕಪೂರ್.
Kareena Kapoor, Shahid Kapoor
IFM


ಶಾಹಿದ್ ಹಾಗೂ ಕರೀನಾ ಇಬ್ಬರೂ ಪಕ್ಕಾ ಪ್ರೊಫೆಷನಲ್ ಆದರೂ ತಮ್ಮ ನಡುವಿನ ವಿರಸದಿಂದಾಗಿ ಈ ಚಿತ್ರ ಮುಗಿಸಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಹಾಗಾಗಿ ಈ ಚಿತ್ರದ ಪ್ರಚಾರಕ್ಕಾಗಿ ಇಬ್ಬರೂ ಜೊತೆಯಲ್ಲಿ ಭಾಗವಹಿಸುವುದಂತೂ ಭಾರೀ ಡೌಟು ಎನ್ನುತ್ತವೆ ಮೂಲಗಳು.

ರೊಮ್ಯಾಂಟಿಕ್ ಚಿತ್ರವಾಗಿರುವ ಮಿಲೇಂಗೇ ಮಿಲೇಂಗೇಯನ್ನು ತಾನು ಫೆಬ್ರವರಿ ಮಧ್ಯದಲ್ಲಿ ಬಿಡುಗಡೆ ಮಾಡಲಿದ್ದೇನೆ ಎಂದು ನಿರ್ಮಾಪಕ ಬೋನಿಕಪೂರ್ ತಿಳಿಸಿದ್ದಾರೆ. ಅದು ಖಂಡಿತವಾಗಿಯೂ ಪ್ರೇಮಿಗಳ ದಿನದಂದೇ ಬಿಡುಗಡೆಯಾಗಲಿದೆ ಎಂದು ಬೋನಿ ಅವರನ್ನು ಹತ್ತಿರದಿಂದ ಬಲ್ಲ ಮೂಲಗಳು ಹೇಳುತ್ತಿವೆ. ಅದೇನೇ ಇರಲಿ, ಶಾಹಿದ್ ಕರೀನಾ ಜೋಡಿಯ ಸಿನಿಮಾಕ್ಕಾಗಿ ಸಾಕಷ್ಟು ಪ್ರೇಮಿಗಳು ಕಾಯುತ್ತಿರುವುದಂತೂ ಸತ್ಯ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಾಹಿದ್ ಕಪೂರ್, ಕರೀಾ ಕಪೂರ್, ಮಿಲೇಂಗೇ ಮಿಲೇಂಗೇ, ಬೋನಿ ಕಪೂರ್