ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಪುಂಡನಿ'ಗೆ ಮೇಘನಾ ರಾವ್ ನಾಯಕಿ (Kannada film | Haripriya | Meghana Rao's | puneeth raj)
ಸುದ್ದಿ/ಗಾಸಿಪ್
Feedback Print Bookmark and Share
 
ಎಚ್. ವಾಸು ನಿರ್ದೇಶನದ 'ಪುಂಡ' ಚಿತ್ರಕ್ಕೆ ಇದೀಗ ಮೂರನೇ ಬಾರಿ ನಾಯಕಿ ಬದಲಾಗಿದ್ದಾರೆ. ನಾಯಕಿಯಾಗಿ ಸ್ಟಾರ್ ದಂಪತಿ ಸುಂದರ್‌ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾವ್ ಅಭಿನಯಿಸುತ್ತಿದ್ದಾರೆ.

ಈ ಮೊದಲು ಹರಿಪ್ರಿಯಾ ಹೆಸರು ಕೇಳಿ ಬಂದಿತ್ತು. ಬಳಿಕ ಮುಂಬೈನ ಆಕಾಂಕ್ಷಾ ಎಂದು ಗುರುತಿಸಲಾಗಿತ್ತು. ನಂತರ ಏನಾಯ್ತೊ ಗೊತ್ತಿಲ್ಲ. ಇದೀಗ ಅವರಿಬ್ಬರನ್ನು ಬಿಟ್ಟು ಮೇಘನಾ ರಾವ್ ಅವರನ್ನು ಆಯ್ಕೆ ಮಾಡಿದ್ದಾರೆ ನಿರ್ದೇಶಕರು.

ಮೇಘನಾ ರಾವ್‌ಗೆ ಇದೇನು ಹೊಸ ಚಿತ್ರವಲ್ಲ. ಈ ಮೊದಲು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿನ ಬ್ಯುಸಿ ನಟಿ. ಮೇಘನಾ ಅವರನ್ನು ಕನ್ನಡದಿಂದಲೇ ಮೊದಲು ಪರಿಚಯಿಸಬೇಕು ಎಂಬುದು ಅವರ ತಂದೆ-ತಾಯಿ ಆಸೆಯಾಗಿತ್ತು. ಆದರೆ ಸೂಕ್ತ ಅವಕಾಶ ದೊರೆಯದ ಕಾರಣ ತಮಿಳಿನಲ್ಲಿ ಮೊದಲಿಗೆ ಬಣ್ಣ ಹಚ್ಚಿದರು.

ಆಕಾಶ್ ಚಿತ್ರದಲ್ಲಿ ನಟಿಸಲು ಮೇಘನಾಗೆ ಆಫರ್ ಬಂದಿತ್ತಂತೆ. ಆದರೆ ಆಗ ಆಕೆ ಇನ್ನು ಪ್ರೌಢಶಾಲಾ ವಿದ್ಯಾರ್ಥಿನಿ ಎಂದು ಬಿಟ್ಟಿರುವುದಾಗಿ ಸುಂದರ್ ರಾಜ್ ಹೇಳುತ್ತಾರೆ. ಇದೀಗ ಮತ್ತೆ ಕನ್ನಡದಲ್ಲಿ ಉತ್ತಮ ಅವಕಾಶ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹರಿಪ್ರಿಯಾ, ಮೇಘನಾ ರಾವ್, ಪುಂಡ, ಕನ್ನಡ ಸಿನಿಮಾ