ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಕಿರುತೆರೆ » ನಿಕ್‌ ವಾಹಿನಿಯಲ್ಲಿ 'ಲಿಟಲ್ ಕೃಷ್ಣ' ಆನಿಮೇಶನ್ ದಾರಾವಾಹಿ (Nick | TV | Little Krishna | BIG Animation production | ISKCON)
ಕಿರುತೆರೆ
Feedback Print Bookmark and Share
 
WD
ಪುಟಾಣಿ ಶ್ರೀಕೃಷ್ಣ ಇನ್ನು ಕೇವಲ ಮಕ್ಕಳನ್ನಷ್ಟೇ ಅಲ್ಲ, ಎಲ್ಲ ವರ್ಗದವರ ಮನ ಮೆಚ್ಚಿಸಲು 'ನಿಕ್‌'ನಲ್ಲಿ ಬರಲಿದ್ದಾನೆ. ತನ್ನ ತುಂಟಾಟ, ಪೋಕರಿತನ, ಕಳ್ಳಾಟ, ಸಾಹಸಗಳಿಂದ ಎಲ್ಲರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಬಿಗ್ ಆನಿಮೇಶನ್ ಪ್ರೊಡಕ್ಷನ್ ಅವರ ಆನಿಮೇಶನ್ ಸರಣಿ 'ಲಿಟಲ್ ಕೃಷ್ಣ' (ಬಾಲ ಶ್ರೀಕೃಷ್ಣ) ಇನ್ನು ಮಕ್ಕಳ ಮನರಂಜನಾ ಚಾನಲ್ 'ನಿಕ್'ನಲ್ಲಿ ಪ್ರಸಾರಗೊಳ್ಳಲಿದ್ದು, ಇದರಿಂದ ಪ್ರೇಕ್ಷಕ ಬಳಗ ಮಕ್ಕಳಿಂದಾಚೆಗೂ ವಿಸ್ತರಿಸಲಿದೆ.

ಲಿಟಲ್ ಕೃಷ್ಣ ಆನಿಮೇಶನ್ ಸರಣಿ ಕೇವಲ ಮಕ್ಕಳಲ್ಲದೆ, ಕುಟುಂಬವನ್ನೇ ಆಕರ್ಷಿಸುತ್ತದೆ. ಮಕ್ಕಳೊಂದಿಗೆ ಮಕ್ಕಳ ಕುಟುಂಬವನ್ನೇ ಆಕರ್ಷಿಸಲು ಲಿಟಲ್ ಕೃಷ್ಣ ಸರಣಿಯನ್ನು ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ಶ್ರೀಕೃಷ್ಣನ ಬಾಲಲೀಲೆಗಳನ್ನು ಇಷ್ಟಪಡದವರು ಯಾರೂ ಇಲ್ಲ. ಮಕ್ಕಳು, ಹೆತ್ತವರು, ಅಜ್ಜ- ಅಜ್ಜಿ ಹೀಗ ಎಲ್ಲ ವಯೋಮಾನವನ್ನು ಈ ದಾರಾವಾಹಿ ಸೆಳೆಯುವುದರಲ್ಲಿ ಸಂದೇಹವೇ ಇಲ್ಲ ಎಂದು ಬಿಗ್ ಆನಿಮೇಷನ್ ಪ್ರೊಡಕ್ಷನ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಶಿಶ್.ಎಸ್.ಕೆ ಹೇಳುತ್ತಾರೆ.

ಆನಿಮೇಶನ್‌ನ್ನು ಬಹಳಷ್ಟು ಮಂದಿ ಮಕ್ಕಳ ಮನರಂಜನೆಗಾಗಿ ಅಂದುಕೊಳ್ಳುತ್ತಾರೆ. ಆದರೆ, ಆನಿಮೇಶನ್ ಖಂಡಿತ ಹಾಗಲ್ಲ. ಈಗಷ್ಟೇ ಆನಿಮೇಶನ್ ಟ್ರೆಂಡ್ ಭಾರತದಲ್ಲಿ ಆರಂಭವಾಗಿರುವುದರಿಂದ ಜನರ ಮನೋಸ್ಥಿತಿ ಬದಲಾಗಬೇಕು ಎಂದರು.

WD
ಲಿಟಲ್ ಕೃಷ್ಣ ಆನಿಮೇಶನ್ ಸರಣಿಯಲ್ಲಿ 13 ಎಪಿಸೋಡ್‌ಗಳಿವೆ. ಪ್ರತಿ ಎಪಿಸೋಡ್‌ನಲ್ಲೂ ಶ್ರೀಕೃಷ್ಣ ಬಾಲಕನಾಗಿರುವಾಗಿನ ಸಾಹಸಕಥೆಗಳಿವೆ. ಇದು ಮೇ 11ರಂದು ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಲಭ್ಯವಿವೆ. ಬಿಗ್ ಆನಿಮೇಶನ್ ಪ್ರೊಡಕ್ಷನ್ ಹಾಗೂ ಇಂಡಿಯನ್ ಹೆರಿಟೇಜ್ ಫೌಂಡೇಶನ್ ಜತೆಯಾಗಿ ಇದನ್ನು ಹೊರತಂದಿದ್ದು, ಬೆಂಗಳೂರಿನ ಇಸ್ಕಾನ್ ಪ್ರಚಾರಕ್ಕೆ ತರುತ್ತಿದೆ.

ನಿಕ್ ಚಾನಲ್‌ನ ಹಿರಿಯ ಉಪಾಧ್ಯಕ್ಷೆ ನೀನಾ ಎಲಾವಿಯಾ ಜೈಪುರಿಯಾ ಮಾತನಾಡುತ್ತಾ, ಈ ಸರಣಿ ಪ್ರಸಾರದ ಮೂಲಕ ಮಕ್ಕಳಲ್ಲದೆ ಎಲ್ಲ ವಯೋಮಾನವನ್ನೂ ಆಕರ್ಷಿಸುವ ನಿರೀಕ್ಷೆಯಿದೆ. ಶ್ರೀಕೃಷ್ಣನ ತುಂಟಾಟ, ಹೀರೋಯಿಸಂ, ಸಾಹಸ, ಸಂಗೀತ ಎಲ್ಲವೂ ಈ ಸರಣಿಯಲ್ಲಿ ಮೇಳೈಸಲಿದೆ. ಇದು ಮಕ್ಕಳನ್ನು ಮಾತ್ರವಲ್ಲದೆ ಎಲ್ಲರನ್ನೂ ಆಕರ್ಷಿಸುವಂತಿದೆ. ಅಲ್ಲದೆ ವಿಶ್ವದರ್ಜೆಯ ಆನಿಮೇಶನ್ ಮೂಲಕ ಈ ಸರಣಿಯನ್ನು ತಯಾರಿಸಲಾಗಿದೆ ಎಂದರು.

ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30 ಹಾಗೂ 9.30ಕ್ಕೆ ನಿಕ್ ಚಾನಲ್‌ನಲ್ಲಿ ಈ ಲಿಟಲ್ ಕೃಷ್ಣ ಸರಣಿ ಪ್ರಸಾರವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರೀಕೃಷ್ಣ, ಆನಿಮೇಶನ್, ನಿಕ್, ಮಕ್ಕಳ ಮನರಂಜನೆ