ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ಮೊದಲರ್ಧ ಸಹಿಸಿಕೊಂಡರೆ 99 ಪಕ್ಕಾ ಮನರಂಜನೆ (Kunal Khemu | Bollywood | movie review | 99 | Soha)
ಸಿನಿಮಾ ವಿಮರ್ಶೆ
Feedback Print Bookmark and Share
 
IFM
ಕಳೆದ ಐದು ಶುಕ್ರವಾರಗಳಲ್ಲಿ ಅಂಥಾ ಹೇಳಿಕೊಳ್ಳುವಂತ ಚಿತ್ರಗಳೇನೂ ಬಿಡುಗಡೆ ಕಾಣಲಿಲ್ಲ. ಈಗ 99 ಹೊರಬಂದಿದೆ. ರಾಜ್ ನಿಧಿಮೋರು ಹಾಗೂ ಕೃಷ್ಣ.ಡಿ.ಕೆ ಅವರುಗಳ ನಿರ್ದೇಶನದ ಈ ಚಿತ್ರ ಹಲವೆಡೆ ತುಂಬ ಉತ್ತಮ ಗಳಿಗೆಗಳನ್ನೂ ಚಿತ್ರದ ಮೂಲಕ ಪ್ರೇಕ್ಷಕನಿಗೆ ನೀಡಿದ್ದಾರೆ. ಈ ಚಿತ್ರದ ಜೀವಾಳವನ್ನು, ನಟರನ್ನು ಗ್ರಹಿಸಲು ಸ್ವಲ್ಪ ಹೆಚ್ಚು ಸಮಯ ಹಿಡಿಯುತ್ತದಾದರೂ, ರಾಜ್ ಹಾಗೂ ಡಿ.ಕೆತಮ್ಮ ಚಿತರದ ಮೂಲಕ ಪ್ರೇಕ್ಷಕರಿಗೆ ಉತ್ತಮ ಸಂದರ್ಭಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಹೇಳಲು ಕಷ್ಟಪಡಬೇಕಾಗಿಲ್ಲ.

ಎರಡನೇ ಗಂಟೆಯಲ್ಲಿ 99 ಚಿತ್ರ ವೇಗವನ್ನು ಪಡೆದುಕೊಳ್ಳುತ್ತದೆ. ಚಿತ್ರದ ಮೊದಲರ್ಧ ಮುಗಿದು ಬ್ರೇಕ್ ನಂತರ ಥಿಯೇಟರಿನ ಲೈಟ್ ಆಫ್ ಆದ ತಕ್ಷಣ ಕಥೆಯಲ್ಲಿ ಬೆಳಕು ಮೂಡುತ್ತದೆ. ಕಥೆ ಓಡುತ್ತದೆ. ಮತ್ತೆ ಥಿಯೇಟರಿನಲ್ಲಿ ಲೈಟುಗಳು ಹೊತ್ತಿಕೊಂಡಾಗ ಅಂದರೆ ಅಂತ್ಯದಲ್ಲಿ ಥಿಯೇಟರಿನಿಂದ ಹೊರಬರುವವರಗೆ ಪ್ರೇಕ್ಷಕನನ್ನು ಚಿತ್ರದಲ್ಲಿ ಮುಳುಗಿಹೋಗುವಂತೆ ಹಿಡಿದಿಡುವನ ಸಾಮರ್ಥ್ಯ ಚಿತ್ರಕ್ಕಿದೆ ಎಂದು ಒಂದೇ ಮಾತಿನಲ್ಲಿ ಹೇಳಬಹುದು. ಆದರೂ ಕಥೆ ಸ್ವಲ್ಪ ಉದ್ದವಾಯಿತು ಅಂತ ಅನಿಸಿದರೂ ತಪ್ಪಿಲ್ಲ. ಆದರೆ ಭಾರೀ ಕುತೂಹಲಗಳನ್ನು ಇಟ್ಟುಕೊಂಡು ಹೋದರೆ ಮಾತ್ರ ನಿರಾಶೆಯಾದೀತು.

