ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಟಿ ತಾರಾ ಮರಳಿ ಕಿರುತೆರೆಗೆ
ಸುದ್ದಿ/ಗಾಸಿಪ್
Feedback Print Bookmark and Share
 
ಬಾಲ ನಟಿಯಾಗಿ ತೆರೆಗೆ ಬಂದ ತಾರಾ ಕನ್ನಡ ಸಿನಿಮಾ ರಂಗ ಕಂಡ ಅದ್ಬುತ ಪ್ರತಿಭೆ. ಒಂದು ಕಾಲದಲ್ಲಿ ಮೂಲೆಗುಂಪಾಗಿದ್ದ ತಾರಾಳಿಗೆ ರಾಷ್ಟ್ತ್ರ ಪ್ರಶಸ್ತಿ ಸಿಕ್ಕ ತರುವಾಯ ತಾರಾಬಲ ಒಮ್ಮೆಲೇ ಏರಿದಂತಾಗಿದೆ.

ಬೆಳ್ಳಿ ತೆರೆಯಲ್ಲಿ ಮೊದ ಮೊದಲಿಗೆ ಬರೀ ಪೋಷಕ ಪಾತ್ರದಿಂದಷ್ಟೇ ಗುರ್ತಿಸಿಕೊಂಡಿದ್ದ ತಾರಾ ಒಮ್ಮೆಲೇ ಅದೃಷ್ಠದ ಏಣಿ ಏರಿ ಗಗನ ಮುಟ್ಟಿದ್ದು ಹಳೇ ಗಾಂಧಿನಗರದ ಬೀದಿ ಬೀದಿಗಳಲ್ಲಿ ಮನೆ ಮಾತಾಗಿದೆಯಂತೆ.

ಅಂದಹಾಗೆ ತಾರಾ ನಡೆದು ಬಂದ ಹಾದಿಯೇ ವಿಚಿತ್ರ. ಕಮರ್ಷಿಯಲ್ ಚಿತ್ರಗಳಿಂದ ಆರ್ಟ ಫಿಲಂನೆಡೆಗೆ ವಾಲಿದ ತಾರಾ ತನ್ನ ನಟನಾ ಕೌಶಲವನ್ನು ತೋರಲು ಶುರುಮಾಡಿದರು.

ತಾರಾಳ ಬಹು ನೀರೀಕ್ಷೆಯ ಕಾನೂರು ಹೆಗ್ಗಡತಿ ಮತ್ತು ಮುನ್ನುಡಿ ಚಿತ್ರಗಳು ಪ್ರಶಸ್ತಿಯನ್ನು ತರಲಿಲ್ಲವಾದರೂ ಸಹ ಆಕೆಯ ನೈಜ ನಟನೆಯ ಅನುಭವ ಕೊಡಬಲ್ಲ ಆರ್ಟ್ ಫಿಲಂನ ಗೀಳು ಅವಳಿಂದ ಮಾಸಿರಲಿಲ್ಲ ಜೊತೆಗೆ ಕಮರ್ಷಿಯಲ್ ಟಚ್ನ ಕನ್ನಡ ಚಿತ್ರರಂಗದಿಂದ ಬಹಳಷ್ಟು ನೀರೀಕ್ಷೆಯೇನು ಇಟ್ಟುಕೊಂಡಿರಲಿಲ್ಲ.

ಆ ನಿಟ್ಟಿನ ದಿನಗಳಲ್ಲೇ ಗೀರೀಶ್ ಕಾಸರವಳ್ಳಿಯ ಜೊತೆಗೂಡಿ ಹಸೀನಾ ನಿರ್ಮಿಸಿದಾಗ ಗಾಂಧಿನಗರದ ಬೀದಿ ಹುಡಗನಿಂದ ಹಿಡಿದು ಬ್ರೀಫ್ಕೇಸ್ ಮುದುಕರವರೆಗೆ ಯಾರೊಬ್ಬರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.

