ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ಮುನ್ನೋಟ » ಏಪ್ರಿಲ್‌ನಲ್ಲಿ ಸುದೀಪ್ ಅಭಿನಯದ ಫೂಂಕ್-2 ಬಿಡುಗಡೆ (Phoonk II | Ram Gopal Varma | Sudeep | Rann)
ಸಿನಿಮಾ ಮುನ್ನೋಟ
Bookmark and Share Feedback Print
 
Phoonk 2
IFM
ಸುದೀಪ್ ಅಭಿನಯದ ಮತ್ತೊಂದು ಹಿಂದಿ ಚಿತ್ರವೀಗ ತೆರೆಗೆ ಬರಲು ಸಿದ್ಧವಾಗಿದೆ. ರಾಮ್ ಗೋಪಾಲ್ ವರ್ಮಾ ನಿರ್ಮಾಣದ ಮಿಲಿಂದ್ ನಿರ್ದೇಶನದ ಫೂಂಕ್ ಭಾಗ 2 ಚಿತ್ರ ಇದೇ ಏಪ್ರಿಲ್ 9ರಂದು ತೆರೆಗೆ ಬರಲಿದೆ. ಫೂಂಕ್ ಚಿತ್ರದ ಮೂಲಕ ಬಾಲಿವುಡ್ಡಿಗೆ ಕಾಲಿಟ್ಟ ಸುದೀಪ್, ಈಗ ಅದೇ ಫೂಂಕ್ ಚಿತ್ರದ ಎರಡನೇ ಭಾಗದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
Phoonk 2
IFM


ಈ ಸಿನಿಮಾ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿಯೂ ಈಗ ಕೇಳಿ ಬರುತ್ತಿದೆ. ತೆಲುಗಿನಲ್ಲಿ ಆವಹಂ ಹಾಗೂ ತಮಿಳಿನಲ್ಲಿ ಬೊಮ್ಮೈ 2 ಎಂಬ ಹೆಸರಿನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತದೆ ಎಂಬ ಸುದ್ದಿಯೂ ಇದೆ. ಆದರೂ ಶಂಖದಿಂದಲೇ ತೀರ್ಥ ಇನ್ನೂ ಹೊರಬಂದಿಲ್ಲ, ಅರ್ಥಾತ್ ರಾಮ್ ಗೋಪಾಲ್ ವರ್ಮಾ ಈ ಚಿತ್ರದ ಬಗ್ಗೆ ಅಧಿಕೃತವಾಗಿ ಇನ್ನೇನೂ ಪ್ರಕಟಿಸಿಲ್ಲ.

ಆದರೂ ಮೂಲಗಳ ಪ್ರಕಾರ, ಈ ಚಿತ್ರ ಏಪ್ರಿಲ್ 9ರಂದು ಬಿಡುಗಡೆ ಕಾಣಲಿದೆ ಎನ್ನಲಾಗುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆ ಕಂಡಿದ್ದು, ಅದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈವರೆಗೆ ಹೊರಬಂದ ಎಲ್ಲ ಚಿತ್ರಗಳಿಗಿಂತಲೂ ಹೆಚ್ಚು ಭಯ ಹುಟ್ಟಿಸುವ ಚಿತ್ರ ಇದಾಗಿದೆ ಎಂದು ಚಿತ್ರತಂಡ ಹೇಳಿಕೆಯನ್ನೂ ನೀಡಿದೆ. ಈ ಹಿಂದೆ ಬಿಡುಗಡೆಯಾದ ಫೂಂಕ್ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಫೂಂಕ್ ಭಾಗ 2 ಚಿತ್ರ ಹೊರಬರುತ್ತಿದ್ದು, ವರ್ಮಾರ 'ಭಯಭೀತ' ಅಭಿಮಾನಿಗಳಲ್ಲಿ ನೀರೀಕ್ಷೆಯ ಕಿಚ್ಚು ಹತ್ತಿಸಿದೆ.

ಸುದೀಪ್ ಈಗಾಗಲೇ ವರ್ಮಾರ ರಣ್ ಚಿತ್ರದಲ್ಲಿ ನಟಿಸಿದ್ದು, ಸುದೀಪ್ ಅಭಿನಯದ ಬಗ್ಗೆ ಉತ್ತಮ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಬಾಲಿವುಡ್ಡಿನ ಮಂದಿಯೂ ಸುದೀಪ್ ಎಂಬ ದಕ್ಷಿಣದ ಪ್ರತಿಭಾನ್ವಿತ ನಟನ ಬಗ್ಗೆ ಮೆಚ್ಚುಗೆಯಿಂದ ನೋಡಲು ಆರಂಭಿಸಿದೆ. ಅಮಿತಾಬ್ ಬಚ್ಚನ್ ಅವರ ಪಾತ್ರಕ್ಕೆ ಸರಿಸಾಟಿಯಾಗಿ ಚಿತ್ರದಲ್ಲಿ ನಟಿಸಿದ ಹೆಗ್ಗಳಿಕೆಯೂ ಈಗ ಸುದೀಪ್ ಎಂಬ ಕನ್ನಡದ ಹೆಮ್ಮೆಯ ನಟನ ತೆಕ್ಕೆಗೆ ಸೇರಿದೆ. ಅಷ್ಟಾಗಲೇ ಈಗ ಫೂಂಕ್ ಬರಲು ತಯಾರಾಗಿ ನಿಂತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫೂಂಕ್, ಸುದೀಪ್, ರಾಮ್ ಗೋಪಾಲ್ ವರ್ಮಾ, ರಣ್