ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸರಿದ ಗೋಡೆ: ಜೊತೆಯಾದ ರಾಮ್-ಪ್ರೇಮ್ (Ashwini Ram Prasad | Prem | Ramya | Jothegara)
ಸುದ್ದಿ/ಗಾಸಿಪ್
Feedback Print Bookmark and Share
 
NRB
ಕೊನೆಗೂ ಅಶ್ವನಿ ರಾಮ್ ಪ್ರಸಾದ್ ಹಾಗೂ ಪ್ರೇಮ್ ನಡುವೆ ಇದ್ದ ಅಡ್ಡಗೋಡೆ ಸರಿದು ನಿಂತಿದೆ. ಆ ಮೂಲಕ ಸಿಂಗುಮಣಿ ನಿರ್ದೇಶನದ ಜೊತೆಗಾರ ಚಿತ್ರ ತೆರೆಗೆ ಬರಲು ಸಿದ್ಧವಾಯಿತು.

ಮಾತು ಮಾತಿಗೆ ಮಾತುಬೆಳೆದು, ಆ ಮಾತಿಗೆ ಮತ್ತೊಂದು ಮಾತು ಸೇರಿಸಿ, ಮಾತು ಬಿಟ್ಟಿದ್ದ ರಾಮ್ ಮತ್ತು ಪ್ರೇಮ್ ಅವರನ್ನು ಒಂದುಗೂಡಿಸುವಲ್ಲಿ ನಟಿ ರಮ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗೆ ನಡೆದರೆ ಚಿತ್ರದ ಮೇಲೆ ಅಡ್ಡ ಪರಿಣಾಮ ಬೀರುವುದು ಖಚಿತ ಎಂದೆಲ್ಲಾ ಹೇಳಿ ಇಬ್ಬರನ್ನು ಅಕ್ಕ ಪಕ್ಕದಲ್ಲಿ ಕೂರಿಸಿದ್ದಾರೆ. ಸಂಧಾನ ಮಾಡಿದ್ದಾರೆ. ಈಗ ಎರಡೂ ಕೈ ಸೇರಿ ಚಪ್ಪಾಳೆಯ ಸದ್ದು ಪ್ರೇಕ್ಷಕರವರೆಗೂ ಕೇಳಿದೆ. ಇದಕ್ಕೆ ಪ್ರೇಕ್ಷಕ ಹೇಗೆ ಪ್ರತಿಕ್ರಿಯಿಸುತ್ತಾನೆ ಕಾದು ನೋಡಬೇಕಿದೆ.

ಚಿತ್ರದಲ್ಲಿ ಆರು ಹಾಡುಗಳಿವೆ. ಹಾಡುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿದೆ. ಎಸಿಪಿ ಪಾತ್ರದಲ್ಲಿ ಅಶೀಷ್ ವಿದ್ಯಾರ್ಥಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಲಕ್ಷ್ಮಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೊತೆಗಾರ, ರಾಮ್ ಪ್ರಸಾದ್, ಪ್ರೇಮ್, ರಮ್ಯಾ, ಸಿಂಗುಮಣಿ