ಆದರೆ ಆ ಚಿತ್ರ ಇದ್ದಕ್ಕಿದ್ದಂತೆ ಹಿಂದಿ ಜಗತ್ತಿನ ದಿಗ್ಗಜರಾದ ಐಶ್ವರ್ಯರಾಯ್, ರಾಣಿಮುಖರ್ಜಿ, ಕೊಂಕಣ ಸೇನ್ ಅಂತಹವರ ಚಿತ್ರಗಳನ್ನೂ ಮೀರಿ 31 ವರ್ಷಗಳ ಸುಧೀರ್ಘ ಕಾಲಾವಧಿಯ ನಂತರ ಕನ್ನಡ ಚಿತ್ರನಟಿಯೊಬ್ಬಳಿಗೆ ರಾಷ್ಟ್ತ್ರ ಪ್ರಶಸ್ತಿ ತಂದುಕೊಟ್ಟಾಗ ಹುಬ್ಬೇರಿಸದವರಿಲ್ಲ, ಬೆರಗು ಗಣ್ಣು ಬಿಟ್ಟು ನೋಡದವರಿಲ್ಲ.

ಹಸೀನಾ ಚಿತ್ರ ನಿರ್ಮಾಪಕರಾಗಿ, ಅಭಿನೇತ್ರಿಯಾಗಿ ಮೆರೆದ ತಾರಾಳಿಗಿದ್ದ ಒಂದೇ ಒಂದು ಆಸೆಯೆಂದರೆ ತಾನು ನಿರ್ದೇಶಕಿಯಾಗಬೇಕೆನ್ನುವುದು. ಅದೇನೇ ಇರಲಿ ತಾರಾಳ ತಾರಾ ಮೌಲ್ಯ ಇಮ್ಮಡಿಯಾಗಲಿಕ್ಕೆ ಹಾಗೂ ಇಷ್ಟು ದೀರ್ಘ ಕಾಲ ಚಿತ್ರರಂಗದಲ್ಲಿ ಉಳಿಯಬೇಕಾಗಿದ್ದರೆ ಅದಕ್ಕೆ ಅವರ ಪೋಷಕ ಪಾತ್ರಗಳೇ ಕಾರಣವಂತೆ.

ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ತಾರಾ ಇದೀಗ ಬಹು ಭಾಷಾ ನಟಿ ಸಹ. ಕನ್ನಡ ಚಿತ್ರವೊಂದೇ ಅಲ್ಲದೆ ಮಲೆಯಾಳಂ, ತಮಿಳು ಚಿತ್ರಗಳಲ್ಲೂ ಸಹ ತೊಡಗಿಸಿಕೊಂಡಿದ್ದಾಳೆ. ಉತ್ತಮ ಸ್ಕ್ತ್ರಿಪ್ಟ್ ಸಿಕ್ಕರೆ ಮಾತ್ರ ಕನ್ನಡ ಚಿತ್ರದಲ್ಲಿ ನಟಿಸುತ್ತೇನೆಂದು ಹೇಳುವ ತಾರಾ ಅದಕ್ಕಾಗಿ ಎಷ್ಟು ದಿನ ಬೇಕಾದರೂ ಕಾಯಬಲ್ಲೆ ಎನ್ನುತ್ತಾರೆ.

ಖಾಸಗಿ ಟಿ.ವಿ. ಚಾನಲ್ವೊಂದರಲ್ಲಿ ಬಂಗಾರದ ಬೇಟೆಗಳು ಕಾರ್ಯಕ್ರಮ ನಿರೂಪಿಸುತ್ತಿದ್ದ ತಾರಾ ನಿರೂಪಕಿಯಾಗೂ ಸಹ ಹೆಸರು ಮಾಡಿದ್ದರು. ಈಗ ಮತ್ತೊಮ್ಮೆ ಟಿವಿಯಲ್ಲಿ ಮಿಂಚಲಿದ್ದಾರೆ ಅದೂ ನಿರೂಪಕಿಯಾಗಿ.

ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಮತ್ತೊಮ್ಮೆ ಮಿಂಚಲು ಸಿದ್ಧವಾಗಿರುವ ತಾರಾ ಈ ಬಾರಿ ಎಷ್ಟರ ಮಟ್ಟಿಗೆ ಜನರ ಗಮನ ಸೆಳೆಯುತ್ತಾರೋ ಕಾದು ನೋಡಬೇಕು.