ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ಪಲ್ ಪಲ್ ದಿಲ್...: ಇದಕ್ಕಿಂತ ಕೆಟ್ಟದ್ದು ಇನ್ನೊಂದಿಲ್ಲ...!
ಸಿನಿಮಾ ವಿಮರ್ಶೆ
Feedback Print Bookmark and Share
 
ಚಿತ್ರ: ಪಲ್ ಪಲ್ ದಿಲ್ ಕೇ ಸಾಥ್

ತಾರಾಗಣ: ಅಜಯ್ ಜಡೇಡಾ, ಮಾಹಿ ಗಿಲ್, ವಿನೋದ್ ಕಾಂಬ್ಳಿ

ನಿರ್ದೇಶನ: ವಿ. ಕೃಷ್ಣ ಕುಮಾರ್

ಇದೊಂದು ಕೆಟ್ಟ ಸಿನಿಮಾ ಎಂದು ಒಂದೇ ವಾಕ್ಯದಲ್ಲಿ ಇದರ ವಿಮರ್ಶೆ ಮುಗಿಸಿ ಬಿಡಬಹುದು. ಮತ್ತೂ ವಿಸ್ತರಿಸಿ ಹೇಳುವುದಾದರೆ ಒಂದು ಸ್ವಲ್ಪ ಹಳೆಯ ಕಥೆ, ನಟನೆಯೇ ಬಾರದ ದೇಹಗಳು ಮತ್ತು ಕೊಂಚ ಕಿವಿಗೆ ಇಂಪು ನೀಡುವ ಸಂಗೀತ -- ಇದನ್ನು ಹೊರತುಪಡಿಸಿ ಚಿತ್ರದಲ್ಲೇನಿದೆ ಎಂದು ಹುಡುಕುವಂತಿಲ್ಲ.

ಕಣ್ಣಲ್ಲಿ ಕಣ್ಣಿಟ್ಟು ಸಾಕುವ ಅಜ್ಜಿ ಮತ್ತು ಆಕೆಯ ಪ್ರೀತಿಯ ಮೊಮ್ಮಗನ ಕಥೆಯಿದು. ಅಜ್ಜಿಯ ಪಾತ್ರವನ್ನು ಸುಷ್ಮಾ ಸೇಠ್ ಹಾಗೂ ಮೊಮ್ಮಗನ ಪಾತ್ರವನ್ನು ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ನಿರ್ವಹಿಸಿದ್ದಾರೆ.
ಅಜಯ್ ಜಡೇಜಾ
IFM

ತಂದೆ-ತಾಯಿಗಳು ಸಾವನ್ನಪ್ಪಿದ ನಂತರ ಶ್ರೀಮಂತ ಅಜ್ಜಿಯ ಆರೈಕೆಯಲ್ಲೇ ಆತ ಬೆಳೆದಿರುತ್ತಾನೆ. ತುಂಬಾ ಆಸ್ಥೆ ವಹಿಸಿ ಯಾವುದರಲ್ಲಿಯೂ ಕೊರತೆಯಾಗದಂತೆ ಅಜ್ಜಿ ಮುದ್ದಾಗಿ ಮೊಮ್ಮಗನನ್ನು ಬೆಳೆಸಿರುತ್ತಾಳೆ. ಆದರೆ ಒಂದು ದಿನ ಕ್ಷುಲ್ಲಕ ಕಾರಣವೊಂದಕ್ಕೆ ಆತುರಪಟ್ಟು ಆತ ಮನೆಯನ್ನೇ ಬಿಟ್ಟು ಹೋಗುತ್ತಾನೆ. ಪ್ರೀತಿಯ ಅಜ್ಜಿಯ ಬಗ್ಗೆ ಯಾವುದನ್ನೂ ಯೋಚಿಸದೆ...

ಈ ಸಂದರ್ಭದಲ್ಲಿ ಶ್ರೀಮಂತ ಅಜ್ಜಿಯಿಂದ ಕೆಲವರು ಲಾಭವನ್ನು ಪಡೆಯಲೆತ್ನಿಸುತ್ತಾರೆ. ಇದಂತೂ ನೋಡುವಾಗ ಹಳೆಯ ದಕ್ಷಿಣ ಭಾರತದ ಸಿನಿಮಾಗಳನ್ನು ನೋಡಿದಂತಾಗುತ್ತದೆ. ಆಕೆಯ ಮೊಮ್ಮಗನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿಕೊಟ್ಟು ತಲೆ ಕೆಡಿಸುತ್ತಾರೆ. ಅಷ್ಟಕ್ಕೇ ಬಿಡದ ಅವರು ಅಜ್ಜಿಯನ್ನು ಕೊಂದು ಭಾರೀ ಆಸ್ತಿಯನ್ನು ಕೊಳ್ಳೆ ಹೊಡೆಯುತ್ತಾರೆ.

ಆಕೆಯ ಪ್ರೀತಿಯ ಮೊಮ್ಮಗನಿಗೆ ವಿಷಯ ತಿಳಿದು ಮನೆಗೆ ವಾಪಸ್ ಬಂದ ಮೇಲೆ ಏನು ನಡೆಯುತ್ತದೆ ಎನ್ನುವಲ್ಲಿ ಚಿತ್ರ ಮುಗಿದಿರುತ್ತದೆ.

