ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ಮೇರಿ ಪಡೋಸನ್ ಚಿತ್ರ ನೋಡದಿರುವುದೇ ಒಳ್ಳೇದು (Meri Padosan is just not welcome)
ಸಿನಿಮಾ ವಿಮರ್ಶೆ
Feedback Print Bookmark and Share
 
IFM
ಬಹುಶಃ ಕೆಲವರಿಗೆ ಚಿತ್ರಕಥೆ ಬರೆಯೋದು ಹೇಗೆ ಅಂತ ಗೊತ್ತೇ ಇರುವುದಿಲ್ಲ. ಪ್ರತಿ ಚಿತ್ರದಲ್ಲಿ ಆರಂಭ, ಮಧ್ಯಂತರ, ಹಾಗೂ ಮುಕ್ತಾಯ ಇರುತ್ತದೆ. ಆದರೆ ಮೇರಿ ಪಡೋಸನ್ ಚಿತ್ರದಲ್ಲಿ ಆರಂಭ, ಮಧ್ಯಂತರ ಇದೆ. ಆದರೆ ಅಂತ್ಯ ಮಾತ್ರ ಕಾಣುವುದೇ ಇಲ್ಲ.

ಚಿತ್ರದ ಕಾನ್ಸೆಪ್ಟ್ ರಿಯಾಲಿಟಿ ಶೋ ಒಂದು ಟಿವಿ ಚಾನಲ್ಲನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು. ನಿರ್ದೇಶಕ ಪ್ರಕಾಶ್ ಸೈನಿ ಹಾಗೂ ಕಥೆಗಾರ ತಾರುಣ್ ತಕ್ಷಯ್ ಯಾಕೋ ಚಿತ್ರದ ಕಥೆಯನ್ನ ಸರಿಯಾಗಿ ಹೆಣೆಯುವಲ್ಲಿ ವಿಫಲರಾಗಿದ್ದಾರೆ ಎಂದು ಚಿತ್ರದ ಆರಂಭದಲ್ಲೇ ಅರಿವಾಗುತ್ತದೆ. ಇದರ ಫಲ. ಚಿತ್ರ ಮುಗಿಯುವ ಮೊದಲೇ ಥಿಯೇಟರ್‌ ಖಾಲಿ ಖಾಲಿ.

ಚಿತ್ರದಲ್ಲಿ ವಿಜು (ಸಂಜಯ್ ಮಿಶ್ರಾ) ಒಬ್ಬ ಕ್ಲರ್ಕ್. ಕವಿತಾ (ಸಾಧಿಕಾ ರಾಂಧವಾ) ಆತನ ಹೆಂಡತಿ. ಆದರೆ ಚಿತ್ರದ ಒಳಗಿರುವ ನಿರ್ದೇಶಕ ಶ್ಯಾಮ್ ಗೋಪಾಲ್ ವರ್ಮಾ (ಸರ್ವಾರ್ ಅಹುಜಾ) ತನ್ನ ಇಬ್ಬರು ಗೆಳೆಯರಾದ ಪ್ರೇಮ್ (ಸ್ನೇಹಲ್ ಧಾಬಿ), ಅಸ್ಲಾಂ (ಖ್ಯಾಲಿ) ಜತೆಗೆ ವಿಜು ನೆರೆಮನೆಗೆ ಬರುವವರೆಗೆ ಎಲ್ಲವೂ ಸರಿಯಾಗಿಯೇ ಇರುತ್ತದೆ. ಶ್ಯಾಂಗೆ ಲೈವ್ ಇಂಡಿಯಾ ಚಾನಲ್ ಕಿರುಚಿತ್ರ ತಯಾರಿಸಲು ನಿರ್ದೇಶಕರಿಗೆ ಆಹ್ವಾನ ನೀಡಿದೆ ಎಂದು ತಿಳಿಯುತ್ತದೆ.

IFM
ಶ್ಯಾಂ ಒಂದು ಉತ್ತಮ ಐಡಿಯಾವನ್ನು ಹೆಣೆದು ಈ ಆಹ್ವಾನದಲ್ಲಿ ತಾನೇ ನಂ.1 ಸ್ಥಾನ ಗಳಿಸಿ ಆಯ್ಕೆಯಾಗಲು ಹವಣಿಸುತ್ತಾನೆ. ಅದೇ ಸಂದರ್ಭ ಪಕ್ಕದ ಮನೆಯಲ್ಲಿ ವಿಜುಗಾಗಿ ಕಾಯುತ್ತಿರುವ ಕವಿತಾಳನ್ನು ನೋಡುತ್ತಾನೆ. ಅವರಿಬ್ಬರ ರೊಮ್ಯಾನ್ಸ್‌ನ್ನು ಚಿತ್ರೀಕರಿಸಲು ನಿರ್ಧರಿಸುತ್ತಾನೆ. ಮುಂದೆ ಏನಾಗುತ್ತದೆ ಅನ್ನೋದಕ್ಕೆ ಚಿತ್ರ ನೋಡಬೇಕಾಗಿಲ್ಲ. ಅದು ನಿಮ್ಮನ್ನು ಇನ್ನೂ ಕನ್‌ಫ್ಯೂಸ್ ಮಾಡಿ ಹಾಕುತ್ತದೆ.

ಆದರೂ, ಚಿತ್ರದಲ್ಲಿ ಸಾಕಷ್ಟು ಜೋಕ್ ಇದ್ದರೂ ನಗಲು ಸಾಧ್ಯವಾಗುವುದಿಲ್ಲ. ಚಿತ್ರದ ಸಂಗೀತವೂ ತುಂಬ ಡಲ್ ಆಗಿದೆ. ಸಂಜಯ್ ಮಿಶ್ರಾ, ಸರ್ವಾರ್ ಅಹುಜಾ ನಟನೆ ಹೊರತುಪಡಿಸಿದರೆ ಚಿತ್ರದ ಎಲ್ಲ ನಟರೂ ಪೇಲವವಾಗಿಯೇ ಅಭಿನಯಿಸಿದ್ದಾರೆ. ಖ್ಯಾಲಿ ಕೆಟ್ಟ ನಟ ಎಂದು ಸಾಬೀತುಪಡಿಸಿದ್ದಾರೆ. ಸಾಧಿಕಾ ಸಿಸಲು ಸಾಧ್ಯವಿಲ್ಲ. ಮುಶ್ತಾಕ್ ಖಾನ್ ಒಕೆ. ಒಟ್ಟಾರೆ ಚಿತ್ರವನ್ನು ನೋಡದಿರುವುದೇ ಉತ್ತಮ ಎಂದು ಹೇಳದೆ ವಿಧಿಯಿಲ್ಲ.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೇರಿ ಪಡೋಸನ್, ಸಾಧಿಕಾ, ತಾರುಣ್ ತಕ್ಷಯ್, ಪ್ರಕಾಶ್ ಸೈನಿ