ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ವಂಶಿ'ಯ ಗೊಂದಲ ನಿವಾರಣೆ
ಸುದ್ದಿ/ಗಾಸಿಪ್
Feedback Print Bookmark and Share
 
MOKSHA
ವಂಶಿ ಚಿತ್ರದಲ್ಲಿ ಸ್ಪಲ್ಪ ಬದಲಾವಣೆ ಮಾಡಲಾಗಿದೆ. ಕೆಲವು ದೃಶ್ಯಗಳನ್ನು ರೀ ಶೂಟ್ ಮಾಡಿ ಸೇರಿಸಲಾಗಿದೆ. ಹಿಂದೆ ರವಿಚಂದ್ರನ್ ತಮ್ಮ ಏಕಾಂಗಿ ಚಿತ್ರ ಜನರಿಗೆ ಯಾಕೋ ಸರಿಯಾಗಿ ತಲುಪುತ್ತಿಲ್ಲ ಎಂಬ ಕಾರಣಕ್ಕೆ ಅದರ ಮರು ಚಿತ್ರೀಕರಣ ಮಾಡಿದ್ದರು. ವಂಶಿ ಚಿತ್ರದ ವಿಷಯದಲ್ಲೂ ಹಾಗೆಯೇ ಆಗಿದೆ.

ವಂಶಿಚಿತ್ರದ ಕ್ಲೈಮ್ಯಾಕ್ಸ್ ಸುಮಾರು ಐದು ನಿಮಿಷಗಳಷ್ಟು ಹೊಸದಾಗಿ ಸೇರಿಕೊಂಡಿದೆ. ಆದರೆ ಅವೆಲ್ಲಾ ಸುಳ್ಳು ಎನ್ನುತ್ತಾರೆ ನಿರ್ದೇಶಕ ಪ್ರಕಾಶ್. ಕ್ಲೈಮ್ಯಾಕ್ಸ್ ಸ್ವಲ್ಪ ಉದ್ದವಾಗಬಹುದು ಎಂಬ ಕಾರಣಕ್ಕೆ ಒಂದಿಷ್ಟು ಎಡಿಟ್ ಮಾಡಿದ್ದೆವು. ಆದರೆ ಅದು ಬಹಳಷ್ಟು ಜನಕ್ಕೆ ಅರ್ಥವಾಗಲಿಲ್ಲವಂತೆ. ಗೊಂದಲವಾಗುತ್ತಿದೆ ಎಂದು ಬಹಳಷ್ಟು ಜನ ಕಂಪ್ಲೇಂಟ್ ಮಾಡಿದ ಸುದ್ದಿ ಬಂತು.

ಹಾಗಾಗಿ ಪುನೀತ್ ಗಾಯಾಳುವಾಗಿ ಬಿದ್ದ ಮೇಲೆ, ನಂತರ ಆತ ತಾಯಿ ಹಾಗೂ ಹೆಂಡತಿ ಜತೆ ಸಂತೋಷವಾಗಿ ಹೋಗುವ ದೃಶ್ಯಗಳ ಮಧ್ಯೆ ಎರಡು ಶಾಟ್ ಸೇರಿಸಿದ್ದೇವೆ. ಒಂದು ಆತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುವುದು. ಇನ್ನೊಂದು ಆತ ಜೈಲಿನಲ್ಲಿರುವುದು. ಈಗ ಯಾವುದೇ ಗೊಂದಲವಿಲ್ಲ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಕಾಶ್, ವಂಶಿ, ರವಿಚಂದ್ರನ್, ಪುನೀತ್ ರಾಜ್ಕುಮಾರ್