ಈ ಚಿತ್ರ 2003ರಲ್ಲೇ ಸಿದ್ಧವಾಗಿತ್ತು. ಆರ್ಥಿಕ ತೊಂದರೆಗಳ ಕಾರಣದಿಂದ ಇದುವರೆಗೂ ತೆರೆ ಕಂಡಿರಲಿಲ್ಲ. ಕೊನೆಗೂ ತೆರೆಗೆ ಅಪ್ಪಳಿಸಿದ್ದರೂ ಕೂಡ ಚಿತ್ರ ನೋಡಲು ಜನರಿಲ್ಲ. ಅಷ್ಟಕ್ಕೂ ನೋಡಬೇಕಾದ ಯಾವುದೇ ದೃಶ್ಯಗಳೂ ಚಿತ್ರದಲ್ಲಿಲ್ಲ.
ಮಾಹಿ ಗಿಲ್
IFM

ಇದು ದಕ್ಷಿಣದ ಸೂಪರ್ ಹಿಟ್ ಚಿತ್ರವೊಂದರ ರಿಮೇಕ್. ಅದರಲ್ಲಿನ ಯಾವುದೇ ಭಾಗವನ್ನೂ ಬದಲಾವಣೆ ಮಾಡಿಕೊಳ್ಳದೇ ಹಾಗೇ ಭಟ್ಟಿ ಇಳಿಸಲಾಗಿದೆ-- ಹಳೆಯ ಚಿತ್ರವನ್ನು ಪ್ರಸಕ್ತ ಕಾಲಕ್ಕೆ ತರುವಾಗ ಅನಿವಾರ್ಯ ಬದಲಾವಣೆ ಮಾಡಬೇಕೆಂಬುದನ್ನೂ ಮರೆತು..!

ಉತ್ತರ ಭಾರತದ ಕೆಲವು ತಾಣಗಳನ್ನು ತೋರಿಸಿರುವ ರೀತಿ ಮತ್ತು ಸಂಗೀತ ನಿರ್ದೇಶಕ ಅಭಿಷೇಕ್ ರಾಯ್‌ರವರ ಕೆಲವು ಕೇಳಬಹುದಾದ ಟ್ಯೂನ್‌ಗಳನ್ನು ಹೊರತುಪಡಿಸಿದರೆ ಚಿತ್ರದಲ್ಲಿ ಪ್ರೇಕ್ಷಕರಿಗೆ ಏನೂ ಸಿಗದು.

ಅಜಯ್ ಜಡೇಜಾರನ್ನು ನಟನೆಯಿಂದ ನಿಷೇಧಿಸಬೇಕು ಎಂದು ಆಗ್ರಹಿಸುವಷ್ಟು ನಿಮಗೆ ಕೋಪ ಬರಬಹುದು -- ನೀವು ಈ ಚಿತ್ರವನ್ನು ನೋಡಿದರೆ. ಅವರದ್ದು ಪೇಲವ ನಟನೆ ಮಾತ್ರವಲ್ಲ, ನಗಲೂ ಬಾರದವರು ಎಂದು ತೆಗಳಬಹುದು. ಪಾತ್ರಕ್ಕೆ ಬೇಕಾದ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸಲು ಅವರು ವಿಫಲರಾಗಿದ್ದಾರೆ.

ಮಾಹಿ ಗಿಲ್ ಇಲ್ಲಿ ನಾಯಕಿ. ಆಕೆಯ ಮೊದಲ ಚಿತ್ರ 'ದೇವ್ ಡಿ' ಅಂದುಕೊಂಡಿದ್ದವರಿಗೆ ಸತ್ಯದರ್ಶನ. ಅದರ ಪಾರೋ ಇದರಲ್ಲಿ ನಟನೆಗೆ ಅವಕಾಶವೇ ಸಿಗದೆ ಪಾರಾಗಿದ್ದಾಳೆ. ದೇವ್ ಡಿ ಅಥವಾ ಗುಲಾಲ್ ಚಿತ್ರಗಳಲ್ಲಿ ಅವಳು ತೋರಿಸಿರುವ ಯಾವುದೇ ಭಾವಗಳನ್ನು ಇಲ್ಲಿ ಹುಡುಕಲು ಹೋದರೆ ತಪ್ಪಾದೀತು.

ಕೆಟ್ಟ ನಟನೆಗೆ ಮತ್ತೊಂದು ಸೇರ್ಪಡೆ ವಿನೋದ್ ಕಾಂಬ್ಳಿ. ನಗು ಬಿಟ್ಟರೆ ಬೇರೇನೂ ಬಾರದ ಇವರಿಂದ ನಟನೆಯನ್ನು ಹೊರ ತೆಗೆಯಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ.

ಕ್ರಿಕೆಟ್ ಸ್ಟಾರ್‌ಗಳು ಹೀರೋಗಳಾಗಿರುವ ಚಿತ್ರಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡದಂತೆ ನಾವು ಸೆನ್ಸಾರ್ ಮಂಡಳಿಗೆ ಕೇಳಿಕೊಳ್ಳಲಿದ್ದೇವೆ ಮತ್ತು ಆ ಮೂಲಕ ನಮ್ಮ ಸಮಯ ಮತ್ತು ಹಣವನ್ನು ಉಳಿಸಬಹುದು ಎಂದು ವಿಮರ್ಶಕರು ಟೀಕಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಜಯ್ ಜಡೇಜಾ, ಮಾಹಿ ಗಿಲ್, ವಿನೋದ್ ಕಾಂಬ್ಳಿ, ಸಿನಿಮಾ