ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » '18ನೇ ಕ್ರಾಸ್‌'ನಲ್ಲಿ ದೀಪಕ್
ಸುದ್ದಿ/ಗಾಸಿಪ್
Feedback Print Bookmark and Share
 
ನಟ ದೀಪಕ್ ಈಗ ಚೂಸಿಯಾಗಿದ್ದಾರೆ. ಇತ್ತೀಚೆಗೆ ತೆರೆಕಂಡ ಅವರ ಚನ್ನ ಹಾಗೂ ಬಾ ಬೇಗ ಚಂದಮಾಮ ಚಿತ್ರಗಳು ನೆಲಕಚ್ಚಿದ್ದರಿಂದ ದೀಪಕ್ ಬೇಸತ್ತಿದ್ದಾರೆ. ಆ ಸಮಯದಲ್ಲಿ ಒಟ್ಟು ಚಿತ್ರಗಳನ್ನು ಒಪ್ಪಿಕೊಂಡೆ. ಇನ್ನೂ ಮುಂದೆ ವರ್ಷಕ್ಕೆ ಒಂದೇ ಚಿತ್ರವಾದರೂ ಪರ್ವಾಗಿಲ್ಲ. ಉತ್ತಮ ಬ್ಯಾನರ್ ಹಾಗೂ ಕಥೆ ಇರುವ ಚಿತ್ರಗಳಲ್ಲಿ ಮಾತ್ರ ನಟಿಸುತ್ತೇನೆ ಎನ್ನುತ್ತಾರೆ ದೀಪಕ್.

ಸದ್ಯಕ್ಕೆ ಇವರು ನಟಿಸಿರುವ ದೀನ ಚಿತ್ರ ತೆರೆಗೆ ಸಿದ್ಧವಾಗಿದೆ. ಈ ನಡುವೆ ಹಿಂದೆ ಅರ್ಧಕ್ಕೆ ನಿಂತಿರುವ ಇವರ ಅಭಿನಯದ 18ನೇ ಕ್ರಾಸ್ ಚಿತ್ರ ಮತ್ತೆ ಮರುಜೀವ ಪಡೆದುಕೊಂಡು ರೀ ರೆಕಾರ್ಡಿಂಗ್ ನಡೆಯುತ್ತಿದೆ. ಈ ಚಿತ್ರ ಮಾರ್ಚ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
MOKSHA
18 ನೇ ಕ್ರಾಸ್ ಚಿತ್ರದಲ್ಲಿ ಮೊಗ್ಗಿನ ಮನಸಿನ ರಾಧಿಕಾ ಪಂಡಿತ್ ನಾಯಕಿ. ಈಕೆ ಮೊದಲು ನಟಿಸಲು ಒಪ್ಪಿದ ಚಿತ್ರವಿದು. ಆದರೆ ಕಾರಣಾಂತರಗಳಿಂದ ಇದು ತಡವಾಗಿ ಬಿಡುಗಡೆಯಾಗುತ್ತಿದೆ. ಈಗ ಈಕೆ ಮೊಗ್ಗಿನ ಮನಸಿನ ಯಶಸ್ಸಿನಲ್ಲಿ ಮಿಂದೇಳುತ್ತಿದ್ದಾರೆ. ಪ್ರೇಕ್ಷಕರು ಇವರ ಜೋಡಿಯನ್ನು ಯಾವ ರೀತಿ ಸ್ವೀಕರಿಸುತ್ತಾರೆ ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದೀಪಕ್, ಬಾ ಬೇಗ ಚಂದಮಾಮ, 18ನೇ ಕ್ರಾಸ್, ರಾಧಿಕಾ ಪಂಡಿತ್, ದೀನ