ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗೆಳತಿ ಅನ್ವೇಷಣೆಯ 'ಯೋಗಿ'
ಸುದ್ದಿ/ಗಾಸಿಪ್
Feedback Print Bookmark and Share
 
MOKSHA
ಯೋಗಿಗೆ ಚಿಕ್ಕಂದಿನಲ್ಲಿ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ತನ್ನನ್ನು ತುಂಬಾ ಹಚ್ಚಿಕೊಂಡ ಹುಡುಗಿಯ ಬಗ್ಗೆ ಯೋಗಿಗೂ ಒಂದು ಆತ್ಮೀಯತೆ ಬೆಳೆದಿರುತ್ತದೆ. ಅದೊಂದು ಆಕಸ್ಮಿಕದಲ್ಲಿ ಯೋಗಿ ತನ್ನ ಬಾಲ್ಯದ ಗೆಳತಿಯಿಂದ ದೂರವಾಗುತ್ತಾನೆ. ನಂತರದ ದಿನಗಳಲ್ಲಿ ಆ ಹುಡುಗಿ ಕಾಡಲಾರಂಭಿಸುತ್ತಾಳೆ.

ಯೋಗಿ ಬಾಲ್ಯದ ಗೆಳತಿಯನ್ನು ಹುಡುಕತೊಡಗುತ್ತಾನೆ. ಈ ಬಾಲ್ಯದ ಗೆಳತಿಯ ಹುಡುಕಾಟದ ಕಥೆಗೆ ಚಿತ್ರಕಥೆ ಬರೆದು ಉದಯಪ್ರಕಾಶ್ 'ಯೋಗಿ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ದುನಿಯಾದ ಲೂಸ್ ಮಾದ ಖ್ಯಾತಿಯ ಯೋಗೀಶ್ ನಾಯಕರಾಗಿ ನಟಿಸುತ್ತಿರುವ ಯೋಗಿ ಚಿತ್ರವನ್ನು ಕೆ. ಮಂಜು ನಿರ್ಮಿಸುತ್ತಿದ್ದಾರೆ.

ಚಿತ್ರತಂಡವೀಗ ಗೋಲ್ಕಂಡ ಕೋಟೆಯಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗಿದೆ. ಗೋಲ್ಕಂಡ ಕೋಟೆಯಲ್ಲಿ ಸುಮಾರು 25 ಸಾಹಸ ಕಲಾವಿದರು ಪಾಲ್ಗೊಂಡಿದ್ದ ಅದ್ದೂರಿ ಕ್ಲೈಮ್ಯಾಕ್ಸ್ ಚಿತ್ರಿಸಿದ್ದು, ಇದು ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ನಿರ್ದೇಶಕ ಉದಯ್ ಪ್ರಕಾಶ್ ಹೇಳಿದರು.

ಬೆಂಗಳೂರಿನಲ್ಲಿ 20 ದಿನಗಳ ಚಿತ್ರೀಕರಣ ನಡೆಸಿದರೆ ಮಾತಿನ ಭಾಗದ ಚಿತ್ರೀಕರಣ ಪೂರ್ಣವಾಗುತ್ತದೆ. ಬಿಯಾಂಕಾ ದೇಸಾಯಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಎಮಿಲ್ ಸಂಗೀತ ನಿರ್ದೇಶಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯೋಗೇಶ್, ದುನಿಯಾ, ಲೂಸ್ ಮಾದ, ಕೆಮಂಜು, ಉದಯಪ್ರಕಾಶ್