ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಕಿರುತೆರೆ » ನ್ಯೂಸ್‌ಎಕ್ಸ್‌ನಲ್ಲಿ ವಿಶೇಷ ಟಿ20 ವಿಶ್ವಕಪ್ ಎಟ್ ಸ್ಟಂಪ್ಸ್ (NewsX | HDTV | 20 World Cup | At Stumps)
ಕಿರುತೆರೆ
Feedback Print Bookmark and Share
 
ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಕುತೂಹಲಕಾರಿ ಟಿ20 ವಿಶ್ವಕಪ್ ಕ್ರಿಕೆಟ್ ಹಣಾಮಣಿಯನ್ನು ನೀವಿನ್ನು ನಿಮ್ಮ ಲಿವಿಂಗ್ ರೂಮಿನಲ್ಲೇ ಕೂತು ಆಸ್ವಾದಿಸಬಹುದು. ಭಾರತದ ಏಕೈಕ ಎಚ್‌ಡಿಟಿವಿ ಎಂಬ ಹೆಗ್ಗಳಿಕೆಯ ಇಂಗ್ಲೀಷ್ ನ್ಯೂಸ್ ಚಾನಲ್ ನ್ಯೂಸ್‍‌ಎಕ್ಸ್ ಎಟ್ ಸ್ಟಂಪ್ಸ್ ಎಂಬ ಕಾರ್ಯಕ್ರಮದಲ್ಲಿ ಕ್ರಿಕೆಟ್ ನೇರಪ್ರಸಾರದೊಂದಿಗೆ ವಿಶ್ಲೇಷಣೆಯನ್ನೂ ನೀಡುತ್ತಿದೆ.

ನ್ಯೂಸ್ ಎಕ್ಸ್ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಮುಖರ್ಜಿ ಹೇಳುವಂತೆ, ನ್ಯೂಸ್‌ಎಕ್ಸ್ ಚಾನಲ್‌ನಲ್ಲಿ ಜಾಗತಿಕ ಕ್ರೀಡಾ ವರದಿಯನ್ನು ವಿಶೇಷ ಮಾದರಿಯಲ್ಲಿ ನೀಡುತ್ತೇವೆ. ಸುದ್ದಿಯ ಜತೆಗೇ ವಿಶ್ಲೇಷಣೆ ಕೂಡಾ ನಮ್ಮ ವಿಶೇಷತೆ. ಎಟ್ ಸ್ಟಂಪ್ಸ್ ಕಾರ್ಯಕ್ರಮದಲ್ಲಿ ವಿಶೇಷ ಮುಖಾಮುಖಿ ಕಾರ್ಯಕ್ರಮವೂ ಪ್ರಸಾರವಾಗುತ್ತದೆ. ಅಲ್ಲದೆ, ಆ ಕಾರ್ಯಕ್ರಮದಲ್ಲಿ ಇಂಗ್ಲೆಡಿನಿಂದ ನೇರವಾಗಿ ಖ್ಯಾತ ಕ್ರೀಡಾ ತಜ್ಞ ಫಾರುಕ್ ಎಂಜಿನಿಯರ್ ಭಾಗವಹಿಸುತ್ತಿದ್ದಾರೆ ಎಂದರು.

ಎಟ್ ಸ್ಟಂಪ್ಸ್ ಕಾರ್ಯಕ್ರಮ ಇನ್ನೊಂದು ವಿಶೇಷತೆ ಎಸ್‌ಎಂಎಸ್ ಸ್ಪರ್ಧೆ. ವೀಕ್ಷಕರು ನೇರವಾಗಿ ಸ್ಟುಡಿಯೋ ತಜ್ಞರಿಗೆ ತಮ್ಮ ಪ್ರಶ್ನೆಗಳನ್ನು ಸಂಶಯಗಳನ್ನು ಕೇಳಬಹುದು. ಉತ್ತಮ ಪ್ರಶ್ನೆಗಳನ್ನು ಹೆಕ್ಕಿ ತೆಗೆದು ಉತ್ತರ ಹೇಳಲಾಗುತ್ತದೆ. ಇದರಿಂದ ವೀಕ್ಷಕರೂ ನೇರವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸಿಕ್ಸ್‌ಗಳು, ಬೌಂಡರಿಗಳು, ಗ್ರಾಫಿಕ್ ಸ್ಕೋರ್ ಬೋರ್ಡ್‌ಗಳು, ಮ್ಯಾನ್ ಆಫ್ ದಿ ಮ್ಯಾಚ್ ಮತ್ತಿತರ ಪ್ರತ್ಯೇಕ ಹೈಲೈಟ್ ಪ್ರಸಾರಗಳು ಇರುತ್ತವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನ್ಯೂಸ್ಎಕ್ಸ್, ಕ್ರಿಕೆಟ್, ಟ್ವೆಂಟಿ20 ವಿಶ್ವಕಪ್