ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜುಲೈ 31ಕ್ಕೆ ರಾಜ್ ಬಿಡುಗಡೆ (Nisha Kothari | Raj | Puneeth | Prem)
ಸುದ್ದಿ/ಗಾಸಿಪ್
Feedback Print Bookmark and Share
 
Puneeth Rajkumar
MOKSHA
ಅಂತೂ ಇಂತೂ ಪ್ರೇಮ್ ನಿರ್ದೇಶನದ ರಾಜ್ ಚಿತ್ರ ಬಿಡುಗಡೆಯಾಗುವ ದಿನಾಂಕ ನಿಗದಿಯಾಗಿದೆ. ಜುಲೈ 31ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಪ್ರೇಮ್ ಹೇಳಿದ್ದಾರೆ.

ರಾಜ್ ಚಿತ್ರದ ಎರಡು ಹಾಡುಗಳಿಗಿನ್ನೂ ಚಿತ್ರೀಕರಣ ನಡೆಯಬೇಕಿದೆ. ಹಾಡಿನ ಚಿತ್ರೀಕರಣಕ್ಕೆ ಒಂದಲ್ಲಾ ಒಂದು ವಿಘ್ನ ಎದುರಾಗಿದ್ದರಿಂದ ತಡವಾಗಿತ್ತು. ಆದರೆ ಈಗ ಎಲ್ಲಾ ವಿಘ್ನ ದೂರವಾಗಿ ಚಿತ್ರೀಕರಣಕ್ಕೆ ಕೊನೆಗೂ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ.
Nisha Kothari
MOKSHA


ರಾಜ್ ಚಿತ್ರವನ್ನು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಪ್ರೇಮ್ ಯೋಚಿಸಿದ್ದಾರಂತೆ. ಸೂಪರ್ ಡೂಪರ್ ಹಿಟ್ ಚಿತ್ರವಾದ ಜೋಗಿಯನ್ನು ಮಧ್ಯ ರಾತ್ರಿ ಎರಡು ಗಂಟೆಗೆ ಬಿಡುಗಡೆ ಮಾಡಲಾಯಿತು. ಆದರೆ ರಾಜ್ ಚಿತ್ರಕ್ಕೆ ಪ್ರೇಕ್ಷಕರ ಕ್ರೇಜ್ ಹೆಚ್ಚಾಗಿರುವುದರಿಂದ ಮಧ್ಯರಾತ್ರಿ 12 ಗಂಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಹಾಗೆ ಎರಡು ವಾರಕ್ಕೂ ಮುನ್ನ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ ಎಂದು ಪ್ರೇಮ್ ಹೇಳಿದ್ದಾರೆ. ಪ್ರೇಮ್ ಈಗಾಗಲೇ ರಾಜ್ ಚಿತ್ರಕ್ಕೆ ಭಾರೀ ಪಬ್ಲಿಸಿಟಿ ಕ್ರಿಯೇಟ್ ಮಾಡಿದ್ದಾರೆ. ಹಾಗೆ ಚಿತ್ರದ ಹಾಡುಗಳೂ ಹಿಟ್ ಆಗಿವೆ. ಚಿತ್ರ ಹೇಗಿದೆ ಎಂದು ಡಿಸೈಡ್ ಮಾಡಲು ಮುಂದಿನ ತಿಂಗಳು 31ರ ತನಕ ಕಾಯಲೇ ಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಿಶಾ ಕೊಠಾರಿ, ರಾಜ್, ಪುನೀತ್, ಪ್ರೇಮ್