ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವರ್ಷಾಗೆ ತಲೆನೋವು ತಂದ 'ಹೈಟ್'
ಸುದ್ದಿ/ಗಾಸಿಪ್
Feedback Print Bookmark and Share
 
ನಟಿ ವರ್ಷಾ ಅಂದು ಸ್ವಲ್ಪ ಬೇಸರದಲ್ಲಿಯೇ ಮಾತನಾಡಿದರು. ಕಾರಣ ಅವರಿರುವ ಎತ್ತರ. ಸುಮಾರು 6 ಅಡಿ ಎತ್ತರವಿರುವ ವರ್ಷಾಗೆ ಅವರ ಎತ್ತರವೇ ಶತ್ರುವಂತೆ. ಈಕೆಗೆ ನಿರ್ದೇಶಕ ರತ್ನಜ ಮೊದಲಿಗೆ ನೆನಪಿರಲಿ ಚಿತ್ರದಲ್ಲಿ ಅವಕಾಶ ನೀಡಿ ಅಕೆಯ ಎತ್ತರವನ್ನು ತಂತ್ರಜ್ಞಾನ ಬಳಸಿ ಹೇಗೋ ಸರಿದೂಗಿಸಿದ್ದರು. ಆದರೆ ನಂತರದ ದಿನಗಳಲ್ಲಿ ಈಕೆಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.

ಈಕೆ ನಾಯಕರ ಹ್ಶೆಟಿಗೆ ಮ್ಯಾಚ್ ಆಗುವುದಿಲ್ಲ ಎಂಬ ಕಾರಣಕ್ಕೆ ಯಾವ ನಿರ್ದೇಶಕ, ನಿರ್ಮಾಪಕರು ಈಕೆಗೆ ಅವಕಾಶ ನೀಡಲಿಲ್ಲ. ಆದರೆ ನವಗ್ರಹ ಚಿತ್ರದಲ್ಲಿ ದರ್ಶನ್ ಕರೆದು ತಮ್ಮ ತಂಗಿಯ ಪಾತ್ರ ಮಾಡುವಂತೆ ಕೇಳಿಕೊಂಡರಂತೆ. ಇಲ್ಲಿ ದರ್ಶನ್ ಹೈಟ್ ಈಕೆಯ ಹೈಟಿಗೆ ಹೊಂದಿಕೊಳ್ಳುವುದರಿಂದ ಅದು ಓಕೆ ಆಯಿತು ಎನ್ನುತ್ತಾರೆ.
MOKSHA
ಆದರೆ ನವಗ್ರಹ ಚಿತ್ರದ ನಂತರ ವರ್ಷಾ ಕೈಯಲ್ಲಿ ಯಾವುದೇ ಚಿತ್ರಗಳಿಲ್ಲ. ಆದರೆ ಈಕೆ ಕೈಕಟ್ಟಿ ಕುಳಿತಿಲ್ಲ. ಕಿರುತೆರೆಯಲ್ಲಿ ನಿರೂಪಣೆ ಜೊತೆಗೆ ರೇಡಿಯೋ ವಾಹಿನಿಯೊಂದರಲ್ಲಿ ಕಾರ್ಯಕ್ರಮ ಕೂಡಾ ನಡೆಸಿಕೊಡುತ್ತಿದ್ದಾರೆ. ನನಗೆ ತಂಗಿ ಪಾತ್ರ ಸಿಕ್ಕರೂ ಅದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ ಎನ್ನುತ್ತಾರೆ ನಟಿ ವರ್ಷಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವರ್ಷಾ, ನೆನಪಿರಲಿ, ನವಗ್ರಹ, ದರ್ಶನ್