ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಸೀದಿಯಲ್ಲಿ ಶೂಟಿಂಗ್ (A M R Ramesh | Cyanide | Police | Kannada Film)
ಸುದ್ದಿ/ಗಾಸಿಪ್
Feedback Print Bookmark and Share
 
A M R Ramesh
MOKSHENDRA
ಎ.ಎಂ.ಆರ್. ರಮೇಶ್ ಯಾವುದೇ ಚಿತ್ರ ನಿರ್ದೇಶನ ಮಾಡಿದರು ಅದು ನೈಜತೆಯಿಂದ ಕೂಡಿರುತ್ತದೆ. ಈ ಹಿಂದೆ ಇವರು ನಿರ್ದೇಶನ ಮಾಡಿದ ಸೈನೈಡ್ ಚಿತ್ರ ಕೂಡ ಅಷ್ಟೆ.. ಈ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ರಾಜೀವ್ ಗಾಂಧಿ ಹತ್ಯೆ ಮಾಡಲು ಹಂತಕರು ಇದ್ದ ಜಾಗಗಳಲೆಲ್ಲ ಚಿತ್ರೀಕರಣ ಮಾಡಿದ್ದರು.

ರಮೇಶ್ ಇಂತಹದ್ದೇ ನೈಜ ಘಟನೆ ಹೊಂದಿರುವ ಮತ್ತೊಂದು ಚಿತ್ರದ ಚಿತ್ರೀಕರಣ ಮಾಡುತ್ತಿದ್ದಾರೆ. ಚಿತ್ರದ ಹೆಸರು ಪೊಲೀಸ್ ಕ್ವಾಟ್ರಸ್. ಈ ಚಿತ್ರದಲ್ಲಿ ಬಾಬರಿ ಮಸೀದಿ ಧ್ವಂಸ ಘಟನೆ ಆಧಾರವಾಗಿಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೂ ಮಸೀದಿಯಲ್ಲಿ ಚಿತ್ರೀಕರಣ ಮಾಡಬೇಕಂತೆ. ಸದ್ಯ ಬಾಬರಿ ಮಸೀದಿ ಘಟನೆ ನಡೆದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಗಲಾಟೆಗಳಾದವೋ ಅಲ್ಲೇ ಚಿತ್ರೀಕರಣ ಮಾಡುತ್ತಿದ್ದಾರಂತೆ. ಮಸೀದಿ ಚಿತ್ರೀಕರಣಕ್ಕಾಗಿ ಅನುಮತಿಗೆ ಮನವಿ ಸಲ್ಲಿಸಿದ್ದಾರಂತೆ. ಪೊಲೀಸ್ ಕ್ವಾಟ್ರಸ್ ಚಿತ್ರಕ್ಕೆ ಪೊಲೀಸ್ ಕ್ವಾಟ್ರಸ್ಸಿನಲ್ಲೇ ಚಿತ್ರೀಕರಣ ಮುಗಿಸಿದ್ದಾರಂತೆ. ಇನ್ನುಳಿದ ಭಾಗದ ಚಿತ್ರೀಕರಣದಲ್ಲಿ ರಮೇಶ್ ತೊಡಗಿದ್ದಾರೆ.

ಚಿತ್ರದಲ್ಲಿ ಇಂತಿ ನಿನ್ನ ಪ್ರೀತಿಯ ನಾಯಕಿ ಸೋನು ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಪೋಲಿ ಹುಡುಗನನ್ನು ಪ್ರೀತಿಸುವ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನ ಪಾತ್ರದಲ್ಲಿ ಅನೀಶ್ ನಟಿಸುತ್ತಿದ್ದಾರೆ. ಈ ಚಿತ್ರ 90ರ ದಶಕದಲ್ಲಿ ನಡೆಯುವ ಕಥೆಯಾದರಿಂದ ಚಿತ್ರದಲ್ಲಿ ಎಲ್ಲೂ ಮೊಬೈಲ್ ಉಪಯೋಗಿಸಿಲ್ಲವಂತೆ. ಚಿತ್ರದಲ್ಲಿ ತೋರಿಸುವ ಎಲ್ಲಾ ವಸ್ತುಗಳು 90ರ ದಶಕದ್ದಾಗಿರುತ್ತದೆಯಂತೆ. ರಮೇಶ್ ಏನೆ ಮಾಡಿದರು ಅದರಲ್ಲಿ ಏನಾದರೊಂದು ವಿಶೇಷತೆ ಇರೋದಂತು ಸತ್ಯ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಸೀದಿ, ಎ ಎಂ ಆರ್ ರಮೇಶ್, ಪೊಲೀಸ್ ಕ್ವಾಟ್ರಸ್, ಸೈನೈಡ್