ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ತಾರಾ ಪರಿಚಯ » ಅಪ್ರತಿಮ ಸುಂದರಿ ಐಶ್ವರ್ಯಾ ರೈ
ತಾರಾ ಪರಿಚಯ
Feedback Print Bookmark and Share
 
ASHWARYA RAI
WD
ಭುವನಸುಂದರಿ ಹಾಗೂ ಅಭಿನೇತ್ರಿಯಾಗಿ ಜಾಗತಿಕ ಖ್ಯಾತಿ ಗಳಿಸಿರುವ ಐಶ್ವರ್ಯ ರೈ ತನ್ನ 17ನೆಯ ವಯಸ್ಸಿನಲ್ಲಿಯೆ ರೂಪದರ್ಶಿ ಜಗತ್ತಿಗೆ ಕಾಲಿರಿಸಿ ಯಶಸ್ಸನ್ನು ಗಳಿಸಿಕೊಂಡು ಜಾಗತಿಕ ಮನ್ನಣೆ ಗಳಿಸಿರುವಶ್ರೇಷ್ಠ ನಟಿ.

ಐಶ್ವರ್ಯ ಸಹ ಮಂಗಳೂರಿನ ಮಣ್ಣಿನಿಂದಲೇ ಮೇಲೆದ್ದು ಬಂದವಳು, 1973ರ ನವೆಂಬರ್ ಒಂದರಂದು ಮಂಗಳೂರಿನಲ್ಲಿ ಕೃಷ್ಣರಾಜ್-ವೃಂದಾ ರೈ ದಂಪತಿಗಳ ಮಗಳಾಗಿ ಜನಿಸಿದ ಐಶ್ವರ್ಯ್ ಬಾಲ್ಯದಿಂದಲೂ ಬೆಳೆದದ್ದು ಮಾತ್ರ ಭಾರತದ ಖ್ಯಾತ ವಾಣಿಜ್ಯ ನಗರಿ ಮುಂಬೈನಲ್ಲಿ.

ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ಆರ್ಯ್ ವಿದ್ಯಾ ಮಂದಿರದಲ್ಲಿ ತನ್ನ ಶಾಲಾ ದಿನಗಳನ್ನು ಕಳೆದ ಐಶ್ವರ್ಯ, ಪದವಿ ಶಿಕ್ಷಣವನ್ನು ಡಿ.ಜಿ ರೂಪಾರೆಲ್ ಕಾಲೇಜ್‌ನಲ್ಲಿ ಪೂರೈಸಿಕೊಂಡರು. 1994ರಲ್ಲಿ ವಿಶ್ವಸುಂದರಿ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡು ಜಗತ್ತಿನ ಗಮನ ಸೆಳೆದ ಐಶ್ವರ್ಯ್, ಮೂರು ವರ್ಷಗಳ ನಂತರ ಚಿತ್ರ ಜಗತ್ತಿಗೂ ಕಾಲಿರಿಸಿದರು.

ಐಶ್ವರ್ಯ್ ಅಭಿನಯಿಸಿದ ಮೊದಲ ಚಿತ್ರ ತಮಿಳು , ಭಾರತೀಯ ಚಿತ್ರ ರಂಗಕ್ಕೆ ಅತ್ಯುತ್ತಮ ಚಿತ್ರಗಳ ಕಾಣಿಕೆ ನೀಡುತ್ತಿರುವ ಪ್ರಖ್ಯಾತ ನಿರ್ದೇಶಕ ಮಣಿರತ್ನಂ, ಐಶ್ವರ್ಯ ಅವರನ್ನು ಚಿತ್ರ ಜಗತ್ತಿಗೆ ಪರಿಚಯಿಸಿದ ಮೊದಲ ನಿರ್ದೇಶಕ. 1997ರಲ್ಲಿ 'ಇರುವರ್' ಎನ್ನುವ ತಮಿಳು ಚಿತ್ರದ ಮೂಲಕ ತನ್ನ ಅದೃಷ್ಟವನ್ನು ಪರೀಕ್ಷಿಸಿಕೊಂಡು, ಆರಂಭಿಕ ಏಳುಬೀಳಿನ ನಂತರ ಇದೀಗ ಬಾಲಿವುಡ್ ಚಿತ್ರ ಜಗತ್ತಿನಲ್ಲಿ ಇದೀಗ ಭದ್ರಬುನಾದಿಯ ಹಾಕಿಕೊಂಡಿರುವ ಐಶ್ವರ್ಯ ಬಹು ಬೇಡಿಕೆಯ ತಾರೆ.

ರಾಹುಲ್ ರವೈಲ್ ನಿರ್ದೇಶನದ ಐಶ್ವರ್ಯಳ ಮೊದಲ ಹಿಂದಿ ಚಲನಚಿತ್ರ 'ಔರ್ ಪ್ಯಾರ್ ಹೋಗಯಾ' ಬಾಕ್ಸ್ ಆಫಿಸ್‌ನಲ್ಲಿ ದಯನೀಯ ಸೋಲನ್ನು ಕಂಡಾಗ ಐಶ್ವರ್ಯಳಿಗೆ ಚಿತ್ರ ಜಗತ್ತಿನಲ್ಲಿ ಭವಿಷ್ಯವಿಲ್ಲ, ಆಕೆ ಏನಿದ್ದರೂ ಮಾಡೆಲ್ ಜಗತ್ತಿಗೆ ಹೇಳಿ ಮಾಡಿಸಿದ ಸೌಂದರ್ಯವತಿ ಎಂದು ಚಿತ್ರ ವಿಮರ್ಷಶಕರು ಐಶ್ವರ್ಯ್‌ಳನ್ನು ಕಟುವಾಗಿ ಟೀಕಿಸಿದ್ದರು.

ಟೀಕಾಕಾರರ ಟೀಕೆಗಳನ್ನು ತನ್ನ ನೊಂದ ಮಡಿಲಿನಲ್ಲಿ ಹಾಕಿಕೊಂಡೆ ಸಮಾಧಾನ ಚಿತ್ತದಿಂದ ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ 'ಹಮ್ ದಿಲ್ ದೇ ಚುಕೆ ಸನಮ್'ನಲ್ಲಿ ಮನೋಜ್ಞವಾಗಿ ಅಭಿನಯಿಸಿ ಮತ್ತೆ ಯಶಸ್ಸಿನ ಕೀರ್ತಿಯ ಉತ್ತುಂಗವನ್ನೇರಿದರು.ಐಶ್ ಅಭಿನಯಿಸಿದ 'ತಾಲ್', 'ಜೋಷ್' 'ಗುರು' 'ದೇವದಾಸ್' 'ಧೂಮ್-2' ಚಿತ್ರಗಳ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆಯನ್ನೆ ಸೃಷ್ಟಿಸಿವೆ.