IFM
ಕುನಾಲ್ ಖೇಮು ಹಾಗೂ ಸಿರಸ್ ಬ್ರೋಚಾ ಇಬ್ಬರೂ ಮೋಸಗಾರರು. ಅವರಿಬ್ಬರೂ ಅಕ್ರಮ ಸಿಮ್ ಕಾರ್ಡ್ ಡುಪ್ಲಿಕೇಟ್ ಮಾಡುವ ಬ್ಯುಸಿನೆಸ್ ಹೊಂದಿರುತ್ತಾರೆ. ಹೀಗಿರುವಾಗ ಒಂದು ದಿನ ಈ ಇಬ್ಬರೂ ಕಾರು ಕದಿಯಲು ಪ್ರಯತ್ನಿಸುತ್ತಾರೆ. ಕಾರು ಕದ್ದರೂ ಅದು ಆಕ್ಸಿಡೆಂಟಾಗುತ್ತದೆ. ನಿಜವಾಗಿ ಆ ಕಾರು ಒಬ್ಬ ಗ್ಯಾಂಗ್‍‌ಸ್ಟರ್ (ಮಹೇಶ್ ಮಂಜ್ರೇಕರ್) ಗೆ ಸೇರಿದ ಕಾರಾಗಿರುತ್ತದೆ. ಅವರು ಈ ಇಬ್ಬರಿಂದಲೂ ಕಾರಿಗಾದ ನಷ್ಟವನ್ನ ಭರಿಸಿಕೊಡಿ ಎಂದು ಕೇಳುತ್ತಾರೆ.

ಕಥೆ ಮುಂಬೈಯಿಂದ ದೆಹಲಿಗೆ ತಲುಪುವಷ್ಟರಲ್ಲಿ ಬೇಕಾದಷ್ಟು ಪಾತ್ರಗಳು ತೆರೆಯಲ್ಲಿ ಮುಖ ತೋರಿಸಿರುತ್ತವೆ. ರಾಜ್ ಹಾಗೂ ಡಿ.ಕೆ ಅವರ ಮೊದಲ ಚಿತ್ರ ಇದಲ್ಲವಾದರೂ ಬಾಲಿವುಡ್ ಮಟ್ಟಿಗೆ ಇದು ಮೊದಲ ಚಿತ್ರವೇ. ವಿಶೇಷವೆಂದರೆ ಅವರ ತಾಜಾ ಐಡಿಯಾಗಳು ಅವರ ಚಿತ್ರವನ್ನು ಭಿನ್ನವಾಗಿ ತೋರಿಸಿದೆ ಎಂಬುದು ಸ್ಪಷ್ಟ. ಸಿನಿಮಾದಲ್ಲಿ ಕುನಾಲ್ ಖೇಮು, ಹಾಗೂ ಸಿಸರ್ ದಗಾಕೋರರಾಗಿದ್ದರೆ, ಮಹೇಶ್ ಮಂಜ್ರೇಕರ್ ಗ್ಯಾಂಗ್‌ಸ್ಟರ್. ವಿನೋದ್ ಖನ್ನಾ ಮ್ಯಾಚ್ ಫಿಕ್ಸರ್. ಸೋಹಾ ಹೊಟೇಲ್ ಮ್ಯಾನೇಜರ್ ಆಗಿದ್ದು ಪ್ರತಿಯೊಂದು ಪಾತ್ರವೂ ತಾಜಾ ಆಗಿ ಗಮನ ಸೆಳಎಯುತ್ತದೆ ಭಿನ್ನವಾಗಿ ಕಾಣುತ್ತದೆ.

