ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಗವಾನ್ ಆದ ಶಿವರಾಜ್ ಕುಮಾರ್ (Bhagavan | Shivaraj Kumar | Remake Cinema | Kannada)
ಸುದ್ದಿ/ಗಾಸಿಪ್
Feedback Print Bookmark and Share
 
NRB
ಶಿವಣ್ಣ ಭಗವಾನ್ ಆಗಲಿದ್ದಾರೆ. ಅಂದರೆ ಮಲೆಯಾಳಂನ ಭಗವಾನ್ ಚಿತ್ರದ ಕನ್ನಡ ಆವತರಣಿಕೆಯಲ್ಲಿ ಶಿವರಾಜ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಈ ಮೊದಲು ರಿಮೇಕ್ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಶಪಥ ಮಾಡಿದ್ದ ಶಿವರಾಜ್ ಕುಮಾರ್, ಈ ಚಿತ್ರದಲ್ಲಿ ನಟಿಸುವ ಮೂಲಕ ತಮ್ಮ ಮಾತನ್ನು ತಾವೇ ಮುರಿಯುತ್ತಿದ್ದಾರಾ ಎಂದು ಪ್ರಶ್ನಿಸಿದರೆ ಈ ಬಗ್ಗೆ ನಾನೇನು ಕಮೆಂಟ್ ಮಾಡಲ್ಲ ಎನ್ನುತ್ತಾರೆ ಅವರು.

ಮಲೆಯಾಳಂನಲ್ಲಿ ಈ ಚಿತ್ರವನ್ನು ಕೇವಲ 17ಗಂಟೆಗಳಲ್ಲಿ ಮುಗಿಸಲಾಗಿತ್ತು. ನಾಯಕನ ಪಾತ್ರದಲ್ಲಿ ಮೋಹನ್ ಲಾಲ್ ಕಾಣಿಸಿಕೊಂಡಿದ್ದರೆ, ನಾಯಕಿಯಾಗಿ ಲಕ್ಷ್ಮಿ ಗೋಪಾಲಸ್ವಾಮಿ ಅಭಿನಯಿಸಿದ್ದರು. ಚಿತ್ರವನ್ನು ಪ್ರಶಾಂತ್ ಮಾಮ್ಬುಲೆ ನಿರ್ದೇಶನ ಮಾಡಿದ್ದರು. ಇದೀಗ ಅದೇ ಚಿತ್ರವನ್ನು ಕನ್ನಡ, ತಮಿಳು, ಮತ್ತು ಹಿಂದಿಯಲ್ಲಿ ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ ನಿರ್ದೇಶಕರು.

ಇದೊಂದು ಕಲಾತ್ಮಕ ಚಿತ್ರವೇನಲ್ಲ. ಚಿತ್ರದಲ್ಲಿ ಹಾಡು, ಫೈಟ್ ಎಲ್ಲವೂ ಇದೆ. ಗೈನೋಕಾಲಜಿಸ್ಟ್ ನಾಯಕ ಮದುವೆ ವಾರ್ಷಿಕೋತ್ಸವ ಸಂಭ್ರಮಕ್ಕಾಗಿ ಆಸ್ಪತ್ರೆಯಿಂದ ಬೇಗನೇ ತೆರಲುವ ಉತ್ಸಾಹದಲ್ಲಿದ್ದಾಗ ಆಸ್ಪತ್ರೆಗೆ ಭಯೋತ್ಪಾದಕರು ನುಗ್ಗಿ ಗೃಹಮಂತ್ರಿಯನ್ನು ಅಪಹರಿಸುತ್ತಾರೆ. ಈ ಸಂದರ್ಭದಲ್ಲಿ ಪಿಸ್ತೂಲ್ ಹಿಡಿದು ಅಲ್ಲಿನ ಜನರನ್ನು ರಕ್ಷಣೆ ಮಾಡುತ್ತಾನೆ ನಾಯಕ. ಇದು ಒಂದು ಗೆರೆಯಲ್ಲಿ ಹೇಳಬಹುದಾದ ಚಿತ್ರದ ಕಥೆ. ಕನ್ನಡದಲ್ಲಿ ಚಿತ್ರವನ್ನು ಒಂದೇ ದಿನದಲ್ಲಿ ಮುಗಿಸಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಗವಾನ್, ಶಿವರಾಜ್ ಕುಮಾರ್, ಮೋಹನ್ ಲಾಲ್, ಕನ್ನಡ, ತಮಿಳು, ಹಿಂದಿ