ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದಾಖಲೆಯತ್ತ ಕಿಶನ್ ಕುಟುಂಬ...
ಸುದ್ದಿ/ಗಾಸಿಪ್
Feedback Print Bookmark and Share
 
ಕೇರಾಫ್ ಆಫ್ ಫುಟ್ ಪಾತ್ ಚಿತ್ರದ ಮೂಲಕ ಹಲವು ದಾಖಲೆಗಳನ್ನು ಬರೆದ ಮಾಸ್ಟರ್ ಕಿಶನ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಈ ಬಾರಿ ದಾಖಲೆ ಮಾಡುವ ಸರದಿ ಕಿಶನ್ ಕುಟುಂಬದ್ದಾಗಿದೆ.

ವಿಷಯ ಏನಪ್ಪಾ ಅಂದರೆ, ಕಿಶನ್ ತಂದೆ ಶ್ರೀಕಾಂತ್ ಇದೀಗ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಈ ಮೊದಲು ತಾಯಿ ಶೈಲಜಾ ಶ್ರೀಕಾಂತ್ ‘ನೀನಿಲ್ಲದೆ ನಾನಿಲ್ಲ ಕಣೋ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಅಪ್ಪ ,ಅಮ್ಮ ಮತ್ತು ಮಗ ಈ ಮೂವರೂ ನಿರ್ದೇಶಕರಾಗುವ ಮೂಲಕ ಮತ್ತೊಂದು ದಾಖಲೆಯತ್ತ ದಾಪುಗಾಲಿಡುತ್ತಿದ್ದಾರೆ.

ಅಂದಹಾಗೆ ಶ್ರೀಕಾಂತ್ ನಿರ್ದೇಶನದ ನೂತನ ಚಿತ್ರದಲ್ಲಿ ಕಿಶನ್ ನಟಿಸುತ್ತಿದ್ದಾರೆ. ಚಿತ್ರವನ್ನು ಶೈಲಜಾ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೇರ್ ಆಫ್ ಫುಟ್ಪಾತ್, ಮಾಸ್ಟರ್ ಕಿಶನ್, ಶ್ರೀಕಾಂತ್, ಶೈಲಜಾ ಶ್ರೀಕಾಂತ್