ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮುರಳಿಯ ಜಿಮ್ ಕಸರತ್ತು...
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡ ಚಿತ್ರರಂಗದಲ್ಲಿ ಸಿಕ್ಸ್ ಪ್ಯಾಕ್ ಟ್ರೆಂಡ್ ಹೆಚ್ಚುತ್ತಿದೆ. ವಿಜಯ್ ಈಗಾಗಲೇ ತಮ್ಮ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ. ಮತ್ತೊಬ್ಬ ಕನ್ನಡದ ಹುಡುಗ ಮುರಳಿ ಕೂಡಾ ಒಂದಷ್ಟು ದಿನ ಚಿತ್ರರಂಗದಿಂದ ದೂರ ಉಳಿದು ಜಿಮ್‌‌ನಲ್ಲಿ ಕಸರತ್ತು ನಡೆಸಿದ್ದರು.

ಎಂ.ಎ.ಆರ್. ರಮೇಶ್ ನಿರ್ದೇಶನದ 'ಮಿಂಚಿನ ಓಟ' ಚಿತ್ರದಲ್ಲಿ ವಿಶಿಷ್ಟ ಗೆಟಪ್‌ನೊಂದಿಗೆ ರೀ ಎಂಟ್ರಿ ಕೊಟ್ಟರು. ಚಿತ್ರ ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸಿತ್ತು. ಈಗ ಮತ್ತೆ ಮುರಳಿ 'ಶಿವಮಣಿ' ಎಂಬ ಚಿತ್ರದ ಮೂಲಕ ತಮ್ಮ ದೇಹಸಿರಿ ಪ್ರದರ್ಶಿಸಲಿದ್ದಾರೆ.
MOKSHA
ಎ.ಆರ್. ಅಮರನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ 'ಶಿವಮಣಿ' ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಕುಲುಮನಾಲಿ, ಮೇಲುಕೋಟೆಯಲ್ಲಿ ಹಾಡಿನ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದು, ಸದ್ಯದಲ್ಲಿಯೇ ರೀರೆಕಾರ್ಡಿಂಗ್ ಕೆಲಸಗಳು ಆರಂಭವಾಗಲಿವೆ. ಸಜನಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ನಟಿ ಶರ್ಮಿಳಾ ಮಾಂಡ್ರೆ ಇಲ್ಲಿ ಮುರಳಿಗೆ ಜೊತೆಯಾಗಿದ್ದಾರೆ. ಗಾಂಧಿ ಸ್ಮೈಲ್ ಚಿತ್ರಕ್ಕೆ ಸಂಗೀತ ನೀಡಿರುವ ವೀರ್ ಸಮರ್ಥ್ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುರಳಿ, ಮಿಂಚಿನ ಓಟ, ಶಿವಮಣಿ, ರಮೇಶ್