ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸರಿಗಮದಲ್ಲಿ ಎಕ್ಸ್‌ಕ್ಯೂಸ್ ಮಿ ಸುನೀಲ್
ಸುದ್ದಿ/ಗಾಸಿಪ್
Feedback Print Bookmark and Share
 
ಸುಮಾರು ಎರಡು ವರ್ಷ ಅಜ್ಞಾತವಾಸ ಅನುಭವಿಸಿದ ಸುನೀಲ್ ರಾವ್ ಈಗ ಮತ್ತೆ ಬಂದಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಸರಿಗಮ ಚಿತ್ರ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ.

ಕನ್ನಡ ಚಿತ್ರರಂಗ ಬಿಟ್ಟು ಎಲ್ಲೂ ಹೋಗಿಲ್ಲ. ಕಲಾವಿದನಾಗಿ, ಗಾಯಕನಾಗಿ ಸ್ವಲ್ಪ ಕಲಿಯುವುದು ಇತ್ತು. ಅದನ್ನು ಮುಗಿಸಿದ್ದೇನೆ. ವೈಯಕ್ತಿಕ ಆಸೆಗಳಿದ್ದವು. ಅವುಗಳೆರಡನ್ನೂ ಪೂರೈಸಿಕೊಂಡು ಎರಡು ವರ್ಷಗಳ ನಂತರ ನಟನೆ ಮಾಡುತ್ತಿದ್ದೇನೆ ಎಂದರು ಸುನೀಲ್.
MOKSHA
ಸರಿಗಮ ಚಿತ್ರದಲ್ಲಿ ಸುನೀಲ್ ರಾವ್ ಮದುವೆಯಾಗಿ ಬೇರೊಬ್ಬಳನ್ನು ಪ್ರೀತಿಸುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ತರ್ಕ ಚಿತ್ರದಲ್ಲಿ ದೇವರಾಜ್ ಜೊತೆ ನಟಿಸಿದ್ದರು. ಈಗ ಅವರ ಮಗ ಪ್ರಜ್ವಲ್ ದೇವರಾಜ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ.

ಎಕ್ಸ್‌ಕ್ಯೂಸ್ ಮಿ, ಪ್ರೀತಿ ಪ್ರೇಮ ಪ್ರಣಯ, ಬಾ ಬಾರೋ ರಸಿಕ ಚಿತ್ರದಲ್ಲಿ ನಟಿಸಿದ್ದರು. ಈ ಮೂರು ಚಿತ್ರಗಳು ಅವರಿಗೆ ಒಳ್ಳೆ ಹೆಸರು ತಂದು ಕೊಟ್ಟಿದ್ದವು. ಮಸಾಲ ಚಿತ್ರದಲ್ಲಿ ಹುಡುಗಿ ವೇಷ ಹಾಕಿ ನಟಿಸಿದ್ದೇ ಇವರ ವೃತ್ತಿ ಜೀವನಕ್ಕೆ ಮುಳುವಾಯಿತು ಎಂದು ಗಾಂಧಿನಗರ ಆಡಿಕೊಳ್ಳಲಾರಂಭಿಸಿತ್ತು. ಈಗ ಸರಿಗಮದ ಮೂಲಕ ತಮ್ಮ ಸೆಕೆಂಡ್ ಇನ್ಸಿಂಗ್ಸ್ ಆರಂಭಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸುನೀಲ್ ರಾವ್, ಸರಿಗಮ, ಎಕ್ಸ್ಕ್ಯೂಸ್ ಮಿ, ಪ್ರೀತಿ ಪ್ರೇಮ ಪ್ರಣಯ, ಬಾ ಬಾರೋ ರಸಿಕ ಸುನೀಲ್ ಕುಮಾರ್ ದೇಸಾಯಿ