ಇಷ್ಟೆಲ್ಲ ಹೊಗಳಿಕೆ ಈ ಚಿತ್ರಕ್ಕಿದ್ದರೂ ಈ ಚಿತ್ರದ ನಿರ್ದೇಶಕರು ಚಿತ್ರದ ನೆಗೆಟಿವ್‌ಗಳನ್ನೂ ಅರ್ಥಮಾಡಿಕೊಳ್ಳಬೇಕು. ಚಿತ್ರ ಭಯಂಕರ ಬೋರಿಂಗ್ ಆಗಿದೆ ಎಂಬುದೂ ಅಷ್ಟೇ ಸತ್ಯ. ಚಿತ್ರದ ಮೊದಲರ್ಧ ನಿಜ್ಕಕೂ ಪ್ರೇಕ್ಷಕನ ತಾಳ್ಮೆ ಪರೀಕ್ಷೆ ಮಾಡುತ್ತದೆ ಎಂದರೂ ಅತಿಶಯೋಕ್ತಿ ಅಲ್ಲ. ಚಿತ್ರದಲ್ಲಿ ಸಂಗೀತಕ್ಕೆ ಅಷ್ಟು ಮಹತ್ವ ನೀಡಲಾಗಿಲ್ಲ. ರಾಜೀವ್ ರವಿ ಅವರ ಸಿನಿಮಾಟೋಗ್ರಪಿ ಅದ್ಭುತವಾಗಿದೆ. ಸಂಭಾಷಣೆಗಳು ಹರಿತವಾಗಿವೆ. ಚಿತ್ರದ ಟೈಟಲ್ ಕೂಡಾ ವಿನೂತನವಾಗಿ ಆಕರ್ಷಿಸುವುದರಲ್ಲಿ ಸಂದೇಹವೇ ಇಲ್ಲ. ಚಿರಾಗ್ ತೋಡಿವಾಲಾ ಅವರ ಸಂಕಲನವೂ ಚೆನ್ನಾಗಿದೆ. ಎಲ್ಲ ಪಾತ್ರಗಳ ನಟನೆಯೂ ಚೆನ್ನಾಗಿದೆ.

ಕುನಾಲ್ ಖೇಮು ಇನ್ನೂ ಹೆಚ್ಚು ಆತ್ಮವಿಶ್ವಾಸವೃದ್ಧಿಸಿಕೊಂಡವರಂತೆ ಕಾಣುತ್ತಾರೆ. ಹೊಸ ಹೇರ್‌ಸ್ಟೈಲ್ ಕೂಡಾ ಅವರಮ ಮುಖಕ್ಕೆ ಒಪ್ಪುತ್ತದೆ. ಸೋಹಾ ಅಲಿಖಾನ್ ಉತ್ತಮ ನಟಿ ಎಂಬುದನ್ನು ಮತ್ತೆ ಸಾಬೀತುಗೊಳಿಸಿದ್ದಾರೆ. ಸಿರಸ್ ಬ್ರೋಚಾ ಅವರು ತಮಾಷೆಯಾಗಿ ಕಂಗೊಳಿಸುತ್ತಾರೆ. ಒಟ್ಟಾರೆ 99 ಚಿತ್ರ ಒಕೆ. ಯಾವುದೇ ಭರವಸೆಯನ್ನು ಇಟ್ಟುಕೊಳ್ಳದೆ ಮನರಂಜನೆಗೋಸ್ಕರ ಚಿತ್ರವನ್ನು ವೀಕ್ಷಿಸಲು ಹೋಗುವುದದರೆ ಧಾರಾಳವಾಗಿ ಹೋಗಬಹುದು. ಮೊದಲರ್ಧವನ್ನು ಸಹಿಸಿಕೊಂಡರೆ ಚಿತ್ರ ಇಡಿಯಾಗಿ ಇಷ್ಟವಾಗುತ್ತದೆ. ಅದರಲ್ಲೂ ಯುವಜನರಿಗೆ ಈ ಚಿತ್ರ ಉತ್ತಮ ಮನರಂಜನೆ.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 99, ಸಿನಿಮಾ ವಿಮರ್ಶೆ, ಮನರಂಜನೆ, ಸೋಹಾ ಅಲಿಖಾನ್, ಕುನಾಲ್ ಖೇಮು, ಬಾಲಿವುಡ್