ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಿಡುಗಡೆಯಾಗಲಿರುವ ವೆಂಕಿ (Madhav | Rashmi | Prashant | Venki)
ಸುದ್ದಿ/ಗಾಸಿಪ್
Feedback Print Bookmark and Share
 
Rashmi, Prashant
MOKSHA
ಮಾಧವ್ ನಿರ್ದೇಶನದ ವೆಂಕಿ ಚಿತ್ರ ಕೊನೆಗೂ ಬಿಡುಗಡೆಗೆ ಸಿದ್ಧವಾಗಿದೆ. ಕಾರಣಾಂತರಗಳಿಂದ ಮಾರ್ಚ್ ತಿಂಗಳಿನಲ್ಲೇ ಬಿಡುಗಡೆಯಾಗಿದ್ದ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ವೆಂಕಿ ಚಿತ್ರದಲ್ಲಿ ಪ್ರಶಾಂತ್ ನಾಯಕನಾದರೆ, ನಾಯಕಿಯಾಗಿ ರಶ್ಮಿ ಜೊತೆಯಾಗಿದ್ದಾರೆ. ಇನ್ನೂ ಚಿತ್ರದಲ್ಲಿ ಇಬ್ಬರು ನಿರ್ಮಾಪಕರಿದ್ದಾರೆ. ಸೂರ್ಯಕಾಂತ್ ನಿರ್ಮಾಪಕರಾದರೆ, ಸಹ ನಿರ್ಮಾಪಕರಾಗಿ ಲಕ್ಷ್ಮಿಕುಮಾರ್ ಕಾರ್ಯ ನಿರ್ವಹಿಸಿದ್ದಾರೆ.

ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ನಿರೀಕ್ಷೆಗೂ ಹೆಚ್ಚು ಪಟ್ಟು ಶ್ರಮ ವ್ಯಯಿಸಿದ್ದಾರೆ ನಿರ್ದೇಶಕ ಮಾಧವ್. ಚಿತ್ರದ ಹಾಡುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿರುವುದು ಚಿತ್ರತಂಡಕ್ಕೆ ಕುತೂಹಲ ಹುಟ್ಟಿಸಿದೆ. ಈ ಚಿತ್ರದ ಮೂಲಕ ಪ್ರಶಾಂತ್ ಮತ್ತು ರಶ್ಮಿಗೆ ಒಳ್ಳೆ ಬ್ರೇಕ್ ಸಿಗಲಿದೆ. ಅಲ್ಲದೆ, ಚಿತ್ರ ಖಂಡಿತವಾಗಿ ಹಿಟ್ ಆಗುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ನಿರ್ಮಾಪಕರಾದ ಸೂರ್ಯಕಾಂತ್.

ಚಿತ್ರ ಬಿಡುಗಡೆಯಾಗುವ ಮೊದಲು ಎಲ್ಲಾ ನಿರ್ದೇಶಕ, ನಿರ್ಮಾಪಕರೂ ಹೀಗೆ ಹೇಳೋದು. ಆದರೆ ಚಿತ್ರದ ಬಂಡವಾಳ ಗೊತ್ತಾಗೋದು ಮಾತ್ರ ಚಿತ್ರ ಬಿಡುಗಡೆಯಾದ ಮೇಲಷ್ಟೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾಧವ್, ವೆಂಕಿ, ರಶ್ಮಿ, ಪ್ರಶಾಂತ್